ಬೆಂಗಳೂರು: ಆರ್ಚ್ ಬಿಷಪ್ ಹಾಗೂ ಅವರ ಸಹಾಯಕನಿಂದ ಮಹಿಳೆಗೆ ಕಿರುಕುಳ, ದೂರು ದಾಖಲು

ಬೆಂಗಳುರು ಸೆಂಟ್ರಲ್ ಡಯೋಸಿಸ್ ನ ಆರ್ಚ್ ಬಿಷಪ್ ಹಾಗೂ ಅವರ ಸಹಚರನೊಬ್ಬ ತನಗೆ ಲೈಂಗಿಕ ಕಿರುಕುಳ ನಿಡಿದ್ದಾರೆಂದು ಮಹಿಳೆಯೊಬ್ಬರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಂಗಳೂರು: ಆರ್ಚ್ ಬಿಷಪ್ ಹಾಗೂ ಅವರ ಸಹಾಯಕನಿಂದ ಮಹಿಳೆಗೆ ಕಿರುಕುಳ, ದೂರು ದಾಖಲು
ಬೆಂಗಳೂರು: ಆರ್ಚ್ ಬಿಷಪ್ ಹಾಗೂ ಅವರ ಸಹಾಯಕನಿಂದ ಮಹಿಳೆಗೆ ಕಿರುಕುಳ, ದೂರು ದಾಖಲು
ಬೆಂಗಳೂರು: ಬೆಂಗಳುರು ಸೆಂಟ್ರಲ್ ಡಯೋಸಿಸ್ ನ ಆರ್ಚ್ ಬಿಷಪ್ ಹಾಗೂ ಅವರ ಸಹಚರನೊಬ್ಬ ತನಗೆ ಲೈಂಗಿಕ ಕಿರುಕುಳ ನಿಡಿದ್ದಾರೆಂದು ಮಹಿಳೆಯೊಬ್ಬರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಿವಾಜಿನಗರ ಠಾಣೆಯಲ್ಲಿ ಮಹಿಳೆ ಆರ್ಚ್ ಬಿಷಪ್ ಪಿ.ಕೆ. ಸ್ಯಾಮ್ಯುಯೆಲ್ ಹಾಗೂ ಅವರ ಸಹಚರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರ್ಚ್ ಬಿಷಪ್ ಅವರ ಬೆದರಿಕೆ ಬಳಿಕ ಮಹಿಳೆ ಆತ್ಮಹತ್ಯೆಗೆ ಪ್ರಯತ್ನಿಸಿದ ಒಂದು ದಿನದ ಬಳಿಕ ಈ ದೂರು ದಾಖಲಾಗಿದೆ.
ಆದರೆ ಆರ್ಚ್ ಬಿಷಪ್ ಮಹಿಳೆ ಮಾಡಿರುವ ಆರೋಪಗಳು ಸುಳ್ಳು ಎಂದು ವಾದಿಸಿದ್ದಾರೆ.ಆಕೆಯನ್ನು ನಾನೆಂದಿಗೂ ಭೇಟಿಯಾಗಿರಲಿಲ್ಲ ಎಂದು ಅವರು ತನ್ನ ಮೇಲಿನ ಆರೋಪವನ್ನು ಅಲ್ಲಗೆಳೆದಿದ್ದಾರೆ. ಆದರೆ ಪತ್ರಿಕೆಯೊಡನೆ ಮಾತನಾಡಿದ ಸೌಮ್ಯ (ಹೆಸರು ಬದಲಿಸಿದೆ) ಪಾದ್ರಿಗಳ ನಿಕಟ ಸಂಪರ್ಕದಲ್ಲಿದ್ದ ಅವರ ಆಪ್ತ ಸಹಾಯಕ  ವಿನೋದ್ ದಾಸನ್ ತನಗೆ ಪದೇ ಪದೇ ಕಿರುಕುಳ ನಿಡಿದ್ದರು ಎಂದಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ವಿನೋದ್ ನನಗೆ ಕಿರುಕುಳ ನೀಡುತ್ತಿದ್ದು, ದೌರ್ಜನ್ಯ ಮತ್ತು ದರೋಡೆ ಪ್ರಕರಣಗಳನ್ನು ಒಳಗೊಂಡಂತೆ ನಾನು ಅವರ ವಿರುದ್ಧ ಹಲವು ದೂರುಗಳನ್ನು ದಾಖಲಿಸಿದ್ದೇನೆ.ಆದರೆ  ಅವರು ನನಗೆ ಕಿರುಕುಳ ನೀಡುವುದನ್ನು ಬಿಡಲಿಲ್ಲ. ನನ್ನ ಪತಿಗೆ ವಿಚ್ಚೇದನ ನೀಡುವಂತೆ ಪ್ರೇರೇಪಿಸುತ್ತಾ ಬಂದರು. ಬಳಿಕ ನಾನು ನನ್ನ ಮೊದಲ ಪತಿಗೆ ವಿಚ್ಚೇದನ ನೀಡಿ ಬೆಂಗಳೂರನ್ನೇ ತೊರೆದು ನನ್ನ ಸಂಬಂಧಿಕರ ಮನೆಯಾಲ್ಲಿ ತಮಿಳುನಾಡಿನ ಸೇಲಂ ನಲ್ಲಿ ವಾಸಿಸತೊಡಗಿದೆ. ಅಲ್ಲಿ ನಾನು ಇನ್ನೊಂದು ವಿವಾಹವಾದೆನು.ಆದರೆ ಜನವರಿ 13ಕ್ಕೆ ಬೆಂಗಳೂರಿಗೆ ಹಿಂತಿರುಗಿದ್ದೇ ವಿನೋದ್ ಮತ್ತೆ ನನಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ ಎಂದು ಆಕೆ ವಿವರಿಸಿದರು.
