ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಫಿಕ್ಸ್:  ಈಗ ಎಲ್ಲರ ಚಿತ್ತ ಸರಣಿ ರೇಪಿಸ್ಟ್ ಉಮೇಶ್ ರೆಡ್ಡಿಯತ್ತ!

ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದ ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆ ಖಾಯಂ ಗೊಳಿಸಿ ಆದೇಶ ಹೊರಡಿಸಿದ ನಂತರ ಸರಣಿ ಅತ್ಯಾಚಾರಿ ಉಮೇಶ್ ರೆಡ್ಡಿ ಮಂದಿನ ದಾರಿ ಏನು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
ಉಮೇಶ್ ರೆಡ್ಡಿ
ಉಮೇಶ್ ರೆಡ್ಡಿ
Updated on

ಬೆಂಗಳೂರು: ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದ ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆ ಖಾಯಂ ಗೊಳಿಸಿ ಆದೇಶ ಹೊರಡಿಸಿದ ನಂತರ ಸರಣಿ ಅತ್ಯಾಚಾರಿ ಉಮೇಶ್ ರೆಡ್ಡಿ ಮಂದಿನ ದಾರಿ ಏನು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

9 ಅತ್ಯಾಚಾರ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಉಮೇಶ್ ರೆಡ್ಡಿ ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾನೆ. ಈತ ಕೂಡ ತನ್ನ  ಗಲ್ಲು ಶಿಕ್ಷೆ ರದ್ದು ಕೋರಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾನೆ. 2013 ರಿಂದ ಈ ಕೇಸ್  ಬಾಕಿ ಉಳಿದಿದೆ.

2013 ರಿಂದ ಆತನನ್ನು ಗಲ್ಲಿಗೇರಿಸಲು ನಾವು ಅಗತ್ಯವಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ,18 ದಿನಗಳ ಕಾಲ ನೇಣು ಹಾಕುವವರಿಗೆ ತರಬೇತಿ ಕೂಡ ನೀಡಿದ್ದೇವು. ಆದರೆ ಸುಪ್ರೀಂಕೋರ್ಟ್ ತಡೆ ನೀಡಿದ ಕಾರಣ ಅವನನ್ನು ಇನ್ನೂ ಗಲ್ಲಿಗೇರಿಸಲು ಆಗಲಿಲ್ಲ ಎಂದು ಬಂಧೀಖಾನೆ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪೊಲೀಸರಿಗೆ ಹಾಗೂ ಸಾರ್ವಜನಿಕರಿಗೆ ದುಸ್ವಪ್ನವಾಗಿ ಕಾಡಿದ್ದ  ಉಮೇಶ್ ರೆಡ್ಡಿಯನ್ನು ನಿವೃತ್ತ ಎಸಿಪಿ ಅಬ್ದುಲ್ ಅಜೀಂ 20 ವರ್ಷಗಳ ಹಿಂದೆ ಬಂಧಿಸಿದ್ದರು.  ಅದಾದ ನಂತರ ಅವನ ರೀತಿಸ್ವಲ್ಪ ಹೋಲಿಕೆ ಬಂದ ಮನುಷ್ಯನನ್ನು ನೋಡಿದ ಕೂಡಲೇ ಹಲವರು ಪೊಲಿಸರಿಗೆ ಕರೆ ಮಾಡುತ್ತಿದ್ದರು.  ಉಮೇಶ್ ರೆಡ್ಡಿ ವಿರುದ್ಧ ದೇಶಾದ್ಯಂತ ಹಲವು ಕೇಸ್ ಗಳು ದಾಖಲಾಗಿವೆ. ಕೆಲವೊಂದು 10ರಿಂದ 15 ವರ್ಷಗಳಿಂದ ಪೆಂಡಿಂಗ್ ಉಳಿದಿವೆ. ನ್ಯಾಯಾಂಗ ವಿಳಂಭ ಮಾಡುತ್ತಿರುವುದರಿಂದ ತೀರ್ಪು ಕೂಡ ವಿಳಂಭವಾಗುತ್ತಿದೆ.  ರೆಡ್ಡಿ ಏನಾದರೂ ರಾಷ್ಟ್ರಪತಿಗಳಿ ಬಳಿ ಕ್ಷಮಾದಾನ ಕೋರಿದರೇ ಆತನನ್ನು ಗಲ್ಲಿಗೇರಿಸುವ ಪ್ರಕ್ರಿಯೆ ಮತ್ತಷ್ಟು ವಿಳಂಭವಾಗುತ್ತದೆ.

