ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಡಿ 25ರಿಂದ ಜ 15ರವರೆಗೆ ಬಿಜೆಪಿಯಿಂದ ವ್ಯಾಪಕ ಜನಜಾಗೃತಿ ಅಭಿಯಾನ

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಡಿ.25ರಿಂದ ಜ.15ರವರೆಗೆ ಬಿಜೆಪಿ ವತಿಯಿಂದ ವ್ಯಾಪಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಡಿ 25ರಿಂದ ಜ 15ರವರೆಗೆ ಬಿಜೆಪಿಯಿಂದ ವ್ಯಾಪಕ ಜನಜಾಗೃತಿ ಅಭಿಯಾನ
ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಡಿ 25ರಿಂದ ಜ 15ರವರೆಗೆ ಬಿಜೆಪಿಯಿಂದ ವ್ಯಾಪಕ ಜನಜಾಗೃತಿ ಅಭಿಯಾನ
Updated on

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಡಿ.25ರಿಂದ ಜ.15ರವರೆಗೆ ಬಿಜೆಪಿ ವತಿಯಿಂದ ವ್ಯಾಪಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ಮಂಗಳವಾರ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ರಾಜ್ಯದ 58,000 ಬೂತ್ ವ್ಯಾಪ್ತಿಗಳಲ್ಲಿ ಪ್ರತಿ ಬೂತ್‍ಗೆ 50ರಿಂದ 60 ಮನೆಗಳನ್ನು ಸಂಪರ್ಕಿಸಿ ಕಾಯ್ದೆ ಕುರಿತು ಸ್ಪಷ್ಟವಾಗಿ ತಿಳಿಸಲಾಗುವುದು. ಅಲ್ಲದೆ, ಕಾಂಗ್ರೆಸ್ ಮತ್ತು ಸೇರಿದಂತೆ ಕೆಲ ಪಕ್ಷಗಳ ಡೋಂಗಿ ಜ್ಯಾತ್ಯತೀಯತೆ, ದೇಶದ್ರೋಹತನದ ಬಗ್ಗೆ ಹೇಳಲಾಗುವುದು. 20 ದಿನಗಳ ಅಭಿಯಾನದಲ್ಲಿ 30 ಲಕ್ಷ ಮನೆಗಳಿಗೆ ಭೇಟಿ ನೀಡಿ ಒಂದು ಕೋಟಿ ಜನರನ್ನು ತಲುಪುವ ಗುರಿಯನ್ನು ಹೊಂದಲಾಗಿದೆ. ಇದಕ್ಕಾಗಿ ಪ್ರತಿ ಬೂತ್, ಶಕ್ತಿಕೇಂದ್ರ, ಮಂಡಲ, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ತಲಾ ಐದು ಜನರ ತಂಡವನ್ನು ರಚಿಸಲಾಗಿದೆ. ಒಟ್ಟು 28,000 ಕಾರ್ಯಕರ್ತರು ಅಭಿಯಾನದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.