"ನಾನು ನನ್ನ ತಾಯಿಯ ಮನೆಗೆ ಹಿಂತಿರುಗಿದ ವಿಚಾರ ತಿಳಿದ ವಿನೋದ್ ನನಗೆ ಮತ್ತೆ ಕಿರುಕುಳ ನೀಡಿದ್ದಲ್ಲದೆ ಅವನ ವಿರುದ್ಧ ನಾನು ದಾಖಲಿಸಿದ ದೂರುಗಳನ್ನು ಹಿಂಪಡೆಯಲು ಒತ್ತಾಯಿಸಿದ್ದನು. ನಾನು ನನ್ನ ಪತಿಯೊಡನೆ  ಜನವರಿ 21 ರಂದು ಟ್ರಿನಿಟಿಚರ್ಚ್ ಗೆ ತೆರಳಿ ಒಬ್ಬ ವ್ಯಕ್ತಿಯನ್ನು ಭೇಟಿಯಾಗುವಂತೆ ಆತ ಆಗ್ರಹಿಸಿದ. ಅಂತೆಯೇ ನಾನು ನನ್ನ ಪತಿಯೊಡನೆ ಚರ್ಚ್ ಗೆ ತೆರಳಿದಾಗ ಅಲ್ಲಿ ನಾನು ಆರ್ಚ್ ಬಿಷಪ್ ಅವರನ್ನು ಕಂಡೆ,. ನಾನು ಅವರನ್ನು ಅವರ ನಿವಾಸದಲ್ಲಿ ಏಕಾಂತವಾಗಿ ಭೇಟಿ ಮಾಡಿದ್ದ ವೇಳೆ ಆರ್ಚ್ ಬಿಷಪ್ ಸಹ ವಿನೋದ್ ವಿರುದ್ಧ ದೂರು ಹಿಂಪಡೆಯಬೇಕೆಂದು ನನ್ನನ್ನು ಒತ್ತಾಯಿಸಿದರು. ಇದಕ್ಕಾಗಿ ನನಗೆ ಅವರು ನಡೆಸುತ್ತಿದ್ದ ಇನ್ಸ್ ಟಿಟ್ಯೂಟ್ ನಲ್ಲಿ ಒಂದು ಉದ್ಯೋಗ, ಹಣವನ್ನು ನೀಡುವುದಾಗಿ ಆಮಿಷ ಒಡ್ಡಿದ್ದಾರೆ.
"ಅಲ್ಲದೆ ನನ್ನ ತೋಳನ್ನು ಬಳಸಿದ ಅವರು ನನ್ನೊಡನೆ ಅಸಭ್ಯವಾಗಿ ವರ್ತಿಸಿದರು. ಬಳಿಕ ನಾನು ಜೋರಾಗಿ ಕಿರುಚಿದಾಗ ಅವರು ಈ ವಿಚಾರ ಹೊರಗಡೆ ಬಾಯಿ ಬಿಟ್ಟರೆ ಭೀಕರ ಪರಿಣಾಮ ಎದುರಿಸಬೇಕಾಗುವುದು ಎಂದು ಬೆದರಿಕೆ ಹಾಕಿದ್ದರು."
ಇದಾದ ಬಳಿಕ ಸೌಮ್ಯ ಖಿನ್ನತೆಗೆ ಒಳಗಾದರು. ಆಕೆ ತನ್ನ ತಾಯಿ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ತೆರಳಿದ್ದಲ್ಲದೆ ಅಲ್ಲಿಯೇ ಆಕೆ ಕೀಟನಾಶಕ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಇದಾದ ಬ್ನಂತರ ಆಕೆ ನಗರ ಪೋಲೀಸರಲ್ಲಿ ದೂರು ಸಲ್ಲಿಸಿದ್ದಾರೆ.
ಆರ್ಚ್ ಬಿಷಪ್ ತಮ್ಮ ವಿರುದ್ಧದ ಆರೋಪ ತಳ್ಳಿ ಹಾಕಿದ್ದು ಪೊಲೀಸ್ ತನಿಖೆ ನಡೆಯಲಿದೆ ಎಂದು ಹೇಳಿದರು.ಇದೇ ವೇಳೆ ವಿನೋದ್ ಆರ್ಚ್ ಬಿಷಪ್ ಅವರಿಗೆ ಎಲ್ಲಾ ಭಕ್ತರ ಮೇಲೆ ಸಮಾನ ಒಲವಿದೆ. ಭಕ್ತರು ಅವರೊಡನೆ ಸದಾ ಸಮೀಪದಲ್ಲಿರುತ್ತಾರೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com