ಸರ್ಕಾರ ಮಧ್ಯ ಪ್ರವೇಶಿಸಿ ಎಲ್ಲಾ ಅಡೆತಡೆಳನ್ನು ನಿವಾರಿಸಲು ಇದು ಸೂಕ್ತ ಸಮಯವಾಗಿದೆ ಎಂದು ಹೇಳಿದ್ದಾರೆ. ರೆಡ್ಡಿ ಅರ್ಜಿ ಹಲವು ವರ್ಷಗಳಿಂದ ನ್ಯಾಯಾಲ್ಲಿ ಬಾಕಿಯಿದೆ. ಆತನನ್ನು ಗಲ್ಲಿಗೇರಿಸುವಂತೆ ಕೋರಿ ಸಾರ್ವಜನಿಕರು ಯಾರಾದರೂ ಅರ್ಜಿ ಸಲ್ಲಿಸಿದರೇ ಕೂಡಲೇ ಕೋರ್ಟ್ ಅದನ್ನು ಇತ್ಯರ್ಥ ಮಾಡಬಹುದಾಗಿದೆ,  ಇಂತಹ ಪ್ರಕರಣಗಳಲ್ಲಿ ನ್ಯಾಯಾಂಗವಿಳಂಬ ಅಪರಾಧಿಗಳಿಗೆ ವರವಾಗುತ್ತದೆ, ಮರಣ ದಂಡನೆ ಜೀವಾವಧಿ ಶಿಕ್ಷೆಯಾಗವ ಸಾಧ್ಯತೆಯಿರುತ್ತದೆ ಎಂದು ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಹೇಳಿದ್ದಾರೆ.


ಉಮೇಶ್ ರೆಡ್ಡಿ  ಗುಜರಾತ್ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಹೀನ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ.  1997ರಲ್ಲಿ  ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವಾಗ ಎಸ್ಕೇಪ್ ಆಗಿದ್ದ.  1998 ರಲ್ಲಿ ಬೆಂಗಳೂರಿನ ವಿಧವೆಯಬ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿತ್ತು. ಕೋರ್ಟ್ ಗೆ ಕರೆದೊಯ್ಯುವ ಮಾರ್ಗದಲ್ಲಿ ಆತ ಪರಾರಿಯಾಗಿದ್ದ. 2002 ರಲ್ಲಿ  ಸಲೂನ್ ಒಂದರಲ್ಲಿ ಬೆಂಗಳೂರು ಪೊಲೀಸರು ಆತನನ್ನು ಬಂಧಿಸಿದ್ದರು.

2006ರಲ್ಲಿ ತ್ವರಿತಗತಿಯ ನ್ಯಾಯಾಲಯ ವಿಧವೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆತನಿಗೆ ಗಲ್ಲು ಶಿಕ್ಷೆ ವಿಧಿಸಿತ್ತು, ಅದನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದ, ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು.  2012 ರಲ್ಲಿ ಆತ ಕ್ಷಮಾದಾನ ಕೋರಿ ರಾಜ್ಯಸರ್ಕಾರಕ್ಕೆ ಪತ್ರ ಬರೆದಿದ್ದ. ಅದೇ ವರ್ಷ ರಾಷ್ಟ್ರ ಪತಿಗಳಿಗೂ ಕ್ಷಮಾಧಾನ ಕೋರಿಬರೆದ ಪತ್ರವನ್ನು ರಾಜ್ಯ ಸರ್ಕಾರ ಮತ್ತು ರಾಷ್ಟ್ರಪತಿಗಳೂ ತಿರಸ್ಕರಿಸಿದ್ದರು.. ಅದಾದ ನಂತರ ಮತ್ತೆ ಹೊಸದಾಗಿ  ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದ. ಈ ಕೇಸ್ ಇನ್ನೂ ಸುಪ್ರಿಂಕೋರ್ಟ್ ನಲ್ಲಿ ಪೆಂಡಿಂಗ್ ಇದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com