ಮಹದಾಯಿಗೆ ಮತ್ತೆ ಗೋವಾ ಕ್ಯಾತೆ-ನೀರಿನ ತಿರುವು ಸ್ವೀಕಾರಾರ್ಹವಲ್ಲ ಎಂದ ರಾಜ್ಯಪಾಲ ಮಲಿಕ್

ಮಹದಾಯಿ ನೀರು ಹಂಚಿಕೆಯಲ್ಲಿ ಗೋವಾ ರಾಜ್ಯಪಾಲ ಸತ್ಯಪಾಲ್ ಮಲಿಕ್ ನಿರ್ಧಾರ ಕರ್ನಾಟಕಕ್ಕೆ ತೀವ್ರ ಹಿನ್ನಡೆಯಾಗುವ ಸಂಭವವಿದೆ. ರಾಜ್ಯ ಸರ್ಕಾರವು ಕಳಸಾ ಬಂಡೂರಿ ಯೋಜನೆ ಕೆಲಸ ಪ್ರಾರಂಭಕ್ಕೆ ಮಹದಾಯಿ  ಜಲ ವಿವಾದಗಳ ನ್ಯಾಯಮಂಡಳಿಯ ಗೆಜೆಟ್ ಅಧಿಸೂಚನೆಗಾಗಿ ಕಾಯುತ್ತಿರುವ ಈ ಸಮಯದಲ್ಲಿ ಗೋವಾ ರಾಜ್ಯಪಾಲರ ನಡೆ ರಾಜ್ಯದ ಹಿತಕ್ಕೆ ಅಡ್ಡಿಯಾಗುವ ಸಂಭವವಿದೆ.
ಸತ್ಯಪಾಲ್ ಮಲಿಕ್
ಸತ್ಯಪಾಲ್ ಮಲಿಕ್
Updated on

ಬೆಳಗಾವಿ: ಮಹದಾಯಿ ನೀರು ಹಂಚಿಕೆಯಲ್ಲಿ ಗೋವಾ ರಾಜ್ಯಪಾಲ ಸತ್ಯಪಾಲ್ ಮಲಿಕ್ ನಿರ್ಧಾರ ಕರ್ನಾಟಕಕ್ಕೆ ತೀವ್ರ ಹಿನ್ನಡೆಯಾಗುವ ಸಂಭವವಿದೆ. ರಾಜ್ಯ ಸರ್ಕಾರವು ಕಳಸಾ ಬಂಡೂರಿ ಯೋಜನೆ ಕೆಲಸ ಪ್ರಾರಂಭಕ್ಕೆ ಮಹದಾಯಿ  ಜಲ ವಿವಾದಗಳ ನ್ಯಾಯಮಂಡಳಿಯ ಗೆಜೆಟ್ ಅಧಿಸೂಚನೆಗಾಗಿ ಕಾಯುತ್ತಿರುವ ಈ ಸಮಯದಲ್ಲಿ ಗೋವಾ ರಾಜ್ಯಪಾಲರ ನಡೆ ರಾಜ್ಯದ ಹಿತಕ್ಕೆ ಅಡ್ಡಿಯಾಗುವ ಸಂಭವವಿದೆ.

ಮಹದಾಯಿ ಯೋಜನೆಯ ಬಗ್ಗೆ ಗೋವಾ ಸರ್ಕಾರದ ನಿಲುವನ್ನು ಬೆಂಬಲಿಸುವ ಸಲುವಾಗಿ ಗೋವಾ ರಾಜ್ಯಪಾಲರು ಕೇಂದ್ರದ ಮೇಲೆ ಒತ್ತಡ ಹೇರಿದ್ದಾರೆ ಎಂಬುದು ಬೆಳಕಿಗೆ ಬಂದಿದೆ, ಅವರು ಗುರುವಾರ ಸ್ಥಳೀಯ ಗೋವಾ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ.

“ಗೋವಾ ನೀರನ್ನು ನೀರಾವರಿಗಾಗಿಬೇರೆ ರಾಜ್ಯಗಳಿಗೆ (ಕರ್ನಾಟಕ) ನೀಡುವುದು ಸ್ವೀಕಾರಾರ್ಹವಲ್ಲ ಮಹದಾಯಿ ಹಂಚಿಕೆಯಲ್ಲಿ ಗೋವಾಕ್ಕೆ ಮೋಸ ಮಾಡಲಾಗಿದೆ ಮತ್ತು ಅನ್ಯಾಯವಾಗಿದೆ ಎಂದು ನಾನು ಭಾವಿಸುತ್ತೇನೆ. 

