ಜೆಇಇ ಮೈನ್ ಫಲಿತಾಂಶ: 100ಕ್ಕೆ 100 ಪಡೆದ ಬೆಂಗಳೂರು ವಿದ್ಯಾರ್ಥಿ!

ಬೆಂಗಳೂರು ವಿದ್ಯಾರ್ಥಿ 17 ವರ್ಷದ ಕೇವಿನ್ ಮಾರ್ಟಿನ್ ಸೇರಿದಂತೆ ದೇಶಾದ್ಯಂತ 24 ವಿದ್ಯಾರ್ಥಿಗಳು ಜೆಇಇ ಮೈನ್ಸ್‌ನಲ್ಲಿ 100 ಅಂಕ ಪಡೆದಿದ್ದು ಈ ಮೂಲಕ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.
ಕೇವಿನ್ ಮಾರ್ಟಿನ್
ಕೇವಿನ್ ಮಾರ್ಟಿನ್
ಬೆಂಗಳೂರು: ಬೆಂಗಳೂರು ವಿದ್ಯಾರ್ಥಿ 17 ವರ್ಷದ ಕೇವಿನ್ ಮಾರ್ಟಿನ್ ಸೇರಿದಂತೆ ದೇಶಾದ್ಯಂತ 24 ವಿದ್ಯಾರ್ಥಿಗಳು ಜೆಇಇ ಮೈನ್ಸ್‌ನಲ್ಲಿ 100 ಅಂಕ ಪಡೆದಿದ್ದು ಈ ಮೂಲಕ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.
ದಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಈ ಪರೀಕ್ಷೆಯನ್ನು ನಡೆಸಿತ್ತು. ಜಂಟಿ ಪ್ರವೇಶ ಪರೀಕ್ಷೆ(ಜೆಇಇ) ಮೈನ್ಸ್‌ನಲ್ಲಿ ಕುರಿತಂತೆ ಫಲಿತಾಂಶ ಪ್ರಕಟಗೊಂಡಿದೆ. ಜಯನಗರದ ನೆಹರೂ ಸ್ಮಾರಕ ವಿದ್ಯಾಲಯದಲ್ಲಿ 12ನೇ ತರಗತಿಯಲ್ಲಿ ವಿದ್ಯಾಭ್ಯಾಸ ನಡೆಸಿದ್ದ ಕೆವಿನ್ ಮಾರ್ಟಿನ್ ಕರ್ನಾಟಕಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಆನ್ ಲೈನ್ ನಲ್ಲಿ ಎರಡು ಬಾರಿ ಪರೀಕ್ಷೆಯನ್ನು ನಡೆಸಲಾಗಿತ್ತು. ಜನವರಿ 8 ರಿಂದ 12ರವರೆಗೆ ಹಾಗೂ ಏಪ್ರಿಲ್ 7,8,9,10 ಮತ್ತು 12ರಂದು ನಡೆಸಿತ್ತು. ಕೆವಿನ್ ಜನವರಿ ಮತ್ತು ಏಪ್ರಿಲ್ ನಲ್ಲಿ ಎನ್ಟಿಎ ನಡೆಸಿದ್ದ ಪರೀಕ್ಷೆಯಲ್ಲಿ 100 ಅಂಕ ಪಡೆದಿದ್ದಾರೆ. ಇನ್ನು ಕರ್ನಾಟಕದ ಸಿಇಟಿ ಪರೀಕ್ಷೆಗೂ ಕೆವಿನ್ ಹಾಜರಾಗಲಿದ್ದಾರೆ.
ಎನ್ಐಟಿಎಸ್, ಐಐಐಟಿಎಸ್, ಎಸ್ಎಫ್ಟಿಐಎಸ್ ಮತ್ತು ಸಿಎಫ್ಟಿಐಎಸ್ ಪ್ರವೇಶಕ್ಕಾಗಿ ಪದವಿಪೂರ್ವ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಜೆಇಇ ಮೈನ್ಸ್ ಪರೀಕ್ಷೆ ನಡೆಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com