ಅಭಿಯಾನದ ಅಂಗವಾಗಿ 300 ಮಂಡಲಗಳಲ್ಲಿ ಸಭೆಗಳು ಹಾಗು ಸಂವಾದಗಳನ್ನು ನಡೆಸಲಾಗುವುದು. ಇದಲ್ಲದೆ 30 ಜಿಲ್ಲೆಗಳಲ್ಲಿ ಸಾರ್ವಜನಿಕ ಸಭೆಗಳನ್ನು ಆಯೋಜಿಸಲಾಗುವುದು. ಬೆಂಗಳೂರು, ಸಿಂಧನೂರು, ಹುಬ್ಬಳ್ಳಿ, ಕಲ್ಪುರ್ಗಿ ಮತ್ತು ಮಂಗಳೂರಿನಲ್ಲಿ ಬೃಹತ್ ಸಾರ್ವಜನಿಕ ಸಭೆಗಳನ್ನು ನಡೆಸಲಾಗುವುದು. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸುದ್ದಿಗೋಷ್ಠಿಗಳು ಮತ್ತು ಚಿಂತನಾಗೋಷ್ಠಿಗಳು ಹಾಗೂ ವೈದ್ಯರು, ವಕೀಲರು, ಲೇಖಕರು, ಇಂಜನಿಯರುಗಳೊಂದಿಗೆ ಸಂವಾದ ನಡೆಸಲಾಗುವುದು. ಕಾಯ್ದೆಯಡಿ ಪೌರತ್ವಕ್ಕೆ ಅರ್ಹರಾಗಿರುವವರು ನೋಂದಣಿ ಮಾಡಿಕೊಳ್ಳಲು ನೆರವಾಗಲು ಸಹಾಯ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಅವರು ಹೇಳಿದರು. ಪೌರತ್ವ ತಿದ್ದುಪಡಿ ಕಾಯ್ದೆಯು ಪೌರತ್ವ ಕೊಡುವುದೇ ಹೊರತು ಕಿತ್ತುಕೊಳ್ಳುವುದಲ್ಲ. ಸಮೀಕ್ಷೆಯೊಂದರ ಪ್ರಕಾರ ಕಾಯ್ದೆ ಪರ ಶೇ 72ರಷ್ಟು ಜನರಿದ್ದಾರೆ. ಶೇ 48ರಷ್ಟು ಮುಸ್ಲೀಮರು ಕಾಯ್ದೆ ಪರ ಬೆಂಬಲ ತೋರಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿಷಯವನ್ನು ಕೈಗೆತ್ತಿಕೊಂಡು ಕೇಂದ್ರ ಸರ್ಕಾರಕ್ಕೆ ಕಪ್ಪು ಮಸಿ ಬಳಿಯಲು ಕಾಂಗ್ರೆಸ್ ಹೊಂಚು ಹಾಕಿ ಕುತಂತ್ರ ನಡೆಸಿದೆ. ಕಾಂಗ್ರೆಸ್ ದ್ವಿಮುಖ ನೀತಿಯನ್ನು ಅನುಸರಿಸುತ್ತಲೇ ಇದೆ. ಮಂಗಳೂರು ಗಲಭೆಗೆ ಕಾಂಗ್ರೆಸ್ ನೇರ ಕಾರಣವಾಗಿದೆ. ಸರ್ಕಾರ ಶಾಂತಿ ಕಾಪಾಡಲು ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್ ಬೆಂಕಿಗೆ ತುಪ್ಪ ಸುರಿದಿದೆ. ಯು.ಟಿ.ಖಾದರ್, ದಿನೇಶ್ ಗುಂಡೂರಾವ್ ಮುಂತಾದವರ ಪ್ರಚೋದನಾತ್ಮಕ, ಭಾವೋದ್ರೇಕ ಹೇಳಿಕೆಗಳಿಂದ ಗಲಭೆಗಳು ನಡೆದಿವೆ. ಕಿಡಿಗೇಡಿಗಳ ಕೃತ್ಯಗಳು ಸಿಸಿಟಿವಿಗಳಲ್ಲಿ ಸೆರೆಯಾಗಿವೆ. ಖಾದರ್, ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ಗಲಭೆಕೋರ ಪ್ರತಿಭಟನಾಕಾರರ ಪರವಾಗಿ ನಿಂತು ಮಾತನಾಡಿದ್ದಾರೆ. ದಿನೇಶ್ ಗುಂಡೂರಾವ್ ನಿಜವಾಗಿಯೂ ದಿನೇಶ್ ಗೂಂಡಾರಾವ್ ಆಗಿದ್ದಾರೆ. ಕಾಂಗ್ರೆಸ್ ನಾಯಕರ ಲಜ್ಜೆಗೆಟ್ಟ ರಾಜಕೀಯ, ಢೋಂಗಿ ಜಾತ್ಯತೀಯತೆ ಖಂಡನೀಯ ಎಂದು ರವಿಕುಮಾರ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com