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್ ಜಾವಡೇಕರ್ ಗೋವಾ ಸರ್ಕಾರಕ್ಕೆ ಪತ್ರ ಬರೆದಿದ್ದರು. ಜಾವಡೇಕರ್ ಬರೆದ ಪತ್ರವು ಮಹದಾಯಿ ಹಂಚಿಕೆಯಲ್ಲಿ ಗೋವಾದ  ಹಿತಾಸಕ್ತಿಗಳನ್ನು ಕಾಪಾಡುವ ಭರವಸೆ ನೀಡುತ್ತದೆ ಎಂದು ವರದಿಯಾಗಿದೆ.

ಮಹದಾಯಿ  ಗೋವಾದ ಜೀವನಾಡಿ, ಮತ್ತು ಕರಾವಳಿ ರಾಜ್ಯಕ್ಕೆ ಈ ವಿಷಯ ಬಹಳ ಮುಖ್ಯ. ಮಹಾದಾಯಿಯಲ್ಲಿ ನೀರು ಹಂಚಿಕೊಂಡರೆ ನೀರು ಕಡಿಮೆಯಾಗುವ ಸಾಧ್ಯತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ ಅವರು, “ಮಹಾದಾಯಿಯಲ್ಲಿ ನೀರು ಕಡಿಮೆಯಾದರೆಕೆಳಭಾಗಗಳ ನದಿಯಲ್ಲಿ ಉಪ್ಪು ನೀರು ಸಂಗ್ರಹವಾಗಬಹುದು. ಗೋವಾದ ನೀರು ಕೃಷಿ ಕೆಲಸಕ್ಕೆ ಇತರರಿಗೆ ನೀಡುವುದು ಸ್ವೀಕಾರಾರ್ಹವಲ್ಲ ಎಂದುಖಾಸಗಿ ವಾಹಿನಿಇಗೆ ನೀಡಿದ ಸಂದರ್ಶನದಲ್ಲಿ ಮಲಿಕ್ ಹೇಳಿದ್ದಾರೆ.

ಗೋವಾ ರಾಜ್ಯವು ಅನ್ಯಾಯಕ್ಕೆ ಒಡ್ಡಿಕೊಂಡಿದೆ. ಮಹದಾಯಿ ವಿಷಯದಲ್ಲಿ ಮೋಸ ಹೋಗಿದೆ ಎಂದು ನಾನು ಭಾವಿಸುತ್ತೇನೆ. ಈ ಲೆಕ್ಕದಲ್ಲಿ ಜಾವಡೇಕರ್ ಅವರನ್ನು ಭೇಟಿಯಾಗಲು ಗೋವಾದ ಎಲ್ಲಾ ಪ್ರತಿಪಕ್ಷಗಳನ್ನು ಹಾಗೂ ಆಡಳಿತ ಪಕ್ಷಗಳನ್ನು ಒಗ್ಗಟ್ಟಾಗುವಂತೆ ನಾನು ಕೇಳುತ್ತೇನೆ.ಮಹದಾಯಿ ವಿಚಾರವಾಗಿ ಅಂತಿಮ ತೀರ್ಮಾನ ತೆಗೆದುಕೊಳ್ಳುವಂತೆ ಜಾವಡೇಕರ್ ಗೋವಾ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಲಿಯಿಂದ ಹಿಂದಿರುಗುತ್ತಿದ್ದ ಗೋವಾ ಸಿಎಂ ಅವರನ್ನು ಜಾವಡೇಕರ್ ಅವರಿಂದ ಪತ್ರ ಸಂಗ್ರಹಿಸುವಂತೆ ಕೇಳಿಕೊಂಡಿದ್ದೇನೆ ಎಂದು ಮಲಿಕ್ ಹೇಳಿದ್ದಾರೆ. “ಪತ್ರವಿಲ್ಲದೆ ಹಿಂತಿರುಗಬಾರದೆಂದು ನಾನು ಸಿಎಂ ಅವರನ್ನು ಕೇಳಿದೆ,’ ಮಲಿಕ್ ಹೇಳಿದ್ದಾರೆ.

