ರಾಜ್ಯ
ರಸ್ತೆ ಅಪಘಾತ: ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸಿ ವಾಪಸ್ ಆಗುತ್ತಿದ್ದ ಮೂವರು ಸ್ವಯಂ ಸೇವಕರು ದುರ್ಮರಣ
ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸಿ ಮನೆಗೆ ವಾಪಾಸ್ ಆಗುತ್ತಿದ್ದ ಮೂವರು ಸ್ವಯಂ ಸೇವಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಕಾರವಾರ: ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸಿ ಮನೆಗೆ ವಾಪಾಸ್ ಆಗುತ್ತಿದ್ದ ಮೂವರು ಸ್ವಯಂ ಸೇವಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಶಿರಸಿ- ಯಲ್ಲಾಪುರ ಹೆದ್ದಾರಿಯಲ್ಲಿ ಟ್ರಕ್ ಮತ್ತು ಕಾರಿನ ನಡುವೆ ಅಪಘಾತ ನಡೆದಿದ್ದು, ಮೃತರನ್ನು ಶಿರಸಿ ಬಳಿಯ ಬೈರುಂಬೆಯ ಮಹಬಲೇಶ್ವರ್ ಹೆಗ್ಡೆ ಸೂರಿಮನೆ (55) ಅವರ ಪತ್ನಿ ಶಾರಾದ (50) ಹಾಗೂ ಮೈಸೂರಿನ ಟ್ರಕ್ ಚಾಲಕ ಟಿ. ರವಿಕುಮಾರ್ ಎಂದು ಗುರುತಿಸಲಾಗಿದೆ.
ಈ ಅಪಘಾತದಲ್ಲಿ ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಯಲ್ಲಾಪುರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೈಸೂರಿನ ರವಿಕುಮಾರ್ ಹಾಗೂ ಆತನ ಗೆಳೆಯರು ಪ್ರವಾಹ ಪೀಡಿತ ಯಲ್ಲಾಪುರ ತಾಲೂಕಿನ ಸಂತ್ರಸ್ತರಿಗೆ ಪರಿಹಾರ ಸಾಮಾಗ್ರಿಗಳನ್ನು ವಿತರಿಸಿ ವಾಪಸ್ ಆಗುತ್ತಿದ್ದಾಗ ಅವರಿದ್ದ ಟ್ರಕ್ ಗೆ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಈ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

