ಭೂಕುಸಿತದಿಂದಾಗಿ ಏಳು ರೈಲುಗಳನ್ನು ರದ್ದುಗೊಳಿಸಿದ ನೈಋತ್ಯ ರೈಲ್ವೆ

ಸಕಲೇಶಪುರ-ಸುಬ್ರಮಣ್ಯ ರಸ್ತೆ ಘಾಟ್ ವಿಭಾಗದ ನಡುವೆ ವಿವಿಧ ಸ್ಥಳಗಳಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಮೈಸೂರು ವಿಭಾಗದಲ್ಲಿ ಏಳು ರೈಲುಗಳನ್ನು ರದ್ದುಪಡಿಸುವುದಾಗಿ ನೈಋತ್ಯ ರೈಲ್ವೆ ಪ್ರಕಟಿಸಿದೆ.
ಭೂಕುಸಿತದಿಂದಾಗಿ ಏಳು ರೈಲುಗಳನ್ನು ರದ್ದುಗೊಳಿಸಿದ ನೈಋತ್ಯ ರೈಲ್ವೆ
ಭೂಕುಸಿತದಿಂದಾಗಿ ಏಳು ರೈಲುಗಳನ್ನು ರದ್ದುಗೊಳಿಸಿದ ನೈಋತ್ಯ ರೈಲ್ವೆ
Updated on

ಬೆಂಗಳೂರು: ಸಕಲೇಶಪುರ-ಸುಬ್ರಮಣ್ಯ ರಸ್ತೆ ಘಾಟ್ ವಿಭಾಗದ ನಡುವೆ ವಿವಿಧ ಸ್ಥಳಗಳಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಮೈಸೂರು ವಿಭಾಗದಲ್ಲಿ ಏಳು ರೈಲುಗಳನ್ನು ರದ್ದುಪಡಿಸುವುದಾಗಿ ನೈಋತ್ಯ ರೈಲ್ವೆ (ಎಸ್‌ಡಬ್ಲ್ಯುಆರ್) ಗುರುವಾರ ಪ್ರಕಟಿಸಿದೆ.

ಆಗಸ್ಟ್ 24 ರಂದು ಕಾರವಾರನಿಂದ ಪ್ರಯಾಣ ಪ್ರಾರಂಭಿಸಬೇಕಿದ್ದ ರೈಲು ಸಂಖ್ಯೆ 16516 ಕಾರವಾರ್-ಯಶವಂತಪುರ ಎಕ್ಸ್‌ಪ್ರೆಸ್, ರೈಲು ಸಂಖ್ಯೆ 16518/16524 ಕಣ್ಣೂರು / ಕಾರವಾರ್ - ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರದ್ದುಗೊಂಡಿದೆ. ಆಗಸ್ಟ್ 23 ಮತ್ತು 24 ರಂದು ಕೆಎಸ್‌ಆರ್ ಬೆಂಗಳೂರಿನಿಂದ ಪ್ರಯಾಣ ಪ್ರಾರಂಭಿಸಬೇಕಿದ್ದ ಕೆಎಸ್‌ಆರ್ ಬೆಂಗಳೂರು - ಕಣ್ಣೂರು / ಕಾರ್ವಾರ್ ಎಕ್ಸ್‌ಪ್ರೆಸ್ ರೈಲನ್ನು ರದ್ದುಗೊಳಿಸಲಾಗಿದೆ ಎಂದು ಎಸ್‌ಡಬ್ಲ್ಯುಆರ್ ಪ್ರಕಟಣೆ ತಿಳಿಸಿದೆ. ಆ.25ರ ಯಶವಂತಪುರ - ಮಂಗಳೂರು ಮಾರ್ಗದ ರೈಲು ಕೂಡ ರದ್ದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com