ಸೌಟು ಬಿಟ್ಟು ಬಂದೂಕು ಹಿಡಿದ ಕೊಡಗು ಮಹಿಳೆಯರು!

ಕಳೆದ ಐದು ದಿನಗಳಿಂದ ಪ್ರತಿದಿನ ಬೆಳಿಗ್ಗೆ ದಕ್ಷಿಣ ಕೊಡಗು ಮೂಲದ ಕೆಲ ಮಹಿಳೆಯರು ಶೂಟಿಂಗ್ ಕಲಿಯುವ ಉದ್ದೇಶದೊಂದಿಗೆ ತಮ್ಮ ನಿತ್ಯದ ಅಡುಗೆ ಕೆಲಸಕ್ಕೆ ರೆಸ್ಟ್ ಕೊಟ್ಟಿದ್ದಾರೆ.
ಕೊಡವ ಮಹಿಳೆಯರು
ಕೊಡವ ಮಹಿಳೆಯರು

ಮಡಿಕೇರಿ: ಕಳೆದ ಐದು ದಿನಗಳಿಂದ ಪ್ರತಿದಿನ ಬೆಳಿಗ್ಗೆ ದಕ್ಷಿಣ ಕೊಡಗು ಮೂಲದ ಕೆಲ ಮಹಿಳೆಯರು ಶೂಟಿಂಗ್ ಕಲಿಯುವ ಉದ್ದೇಶದೊಂದಿಗೆ ತಮ್ಮ ನಿತ್ಯದ ಅಡುಗೆ ಕೆಲಸಕ್ಕೆ ರೆಸ್ಟ್ ಕೊಟ್ಟಿದ್ದಾರೆ.

ಕೊಡವರಲ್ಲಿ ಬಂದೂಕು ಹೊಂದಿರುವುದು ಅಲ್ಲಿನ ಸಂಪ್ರದಾಯದ. ಬಂದೂಕುಗಳ ಬಳಸುವುದನ್ನು ಕಲಿಯವ ಸಲುವಾಗಿ ಮಹಿಳೆಯರು ಅಡುಗೆ ಕೆಲಸ ಬಿಟ್ಟು ಬಂದೂಕು ಹಿಡಿದಿದ್ದಾರೆ. ಇದು ಮಹಿಳೆಯರಿಗೆ ಸ್ವರಕ್ಷಣೆ ಸಾಮರ್ಥ್ಯ ನೀಡುತ್ತದೆ.

ಎಲ್ಲಾ ಮಹಿಳೆಯರು ಬಿಳಿ ಅಂಗಿ ಧರಿಸಿ ಗೋಣಿಕೊಪ್ಪಲ್ ನ ಕಾವೇರಿ ಕಾಲೇಜು ಮೈದಾನಕ್ಕೆ ಧಾವಿಸಿ ಬಂದೂಕುಗಳಿಗೆ ಬುಲೆಟ್ ಲೋಡ್ ಮಾಡುವುದು ಮತ್ತು ನಿರ್ದಿಷ್ಟ ಗುರಿಯನ್ನು ಶೂಟ್ ಮಾಡುವುದನ್ನು ಕಲಿಯುತ್ತಿದ್ದಾರೆ. 

ಗೋಣಿಕೊಪ್ಪಲ್ ಪೊಲೀಸರು ಶೂಟಿಂಗ್ ತರಬೇತಿಯನ್ನು ಆಯೋಜಿಸಿದ್ದು, ದಕ್ಷಿಣ ಕೊಡಗುದಾದ್ಯಂತದ 60 ಕ್ಕೂ ಹೆಚ್ಚು ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತರಬೇತಿ ಪಡೆದವರಲ್ಲಿ ಎಂಟು ಮಹಿಳೆಯರು ತರಬೇತಿಯ ನಂತರ ಹವ್ಯಾಸಿ ಶೂಟರ್ ಆಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com