ಬಾಗಲಕೋಟೆ: ರೋಗಿಗಳು ಮಲಗಬೇಕಾದ ಆಸ್ಪತ್ರೆ ಬೆಡ್ ಮೇಲೆ ಬೀದಿ ನಾಯಿಗಳು ಬಂದು ಮಲಗುತ್ತಿದೆ! ಅಚ್ಚರಿ ಆದರೂ ಸತ್ಯ,ಇದು ಬಾಗಲಕೋಟೆ ಜಿಲ್ಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಯೊಂದರ ದುರವಸ್ಥೆ.
ಬಾಗಲಕೋಟೆ ಜಿಲ್ಲೆ ರಾಂಪುರ ಸರ್ಕಾರಿ ಆಸ್ಪತ್ರೆ ಈ ದುಸ್ಥಿತಿಗೆ ತಲುಪಿದೆ. ಇಲ್ಲಿ ಬೀದಿ ನಾಯಿಇಗಳದೇ ಆಟಾಟೋಪ. ರೋಗಿಗಳು ಮಲಗಬೇಕಿದ್ದ ಬೆಡ್ ಗಳ ಮೇಲೆ ತಾವು ಬಂದು ಮಲಗುತ್ತಿದೆ. ಆದರೆ ಇದನ್ನು ಯಾರೊಬ್ಬರೂ ಗಮನಿಸುವುದಕ್ಕೇ ಹೋಗಲ್ಲ.
ಆಸ್ಪತ್ರೆ ಬೆಡ್ ಮೇಲೆ ಚರ್ಮರೋಗಕ್ಕೀಡಾಗಿರುವ ನಾಯಿಗಳು ಮಲಗಿದ್ದರೂ ಆಸ್ಪತ್ರೆ ಸಿಬ್ಬಂದಿ ತಮಗೆ ಸಂಬಂಧವಿಲ್ಲದಂತೆ ಗಮನಿಸದೆ ಓದಾಡುತ್ತಿದ್ದಾರೆ.ಇದಕ್ಕಾಗಿ ಇಲ್ಲಿಗೆ ಚಿಕಿತ್ಸೆಗೆ ಬರಲು ಸಹ ಸಾರ್ವಜನಿಕರು ಭೀತಿಪಡುತ್ತಿದ್ದಾರೆ.
ಈ ಸಂಬಂಧ ಆಸ್ಪತ್ರೆಯ ಸಿಬ್ಬಂದಿಯನ್ನು ಪ್ರಶ್ನಿಸಿದರೆ ಅವರು "ನಾವೇನು ಮಾಡೋಣ?" ಎಂದು ಹಾರಿಕೆಯ ಉತ್ತರ ನೀಡುತ್ತಾರೆ. ಇದರಿಂದ ಸಿಟ್ಟಿಗೆದ್ದಿರುವ ಗ್ರಾಮಸ್ಥರು ಸಿಬ್ಬಂದಿಗಳ ವಿರುದ್ದ ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.