ಕೆಲವೇ ವಾರಗಳ ಹಿಂದೆ ಟೈಮ್ಸ್ ಮ್ಯಾಗಜೀನ್ ಹಂಪಿಯನ್ನು ವಿಶ್ವ ಪಾರಂಪರಿಕ ತಾಣವನ್ನಾಗಿ ಗುರುತಿಸಿತ್ತು. ಇದನ್ನು ಸಂಭ್ರಮದಿಂದ ಸ್ವಾಗತಿಸುವ ವೇಳೆಗೆ, ಸ್ಮಾರಕಗಳನ್ನು ನೆಲಕ್ಕುರುಳಿಸುತ್ತಿರುವ ವಿಡಿಯೋ ವೈರಲ್ ಆಗತೊಡಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಿದೆ. ಗಜಶಾಲೆಯ ಹಿಂಭಾಗದ ವಿಷ್ಣು ದೇವಾಲಯ ಆವರಣದ ಬೃಹತ್ ಕಲ್ಲಿನ ಕಂಬಗಳನ್ನು ಸ್ಥಳಿಯರು ನೆಲಕ್ಕೆ ಉರುಳಿಸಿದ್ದಾರೆ.