ಬೆಂಗಳೂರು: ಬಂಧಿಸಲು ಹೋದಾಗ ಹಲ್ಲೆಗೆ ಯತ್ನ, ರೌಡಿಶೀಟರ್ ಕಾಲಿಗೆ ಗುಂಡಿಕ್ಕಿದ ಪೋಲೀಸರು

ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಕಳೆದ ಐದು ವರ್ಷಗಳಿಂದ ತಲೆತಪ್ಪಿಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್ ನಮೇಲೆ ಫೈರಿಂಗ್ ನಡೆಸಿರುವ ಸಿಲಿಕಾನ್ ಸಿಟಿ ಪೋಲೀಸರು ಕಡೆಗೂ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  
ಡೈನಾಮಿಂಟ್ ಖಲೀಲ್
ಡೈನಾಮಿಂಟ್ ಖಲೀಲ್

ಬೆಂಗಳೂರು: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಕಳೆದ ಐದು ವರ್ಷಗಳಿಂದ ತಲೆತಪ್ಪಿಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್ ನಮೇಲೆ ಫೈರಿಂಗ್ ನಡೆಸಿರುವ ಸಿಲಿಕಾನ್ ಸಿಟಿ ಪೋಲೀಸರು ಕಡೆಗೂ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಕೆ.ಜಿ.ಹಳ್ಳಿ ರೌಡಿಶೀಟರ್ ಡೈನಾಮಿಂಟ್ ಖಲೀಲ್ ಎಂಬಾತನೇ ಬಂಧಿತ ರೌಡಿಶೀಟರ್ ಆಗಿದ್ದು ಜೆಜಿ ಹಳ್ಳಿ ಠಾಣೆಯ ಸಮೀಪದ ಚಂದ್ರಿಕಾ ಫ್ಯಾಕ್ಟರಿ ಬಳಿ ಶೂಟೌಟ್ ನಡೆದಿದೆ.ಭೂಗತ ಜಗತ್ತಿನೊಡನೆ ಲಿಂಕ್ ಹೊಂದಿದ್ದ ಖಲೀಲ್ ಕಳೆದ 6 ತಿಂಗಳ ಹಿಂದೆ ರೌಡಿ ಚಟ್ನಿ ಸಲೀಂ, ಝುಬೇರ್ ಎಂಬಾತನ ಮೇಲೆ ಶೂಟ್ ಮಾಡಿ ತಪ್ಪಿಸಿಕೊಂಡಿದ್ದ. ಅಲ್ಲದೆ ವಾರಂಟ್ ಜಾರಿಯಾಗಿದ್ದರೂ ನ್ಯಾಯಾಲಯಕ್ಕೆ ಹಾಜರಾಗಿರದ ಖಲೀಲ್ ಶೋಧಕ್ಕಾಗಿ ಪೋಲೀಸರು ಬಲೆ ಬೀಸಿದ್ದರು.

ಬುಧವಾರ ಖಲೀಲ್ ಚಂದ್ರಿಕಾ ಫ್ಯಾಕ್ಟರಿ ಸಮೀಪದಲ್ಲಿರುವ ಮಾಹಿತಿ ಪಡೆದ  ಕೆ.ಜೆ ಹಳ್ಳಿ ಇನ್ಸ್‌ಪೆಕ್ಟರ್ ವಿಜಯ್ ಸಾರಥಿ ನೇತೃತ್ವದ ತಂಡ ಅವನ ಬಂಧನಕ್ಕೆ ತೆರಳಿದೆ.ಆ ವೇಳೆ ಖಲೀಲ್ ತನ್ನ ಪಿಸ್ತೂಲ್ ನಿಂದ ಪೋಲೀಸರ ಮೇಲೆ ಫೈರ್ ಮಾಡಿದ್ದಾನೆ. ಆಗ ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್ ವಿಜಯ್ ಸಾರಥಿ ಖಲೀಲ್ ಕಾಲುಗಳಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. 

ಇದೀಗ ಬಂಧಿತನನ್ನು ಗಿ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ.

. ಕೆ.ಜೆ ಹಳ್ಳಿ ನಿವಾಸಿಯಾಗಿರುವ ಖಲೀಲ್ 18 ವರ್ಷಕ್ಕೆ ಮೊದಲ ಕೊಲೆ ನಡೆಸಿದ್ದ. ಈತನ ವಿರುದ್ಧ ಇದುವರೆಗೆ 4 ಕೊಲೆ ಯತ್ನ ಪ್ರಕರಣ, 3 ಅಕ್ರಮ ಶಸ್ತ್ರಾಸ್ತ್ರ ಪ್ರಕರಣ, 1 ದೊಂಬಿ ಮತ್ತು ಅಪರಾಧಿಕ ಸಂಚಿನ ಪ್ರಕರಣಗಳು ದಾಖಲಾಗಿದೆ.ಅಲ್ಲದೆ ಖಲೀಲ್ ಭೂಗತ ದೊರೆ ರಷೀದ್ ಮಲ್ಬಾರಿ ಜತೆಗೆ ಗುರುತಿಸಿಕೊಂಡಿದ್ದ ಎಂದು ಪೋಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com