ಬೆಂಗಳೂರು: ರೂಪದರ್ಶಿಗೆ ಕಿರುಕುಳ ನೀಡಿದ ವ್ಯಕ್ತಿಯನ್ನು ಬಂಧಿಸಿದ ಸೈಬರ್ ಕ್ರೈಂ ಪೊಲೀಸರು

ರೂಪದರ್ಶಿಗೆ ಅಶ್ಲೀಲ ಸಂದೇಶವನ್ನು ಕಳುಹಿಸಿದ ಆರೋಪದ ಮೇಲೆ 52 ವರ್ಷದ ಮ್ಯಾಗಜಿನ್ ವಿನ್ಯಾಸಕನನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರೂಪದರ್ಶಿಗೆ ಅಶ್ಲೀಲ ಸಂದೇಶವನ್ನು ಕಳುಹಿಸಿದ ಆರೋಪದ ಮೇಲೆ 52 ವರ್ಷದ ಮ್ಯಾಗಜಿನ್ ವಿನ್ಯಾಸಕನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ತಮ್ಮಣ್ಣ ಪಕೇರಪ್ಪ ಹಡಿಮಣಿ ಎಂದು ಗುರುತಿಸಲಾಗಿದ್ದು ಬೆಳಗಾವಿ ಮೂಲದವನಾಗಿದ್ದಾನೆ. ಪ್ರಸ್ತುತ ಮೈಸೂರಿನ ವಿಜಯನಗರದಲ್ಲಿ ನೆಲೆಸಿದ್ದಾನೆ.

ವ್ಯಕ್ತಿಯೊಬ್ಬ ಫೇಸ್ ಬುಕ್ ನಲ್ಲಿ ಪರಿಚಯವಾಗಿ ತನ್ನ ವೈಯಕ್ತಿಕ ಮಾಹಿತಿ ಮತ್ತು ಮೊಬೈಲ್ ಸಂಖ್ಯೆಯನ್ನು ಪಡೆದನು. ಕೆಲ ದಿನಗಳು ಕಳೆದಂತೆ ಫೇಸ್ ಬುಕ್ ಮೆಸೆಂಜರ್ ಮತ್ತು ವಾಟ್ಸಾಪ್ ಗಳಲ್ಲಿ ತನಗೆ ಅಶ್ಲೀಲ ಫೋಟೋಗಳು ಮತ್ತು ಸಂದೇಶಗಳನ್ನು ಕಳುಹಿಸಲಾರಂಭಿಸಿದ. ತನ್ನ ಜೊತೆ ಸಲುಗೆಯಿಂದ ವರ್ತಿಸುವಂತೆಯೂ ಕೇಳಿಕೊಂಡನು. ಕಿರುಕುಳದಿಂದ ಬೇಸತ್ತು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಹಡಿಮಣಿಯನ್ನು ಪತ್ತೆಹಚ್ಚಿ ಗೋಕಾಕ್ ನಲ್ಲಿ ಬಂಧಿಸಿದರು.

ಪೊಲೀಸರು ವಿಚಾರಣೆ ನಡೆಸಿದಾಗ ತಾನು ವರ್ನಾಕ್ಯುಲರ್ ಮತ್ತು ಇಂಗ್ಲಿಷ್ ಸಾಪ್ತಾಹಿಕದಲ್ಲಿ ವಿನ್ಯಾಸಕನಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾನೆ. ಕಳೆದ ಜನವರಿ 24ರಿಂದ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ. ರೂಪದರ್ಶಿ ಅಶ್ಲೀಲ ಫೋಟೋದ ಸ್ಕ್ರೀನ್ ಶಾಟ್ ತೆಗೆದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ ಆತನಿಂದ ಎಚ್ಚರಿಕೆಯಿಂದಿರುವಂತೆ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸದಂತೆ ಕೇಳಿಕೊಂಡಿದ್ದೆ ಎನ್ನುತ್ತಾರೆ.

ಫೇಸ್ ಬುಕ್ ನಲ್ಲಿ ಸ್ಕ್ರೀನ್ ಶಾಟ್ ಕಂಡರೂ ಸಹ ಮಹಿಳೆ ಮೇಲೆ ಕಿರುಕುಳ ಮುಂದುವರಿಸಿದ್ದಾನೆ. ಆಕೆಯ ಫೇಸ್ ಬುಕ್ ಮುಖಪುಟದಲ್ಲಿ ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾನೆ. ಆತನ ಕಿರುಕುಳದಿಂದ ಬೇಸತ್ತು ರೂಪದರ್ಶಿ ಕ್ರೈಂ ವಿಭಾಗ ಪೊಲೀಸರಿಗೆ ದೂರು ನೀಡಿದ್ದಾರೆ.

ಹಡಿಮಣಿ ನಾಲ್ಕು ವರ್ಷಗಳ ಹಿಂದೆ ಬೇರೆ ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪ ಕೂಡ ಕೇಳಿಬಂದಿದೆ. ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಅದರ ವಿಚಾರಣೆ ಕೋರ್ಟ್ ನಲ್ಲಿ ನಡೆಯುತ್ತಿದೆ. ಅಪರಿಚಿತರ ಫ್ರೆಂಡ್ ರಿಕ್ವೆಸ್ಟ್ ತೆಗೆದುಕೊಳ್ಳಬಾರದು ಮತ್ತು ಅವರ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬಾರದು ಎಂದು ಸೈಬರ್ ಕ್ರೈಂ ಪೊಲೀಸರು ಜನತೆಗೆ ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com