ಆತ್ಮಹತ್ಯೆ ಯತ್ನ ಪ್ರಕರಣ: ಮೈಸೂರು ಶಾಸಕ ರಾಮದಾಸ್ ಖುಲಾಸೆ

ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ನಿರ್ದೋಷಿ ಎಂದು ಕರ್ನಾಟಕ ನ್ಯಾಯಾಲಯ ತೀರ್ಪಿತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್  ನಿರ್ದೋಷಿ  ಎಂದು ಕರ್ನಾಟಕ ನ್ಯಾಯಾಲಯ ತೀರ್ಪಿತ್ತಿದೆ. ಐಪಿಸಿ ಸೆಕ್ಷನ್ 309 ರ ಅಡಿಯಲ್ಲಿ ಒಂದು ವರ್ಷಕ್ಕೆ ವಿಸ್ತರಿಸಬಹುದಾದ ಸಾಮಾನ್ಯ ಜೈಲುಶಿಕ್ಷೆಗೆ ಗುರುಯಾಗಬಹುದಾದ ಅಪರಾಧವಲ್ಲ ಎಂದು ಕೋರ್ಟ್ ತೀರ್ಮಾನಿಸಿದೆ.
ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದರ್ ಫೆಬ್ರವರಿ 11, 2014 ರಂದು ಕುವೆಂಪು ನಗರ ಪೋಲೀಸರು ದಾಕಲ್ಸಿದ್ದ ಪ್ರಕರಣದ ಕುರಿತು ಈ ತೀರ್ಪು ನೀಡಿದ್ದಾರೆ.
ಶ್ರೀರಾಂಪುರದ ಅತಿಥಿಗೃಹವೊಂದರಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಳ್ಳುವ ಮೂಲಕ ರಾಮಾದಾಸ್ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಅವರನ್ನು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.ಈ ಕುರಿತು ದೂರು ದಾಖಲಾಗಿದ್ದು ಫೆಬ್ರವರಿ 2015 ರಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿತ್ತು.
"ವೈದ್ಯರು ಹೇಳಿರುವ ಹಾಗು ನ್ಯಾಯಾಲಯಕ್ಕೆ ಸಲ್ಲಿಸಿರುವ ಸಾಕ್ಷಿಗಳು ರಾಮದಾಸ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನ್ಯುವುದಕ್ಕೆ ಯಾವ ಸಾಕ್ಷಿಯನ್ನೂ ನೀಡುವುದಿಲ್ಲ."ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com