

ಬೆಂಗಳೂರು: ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಬೆಂಗಳೂರು ನಗರದಲ್ಲಿ 112 ವಿದ್ಯುತ್ ಚಾರ್ಚಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದೆ.
ವಿದ್ಯುತ್ ಚಾರ್ಜ್ ಮಾಡುವ 12 ಕೇಂದ್ರಗಳನ್ನು ಸ್ಥಾಪಿಸುವ ಕೆಲಸ ವಿವಿಧ ಸ್ಥಳಗಳಲ್ಲಿ ಕಳೆದ ವರ್ಷ ಆರಂಭಗೊಂಡಿದ್ದು ಅದು ಜೂನ್ ವೇಳೆಗೆ ಮುಕ್ತಾಯವಾಗುವ ನಿರೀಕ್ಷೆಯಿದೆ. ಇತ್ತೀಚೆಗೆ ಬೆಂಗಳೂರು ವಿದ್ಯುತ್ ಪೂರೈಕೆ ನಿಗಮ 100 ಇವಿ ಚಾರ್ಜಿಂಗ್ ಕೇಂದ್ರಗಳನ್ನು ಆಯ್ದ ಸರ್ಕಾರಿ ಕೇಂದ್ರಗಳಲ್ಲಿ ಸ್ಥಾಪಿಸಲು ಟೆಂಡರ್ ಕರೆದಿತ್ತು.
112 ನಿಲ್ದಾಣಗಳಲ್ಲಿ 12 ನೇರ ಚಾರ್ಜಿಂಗ್ ಕೇಂದ್ರಗಳಾಗಿದ್ದು ಉಳಿದ ಕೇಂದ್ರಗಳು ಎಸಿ ಕೇಂದ್ರಗಳು ಅಕ್ಟೋಬರ್ ಅಥವಾ ನವೆಂಬರ್ ವೇಳೆಗೆ ಸಿದ್ದವಾಗಲಿದೆ. ಪ್ರತಿ ಎಸಿ ಕೇಂದ್ರಗಳು ತಲಾ 1 ಲಕ್ಷ ರೂಪಾಯಿ ವೆಚ್ಚದಲ್ಲಿ ತಯಾರಾಗುತ್ತಿದೆ.
ದ್ವಿಚಕ್ರ ವಾಹನಗಳ ಚಾರ್ಜಿಂಗ್ ಗೆ ಒಂದೂವರೆ ಗಂಟೆಗಳು ಮತ್ತು ನಾಲ್ಕ ಚಕ್ರದ ವಾಹನಗಳ ಚಾರ್ಜಿಂಗ್ ಗೆ 5ರಿಂದ 6 ಗಂಟೆಗಳು ಬೇಕಾಗಬಹುದು. 12 ನೇರ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಯ ವೆಚ್ಚ ಸುಮಾರು 3.94 ಕೋಟಿ ರೂಪಾಯಿಗಳು ಬೇಕಾಗಬಹುದು ಮತ್ತು ಈ ಕೇಂದ್ರಗಳಲ್ಲಿ ನಾಲ್ಕು ಚಕ್ರದ ವಾಹನಗಳನ್ನು ಕೇವಲ 90 ನಿಮಿಷಗಳಲ್ಲಿ ಚಾರ್ಜ್ ಮಾಡಬಹುದಾಗಿದೆ. ಪ್ರಸ್ತುತ ನಗರದಲ್ಲಿ 7 ಸಾವಿರ ವಿದ್ಯುತ್ ಚಾರ್ಜಿಂಗ್ ಕೇಂದ್ರಗಳಿದ್ದು ಅವುಗಳಲ್ಲಿ ಬಹುತೇಕ ದ್ವಿಚಕ್ರ ವಾಹನಗಳನ್ನು ಚಾರ್ಜ್ ಮಾಡುವ ಕೇಂದ್ರಗಳಾಗಿವೆ.
ಎಸಿ ಚಾರ್ಜಿಂಗ್ ವ್ಯವಸ್ಥೆಯನ್ನು ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ಬಿಬಿಎಂಪಿ, ಬಿಎಂಆರ್ ಸಿಎಲ್, ಬಿಎಂಟಿಸಿಗಳಲ್ಲಿ ಅಳವಡಿಸಲಾಗುತ್ತಿದ್ದು ಸರ್ಕಾರಿ ನೌಕರರು ಎಲೆಕ್ಟ್ರಾನಿಕ್ ವಾಹನಗಳ ಸವಾರರು ತಮ್ಮ ಬ್ಯಾಟರಿಗಳನ್ನು ಸುಲಭವಾಗಿ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಇಂತಹ ಚಾರ್ಜಿಂಗ್ ಕೇಂದ್ರಗಳಿಗೆ ಕಡಿಮೆ ಸ್ಥಳ ಮತ್ತು ಮೂಲಸೌಕರ್ಯ ಸಾಕಾಗುತ್ತಿದ್ದು ಒಂದೇ ಬಾರಿಗೆ ಮೂರು ವಾಹನಗಳನ್ನು ಚಾರ್ಜ್ ಮಾಡಿಕೊಳ್ಳಬಹುದು.
Advertisement