ಸಾಮೂಹಿಕ ವಿವಾಹ ಯೋಜನೆ: ಯಶ್, ರಾಧಿಕಾ ರಾಯಭಾರಿ

ಮುಜರಾಯಿ ದೇಗುಲಹಗಳಲ್ಲಿ ಸಾಮೂಹಿಕ ವಿವಾಹ ಯೋಜನೆಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ದಂಪತಿಗಳು ರಾಯಭಾರಿಗಳಾಗಲಿದ್ದಾರೆಂದು ತಿಳಿದುಬಂದಿದೆ. 
ಯಶ್, ರಾಧಿಕಾ
ಯಶ್, ರಾಧಿಕಾ

ಬೆಂಗಳೂರು: ಮುಜರಾಯಿ ದೇಗುಲಹಗಳಲ್ಲಿ ಸಾಮೂಹಿಕ ವಿವಾಹ ಯೋಜನೆಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ದಂಪತಿಗಳು ರಾಯಭಾರಿಗಳಾಗಲಿದ್ದಾರೆಂದು ತಿಳಿದುಬಂದಿದೆ. 

ಮುಂದಿನ ವರ್ಷ ಏಪ್ರಿಲ್ 26 ಮತ್ತು ಮೇ 24 ರಂದು ಸರ್ಕಾರ ಸಾಮೂಹಿಕ ವಿವಾಹ ನಡೆಸಲಿದ್ದು, ಈ ವೇಳೆ 1,000 ದಂಪತಿಗಳು ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ. 

ವಧುವಿಗೆ ಸರ್ಕಾರ 8 ಗ್ರಾಂ ಚಿನ್ನದ ಮಾಂಗಲ್ಯ ಚೈನ್ ಹಾಗೂ ದಂಪತಿಗಳಿಗೆ ರೂ.15,000 ನಗದು ನೀಡಲು ಸರ್ಕಾರ ಚಿಂತನೆ ನಡೆಸಿದೆ. ಸಾಮೂಹಿಕ ವಿವಾಹ ನಡೆಸಲು ಮುಜರಾಯಿ ಇಲಾಕೆ ಕ್ಲಾಸ್ ಎ ಇರುವ 100 ದೇವಾಲಯಗಳನ್ನು ಆಯ್ಕೆ ಮಾಡಿದೆ. ಈಗಾಗಲೇ ಯೋಜನಗೆ ಸಾಕಷ್ಟು ಸಿದ್ಧತೆಗಳನ್ನು  ನಡೆಸಲಾಗಿದ್ದು, ಯೋಜನೆಗೆ ಯಶ್ ಹಾಗೂ ರಾಧಿಕಾ ಅವರನ್ನು ರಾಯಭಾರಿಗಳನ್ನಾಗಿ ಮಾಡಲು ಸರ್ಕಾರ ಚಿಂತನೆ ನಡೆಸಿದ್ದು, ಇದಕ್ಕೆ ದಂಪತಿಗಳೂ ಕೂಡ ಒಪ್ಪಿಗೆ ನೀಡಿದ್ದೇನೆಂದು ಹೇಳಲಾಗುತ್ತಿದೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು, ರಾಯಭಾರಿಗಳಾಗಿ ಯಶ್ ಹಾಗೂ ರಾಧಿಕಾ ಅಷ್ಟೇ ಅಲ್ಲದೆ, ಸುಧಾಮೂರ್ತಿ, ಪುನೀತ್ ರಾಜ್ ಕುಮಾರ್ ಅವರನ್ನು ರಾಯಭಾರಿಗಳಾಗಿ ಮಾಡಲು ಚಿಂತನೆ ನಡೆಸಿದ್ದು, ಈ ಬಗ್ಗೆ ಪತ್ರ ಕೂಡ ಬರೆಯಲಾಗಿದೆ. ಆಧ್ಯಾತ್ಮಿಕ ಗುರುಗಳಾದ ಶ್ರೀ ಶ್ರೀ ರವಿಶಂಕರ್ ಗುರೂಜಿ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರಿಗೆ ಪತ್ರ ಬರೆಯಲಾಗಿದ್ದು ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com