ಗೋವಾ ಸರ್ಕಾರದ ಒತ್ತಡಕ್ಕೆ ಮಣಿದು, ಜಾವಡೇಕರ್ ಅವರ ಸಚಿವಾಲಯವು ಕರ್ನಾಟಕಕ್ಕೆ ನೀಡಲಾದ ಪರಿಸರ ಅನುಮತಿಯನ್ನು ಪಾಲಿಸಲಿಲ್ಲ. ಅಂದಿನಿಂದಲೂ, ಗೋವಾ ಸರ್ಕಾರ, ಪ್ರತಿಪಕ್ಷ ಮತ್ತು ರಾಜ್ಯಪಾಲರು ಮಹದಾಯಿ ವಿಷಯದಲ್ಲಿ ಗೋವಾ ತನ್ನ ಹಿತಾಸಕ್ತಿಗಳನ್ನು ಕಾಪಾಡುವುದಾಗಿ ಭರವಸೆ ನೀಡಬೇಕೆಂದು ಒತ್ತಾಯಿಸುತ್ತಿದ್ದರು. ಆದರೆ, ನ್ಯಾಯಮಂಡಳಿ ಮತ್ತು ಅಗತ್ಯ ಅರಣ್ಯ ಮತ್ತು ವನ್ಯಜೀವಿಗಳ ಅನುಮತಿಯ ಗೆಜೆಟ್ ಅಧಿಸೂಚನೆಯ ನಂತರಕಳಸಾ ಬಂಡೂರಿ ಯೋಜನೆಯ ಕಾಮಗಾರಿಗಳನ್ನು ಪ್ರಾರಂಭಿಸಲು ಜಾವಾಡೇಕರ್ ಎರಡು ದಿನಗಳ ಹಿಂದೆ ಕರ್ನಾಟಕ ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರಿಗೆ ಪತ್ರ ಬರೆದು ತಿಳಿಸಿದ್ದರು.

ಕರ್ನಾಟಕಕ್ಕೆ ಜಾವಡೇಕರ್ ಅವರ ಹೊಸ ಪತ್ರವು ಗೋವಾಗೆ ತಲೆನೋಆಗಿದೆ.ಗೋವಾ ಜಲಸಂಪನ್ಮೂಲ ಸಚಿವ ಫಿಲಿಪೆ ನೆರಿ ಅವರು ಈ ಪತ್ರಕ್ಕೆ ಯಾವುದೇ ಕಾನೂನುಬದ್ಧ ನಿಲುವು ಇರುವುದಿಲ್ಲ ಏಕೆಂದರೆ ಈ ವಿಷಯವನ್ನು ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್ ನಿರ್ಧರಿಸುತ್ತದೆ. ಪತ್ರವನ್ನು ತಕ್ಷಣ ಹಿಂತೆಗೆದುಕೊಳ್ಳುವಂತೆ ಕೇಂದ್ರವನ್ನು ಒತ್ತಾಯಿಸುವುದಾಗಿ ಹೇಳಿದ್ದಾರೆ. ಇದೇ ವೇಳೆ ಸ್ಥಳೀಯ ಗೋವಾನ್ ಸಂಘಟನೆಯಾದ ಗೋವೆಂಚೆ ಆವಾಜ್, ಮಹಾದೈ ವಿಷಯದಲ್ಲಿ ರಾಜ್ಯದ ಹಿತಾಸಕ್ತಿಗಳನ್ನು ಕಾಪಾಡದ ಕಾರಣಕ್ಕಾಗಿ ಸಿಎಂ ಸಾವಂತ್ ಅವರ ರಾಜೀನಾಮೆಗೆ ಒತ್ತಾಯಿಸಿದರು.

ಬಿಜೆಪಿಯ ಹಿರಿಯ ಮುಖಂಡ ಮತ್ತು ಮಾಜಿ ಸಂಸದ ನರೇಂದ್ರ ಸವಾಯ್ಕರ್ ಅವರು ಗೋವಾದಲ್ಲಿ ಮಹಾದಾಯಿಯಿಂದ ಒಂದು ಹನಿ ನೀರನ್ನು ಸಹ ತಿರುಗಿಸಲು ಅನುಮತಿಸುವುದಿಲ್ಲ ಎಂದಿದ್ದಾರೆ. ನ್ಯಾಯಮಂಡಳಿಯ ಆದೇಶದ ಹೊರತಾಗಿಯೂ ಕರ್ನಾಟಕಕ್ಕೆ ತನ್ನ ನೀರಿನ ಪಾಲನ್ನು ನೀಡುವುದು ದುರದೃಷ್ಟಕರ ಆದಾಗ್ಯೂ, ಎರಡೂ ಕಡೆಯ ಅನೇಕ ನಾಯಕರು ಪತ್ರ ಹಾಗೂ ಮಧ್ಯಸ್ಥಗಾರರಾರರ ಮೂಲಕ ಕೆಂದ್ರದ ಮೇಲೆ ಒತ್ತಡ ಹೇರುತ್ತಿದ್ದು ಕೇಂದ್ರವು ಈ ವಿಚಾರದಲ್ಲಿ  "ಅತ್ಯಲ್ಪ" ವಾಗ್ದಾನ ಮಾಡಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com