ಹಾಸನ: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಕೊಲೆ, ಆರೋಪಿ ಬಂಧನ

4 ನೇ ತರಗತಿಯ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಂಆಡಿದ ಆರೋಪದ ಹಿನ್ನೆಲೆ 21 ವರ್ಷದ ಯುವಕನನ್ನು ಹಾಸನ ಪೋಲೀಸರು ಬಂಧಿಸಿದ್ದಾರೆ. ಬಾಲಕಿ . ಡಿಸೆಂಬರ್ 12ರಿಂದ ನಾಪತ್ತೆಯಾಗಿದ್ದವಳು ಡಿಸೆಂಬರ್ 16 ರಂದು ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆ ಆಗಿದ್ದಳು. 
ಹಾಸನ: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಕೊಲೆ, ಆರೋಪಿ ಬಂಧನ
ಹಾಸನ: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಕೊಲೆ, ಆರೋಪಿ ಬಂಧನ
Updated on: 

ಹಾಸನ:  4 ನೇ ತರಗತಿಯ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ಆರೋಪದ ಹಿನ್ನೆಲೆ 21 ವರ್ಷದ ಯುವಕನನ್ನು ಹಾಸನ ಪೋಲೀಸರು ಬಂಧಿಸಿದ್ದಾರೆ. ಬಾಲಕಿ . ಡಿಸೆಂಬರ್ 12ರಿಂದ ನಾಪತ್ತೆಯಾಗಿದ್ದವಳು ಡಿಸೆಂಬರ್ 16 ರಂದು ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆ ಆಗಿದ್ದಳು.

ಆರೋಪಿ ಸುರೇಶ್  ಬಾಲಕಿಯನ್ನು ಅಪಹರಿಸಿ  ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ. ವಿಶೇಷವೆಂದರೆ ಸುರೇಶ್ ಹಾಗೂ ಹತ್ಯೆಗೊಳಗಾಗಿದ್ದಬಾಲಕಿ ಒಂದೇ ಗ್ರಾಮದವರಾಗಿದ್ದರು ಎಂದು  ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ತಿಳಿಸಿದ್ದಾರೆ.

ಡಿಸೆಂಬರ್ 12 ರಂದು ತನ್ನ ಕಿರಿಯ ಸಹೋದರನೊಂದಿಗೆ ಜಾತ್ರೆಗೆ ಹೋಗಿದ್ದಾಗ ಬಾಲಕಿಯನ್ನು ಅಪಹರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ದಿನಗಳ ನಂತರವೂ ಹುಡುಗಿ ಮನೆಗೆ ಬಾರದಿದ್ದಾಗ ಕುಟುಂಬವು ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದೆ. ಸುರೇಶ್ ಬಾಲಕಿಯನ್ನು ಗ್ರಾಮದ ಹೊರವಲಯಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ ನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಡಿವೈಎಸ್ಪಿ ಲಕ್ಷ್ಮೆಗೌಡ ತಿಳಿಸಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com