ಹುಬ್ಬಳ್ಳಿಯ ಈ ಪ್ರವಾಹ ಪೀಡಿತ ಜನರಿಗೆ ಹಾವು, ಕ್ರಿಮಿ-ಕೀಟಗಳ ಭಯ!

ಇಲ್ಲಿನ ಉಂಕಲ್ ಸರೋವರದಲ್ಲಿ ಪ್ರವಾಹದಿಂದ ನೀರು ತುಂಬಿ ವಸತಿ ಪ್ರದೇಶಗಳು ಮುಳುಗಿ ಹೋಗಿ ವಾರವೇ ಕಳೆದಿದೆ. ನೀರಿನ ಮಟ್ಟ ಇಂದು ಕಡಿಮೆಯಾಗುತ್ತಿದ್ದರೂ ಕೂಡ ನಿವಾಸಿಗಳು ಮಾತ್ರ ತಮ್ಮ ತಮ್ಮ ಮನೆಗಳಿಗೆ ಹೋಗಲು ಭಯಪಡುತ್ತಿದ್ದಾರೆ.  
ಮನೆಯ ಹೊರಗೆ ಕಾಲ ಕಳೆಯುತ್ತಿರುವ ನಿವಾಸಿಗಳು
ಮನೆಯ ಹೊರಗೆ ಕಾಲ ಕಳೆಯುತ್ತಿರುವ ನಿವಾಸಿಗಳು
Updated on

ಹುಬ್ಬಳ್ಳಿ: ಇಲ್ಲಿನ ಉಂಕಲ್ ಸರೋವರದಲ್ಲಿ ಪ್ರವಾಹದಿಂದ ನೀರು ತುಂಬಿ ವಸತಿ ಪ್ರದೇಶಗಳು ಮುಳುಗಿ ಹೋಗಿ ವಾರವೇ ಕಳೆದಿದೆ. ನೀರಿನ ಮಟ್ಟ ಇಂದು ಕಡಿಮೆಯಾಗುತ್ತಿದ್ದರೂ ಕೂಡ ನಿವಾಸಿಗಳು ಮಾತ್ರ ತಮ್ಮ ತಮ್ಮ ಮನೆಗಳಿಗೆ ಹೋಗಲು ಭಯಪಡುತ್ತಿದ್ದಾರೆ. 


ಹಾವು, ಕ್ರಿಮಿ ಕೀಟಗಳು ಪ್ರವಾಹಕ್ಕೆ ಮನೆಯೊಳಗೆ ಸೇರಿಕೊಂಡಿರುವ ಭಯ ಮತ್ತು ವಿದ್ಯುತ್ ಶಾಕ್ ಹೊಡೆಯಬಹುದು ಎಂಬ ಭೀತಿ ಹುಬ್ಬಳ್ಳಿಯ ದೇವಿನಗರ, ಲಿಂಗರಾಜ ನಗರ, ಗಮಂಗಟ್ಟಿ ರಸ್ತೆ, ವಿದ್ಯಾನಗರ ಮತ್ತು ಕುಮಾರವ್ವಾಸ ನಗರಗಳಲ್ಲಿ ತುಂಬಿಕೊಂಡಿದೆ.
ಮೊನ್ನೆ ಗುರುವಾರದವರೆಗೆ ಇಲ್ಲಿನ ನಿವಾಸಿಗಳು ತಮ್ಮ ಗೃಹೋಪಯೋಗಿ ವಸ್ತುಗಳನ್ನು ಒಣಗಿಸಿಕೊಳ್ಳುವುದರಲ್ಲಿ ನಿರತರಾಗಿದ್ದರು. ಇಂದು ತಮ್ಮ ಮನೆಯೊಳಗೆ ಹೋಗಲು ಹಾವು, ಕ್ರಿಮಿ ಕೀಟಗಳ ಭಯವಿದೆ. ಇನ್ನು ಕೆಲವರು ಸ್ವಿಚ್ ಬೋರ್ಡ್ ಮತ್ತು ವೈರ್ ಗಳಿಂದ ವಿದ್ಯುತ್ ಆಘಾತವಾಗುತ್ತಿದೆ ಎಂದು ಹೇಳುತ್ತಿದ್ದಾರೆ. 


ಉಂಕಲ್ ಕೆರೆಯಲ್ಲಿ ನೀರು ತುಂಬಿ ಹರಿದಿದ್ದರಿಂದ ಸುಮಾರು 150 ಮನೆಗಳಿಗೆ ನೀರು ನುಗ್ಗಿದೆ. ಕಳೆದ ರಾತ್ರಿ ನಾವೆಲ್ಲಾ ಭಯದಿಂದ ಮನೆಯ ಹೊರಗಡೆಯೇ ನಿದ್ದೆ ಮಾಡಿದೆವು ಎನ್ನುತ್ತಾರೆ ದೇವಿನಗರದ ರವಿ ಪಾಟೀಲ್. ಪ್ರವಾಹದಿಂದ ಮನೆಯೊಳಗೆ ಕಸಕಡ್ಡಿ, ಹಾವು, ಕ್ರಿಮಿ ಕೀಟಗಳು ಮನೆಯೊಳಗೆ ನುಗ್ಗಿವೆ. ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆಗೆ ಮಾಹಿತಿ ನೀಡಲಾಗಿದ್ದು ಅಲ್ಲಿಂದ ಪ್ರತಿಕ್ರಿಯೆ ಸಿಗಬೇಕಿದೆ ಎಂದರು. ಈ ಭಾಗದಲ್ಲಿ ಕೆಲವು ಮನೆಗಳಲ್ಲಿ ಇನ್ನೂ ನೀರು ತುಂಬಿಕೊಂಡಿದೆ.


ನಮಗೆ ಸ್ವಿಚ್ ಬೋರ್ಡ್ ಮುಟ್ಟುವಾಗ ಶಾಕ್ ಹೊಡೆಯುತ್ತದೆ, ಇದಕ್ಕೆ ಹೆಸ್ಕಾಂಗೆ ದೂರು ನೀಡಿದ್ದೇವೆ ಎನ್ನುತ್ತಾರೆ ಮತ್ತೊಬ್ಬ ನಿವಾಸಿ. ನಮ್ಮಲ್ಲಿಗೆ ಬರುತ್ತಿರುವ ದೂರುಗಳ ಬಗ್ಗೆ ಗಮನ ಹರಿಸುತ್ತಿದ್ದೇವೆ. ದೂರುಗಳ ಆಧಾರದ ಮೇಲೆ ಪ್ರದೇಶಕ್ಕೆ ಹೋಗಿ ನಮ್ಮ ಸಿಬ್ಬಂದಿ ನೋಡುತ್ತಿದ್ದಾರೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com