ಸಂಪ್ರದಾಯ ಬದಿಗೊತ್ತಿ ಸಂವಿಧಾನದ ಹೆಸರಿನಲ್ಲಿ ಮದುವೆಯಾದ ಬೆಳಗಾವಿ ಜೋಡಿ!

ದುಬಾರಿ ವೆಚ್ಚ ಮಾಡಿ ಮದುವೆಯಾಗುವವರ ಮಧ್ಯೆ ಬೆಳಗಾವಿಯ ಈ ಜೋಡಿ ಆದರ್ಶವಾಗಿ ನಿಲ್ಲುತ್ತಾರೆ....
ಬೆಳಗಾವಿಯ ಗೀತಾ-ಮಯೂರ್ ದಂಪತಿ
ಬೆಳಗಾವಿಯ ಗೀತಾ-ಮಯೂರ್ ದಂಪತಿ
Updated on
ಬೆಳಗಾವಿ: ದುಬಾರಿ ವೆಚ್ಚ ಮಾಡಿ ಮದುವೆಯಾಗುವವರ ಮಧ್ಯೆ ಬೆಳಗಾವಿಯ ಈ ಜೋಡಿ ಆದರ್ಶವಾಗಿ ನಿಲ್ಲುತ್ತಾರೆ. ಸತ್ಯಶೋಧಕ ಮೂಲಕ ಈ ಜೋಡೆ ಹಸೆಮಣೆ ಏರಿದ್ದಾರೆ. 18ನೇ ಶತಮಾನದಲ್ಲಿ ಸಮಾಜ ಸುಧಾರಕ ಜ್ಯೋತಿರಾವ್ ಫುಲೆ ಜನಪ್ರಿಯಗೊಳಿಸಿದ ಸತ್ಯಶೋಧಕ ವಿಧಾನವಿದು.
ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಬೆಳಗಾವಿಯ ಬಸವನ ಕುಡಚಿಯ ವಧು ಗೀತಾ ಬಾಲಕೃಷ್ಣ ಬೆಡಕ ಮತ್ತು ಬೆಳ್ಗುಂಡಿ ಗ್ರಾಮದ ವರ ಮಯೂರ್ ಹನುಮಂತ್ ನಾಗೇನಹಟ್ಟಿ ಯಾವುದೇ ಸಂಪ್ರದಾಯ, ಶಾಸ್ತ್ರ, ವಿಧಿ-ವಿಧಾನಗಳಿಲ್ಲದೆ, ಅರ್ಚಕರಿಲ್ಲದೆ ಸರಳವಾಗಿ ಕಳೆದ ಶನಿವಾರ ವಿವಾಹವಾಗಿದ್ದಾರೆ.  ಇವರಿಬ್ಬರೂ ಸ್ನಾತಕೋತ್ತರ ಶಿಕ್ಷಣ ಹೊಂದಿದ್ದು ಸತ್ಯ ಮತ್ತು ಅಹಿಂಸೆ ಮೂಲಕ ಬದುಕುವ ತತ್ವವನ್ನು ಅಳವಡಿಸಿಕೊಂಡಿದ್ದಾರೆ. ಮದುವೆ ಕಾರ್ಯಕ್ರಮದ ಸಂಪ್ರದಾಯದಲ್ಲಿ ಸಮಾಜದಲ್ಲಿರುವ ಮೂಢನಂಬಿಕೆಗಳನ್ನು ಹೋಗಲಾಡಿಸಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಶ್ರಮಿಸುವುದಾಗಿ ಮಾತುಕೊಟ್ಟಿದ್ದಾರೆ.
ಸಾಮಾನ್ಯವಾಗಿ ಭಾರತೀಯ ಹಿಂದೂ ಸಂಪ್ರದಾಯದಲ್ಲಿ ಮದುವೆಗೆ ಪ್ರಶಸ್ತಿ ದಿನ, ಮುಹೂರ್ತ ನೋಡುತ್ತಾರೆ. ಆದರೆ ಈ ಜೋಡಿ ಅವುಗಳೆಲ್ಲಾ ಸಂಪ್ರದಾಯ, ಮೂಢನಂಬಿಕೆ ಎಂದು ತಿಳಿದು ಅವುಗಳನ್ನು ಧಿಕ್ಕರಿಸಿ ಮದುವೆಯಾಗಿದ್ದಾರೆ.
18ನೇ ಶತಮಾನದಲ್ಲಿ ಬಾಲ್ಯ ವಿವಾಹ ಮತ್ತು ಸತಿ ಪದ್ಧತಿ ಇದ್ದಾಗ ಜ್ಯೋತಿ ಫುಲೆಯವರು ಸತ್ಯಶೋಧಕ ಸಮಾಜ ನಿರ್ಮಿಸಿ ಹೊಸ ವಿವಾಹ ಪದ್ಧತಿ ಜಾರಿಗೆ ತಂದರು. ಪುಲೆಯವರ ಸತ್ಯಶೋಧಕ ಮದುವೆ ವಿಧಾನದಿಂದ ಪ್ರಭಾವಿತರಾಗಿ ಈ ಜೋಡಿ ಸರಳವಾಗಿ ತಮ್ಮದೇ ಆದ ವಿಧಾನದಲ್ಲಿ ಮದುವೆಯಾಗಿದ್ದಾರೆ.
ಈ ಜೋಡಿ ವಿವಾಹವಾಗುವಾಗ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ತೆಗೆದುಕೊಂಡಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿ ಹತ್ತಿರದ ಬಂಧುಗಳು ಮತ್ತು ಸ್ನೇಹಿತರು ಭಾಗವಹಿಸಿದ್ದರು. ಮಯೂರ್ ಬೆಳಗಾವಿಯ ಪಂಡಿತ್ ನೆಹರೂ ಪಿಯು ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ಎಎನ್ಐಎಸ್ ಸಂಘಟನೆಯ ಸಕ್ರಿಯ ಕಾರ್ಯಕರ್ತ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com