ಆನೆಗೊಂದಿ ಉತ್ಸವ-2020ರ ಲೋಗೊ ಬಿಡುಗಡೆ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿಯಲ್ಲಿ ಜನವರಿ 9 ಮತ್ತು 10ರಂದು ಆಯೋಜಿಸಲು ನಿರ್ಧರಿಸಲಾಗಿರುವ ಆನೆಗೊಂದಿ ಉತ್ಸವ-2020ರ ಲೋಗೋ....
ಲೋಗೋ ಬಿಡುಗಡೆ
ಲೋಗೋ ಬಿಡುಗಡೆ
Updated on

ಗಂಗಾವತಿ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿಯಲ್ಲಿ ಜನವರಿ 9 ಮತ್ತು 10ರಂದು ಆಯೋಜಿಸಲು ನಿರ್ಧರಿಸಲಾಗಿರುವ ಆನೆಗೊಂದಿ ಉತ್ಸವ-2020ರ ಲೋಗೋ (ಲಾಂಛನ) ಮತ್ತು ಶೀರ್ಷಿಕೆಯನ್ನು ಶಾಸಕ ಪರಣ್ಣ ಮುನವಳ್ಳಿ ಅವರು ಬಿಡುಗಡೆ ಮಾಡಿದರು. 

ಬಳಿಕ ನಡೆದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಎರಡು ವೇದಿಕೆ ನಿರ್ಮಾಣ, 49 ಕಾರ್ಯಕ್ರಮ ನೀಡುವುದು, ಗ್ರಾಮಸ್ಥರಿಗೆ ಮನೆ ಸಿಂಗರಸುವ ಸ್ಪರ್ಧೆ, ಆರು ಕಿ.ಮೀ. ಮೆರಾಥಾನ್ ಓಟ, ತೆಪ್ಪದ ಕ್ರೀಡೆ ಸೇರಿದಂತೆ ಗ್ರಾಮೀಣ ಭಾಗದ ಕ್ರೀಡೆಗಳ ಆಯೋಜನೆಗೆ ಒತ್ತು ನೀಡಲಾಯಿತು. 

ಇದೇ ವೇಳೆ ಲೋಗೋದಲ್ಲಿ ಅಂಜನಾದ್ರಿ ಬೆಟ್ಟವನ್ನು ಕಡೆಗಣಿಸಿದ್ದಕ್ಕೆ ವಿವಿಧ ಸಂಘಟನೆಯ ಮುಖಂಡರು ಅಸಮಧಾನ ವ್ಯಕ್ತಪಡಿಸಿದರು. 

ಜನವರಿ 9ರಂದು ಗಾಯಕ ವಿಜಯಪ್ರಕಾಶ್ ಕಾರ್ಯಕ್ರಮ ನಿಗದಿ ಪಡಿಸಲಾಗಿದ್ದು, ಉತ್ಸವಕ್ಕೆ ಸಿನಿತಾರೆಯರಾದ ದರ್ಶನ್, ಯಶ್ ಅವರನ್ನು ಕರೆಯಿಸುವಂತೆ ಸ್ಥಳೀಯರು ಒತ್ತಾಯಿಸಿದರು.

-ಶ್ರೀನಿವಾಸ್ ಎಂ.ಜೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com