ಬೆನ್ನು ಬಿದ್ದು ಚುಡಾಯಿಸುತ್ತಿದ್ದ ಯುವಕನಿಗೆ ಕಾಲಿನಲ್ಲಿ ಒದ್ದು, ಚಪ್ಪಲಿಯಿಂದ ಹೊಡೆದ ಯುವತಿ, ವಿಡಿಯೋ ವೈರಲ್!

ಬಹಳ ದಿನಗಳಿಂದ ಬೆನ್ನು ಬಿದ್ದು ಚುಡಾಯಿಸುತ್ತಿದ್ದ ಯುವಕನಿಗೆ ಯುವತಿ ಧೈರ್ಯ ಮಾಡಿ ಸಾರ್ವಜನಿಕವಾಗಿ ಕಾಲಿನಿಂದ ಒದ್ದು, ಚಪ್ಪಲಿಯಿಂದ ಹೊಡೆದಿರುವ ಘಟನೆ ಉಡುಪಿಯ ಕಾಪು ಪೇಟೆಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಉಡುಪಿ: ಬಹಳ ದಿನಗಳಿಂದ ಬೆನ್ನು ಬಿದ್ದು ಚುಡಾಯಿಸುತ್ತಿದ್ದ ಯುವಕನಿಗೆ ಯುವತಿ ಧೈರ್ಯ ಮಾಡಿ ಸಾರ್ವಜನಿಕವಾಗಿ ಕಾಲಿನಿಂದ ಒದ್ದು, ಚಪ್ಪಲಿಯಿಂದ ಹೊಡೆದಿರುವ ಘಟನೆ ಉಡುಪಿಯ ಕಾಪು ಪೇಟೆಯಲ್ಲಿ ನಡೆದಿದೆ.
ಯುವಕನಿಗೆ ಯುವತಿ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಲೇಮಾನ್ ಎಂಬ ಯುವಕ ಚುಡಾಯಿಸಿದ್ದು ಆರೋಪಿ ಸ್ಥಳೀಯ ಯುವತಿಗೆ ತುಂಬಾ ದಿನದಿಂದ ಕೀಟಲೆ ಮಾಡುತ್ತಿದ್ದನು. ಇದರಿಂದ ಕೋಪಗೊಂಡ ಯುವತಿ ಇಂದು ಆತನಿಗೆ ಚಪ್ಪಲಿಯಿಂದ ಹೊಡೆದಿದ್ದಾಳೆ.
ಮೊದಲಿಗೆ ಯುವತಿ ರಸ್ತೆಯಲ್ಲೇ ಯುವಕನನ್ನು ಕೆಳಗೆ ಕೆಡವಿ ಕಾಲಿನಿಂದ ಒದ್ದಿದ್ದಾಳೆ. ಬಳಿಕ ಕಾಲಿನಲ್ಲಿದ್ದ ಚಪ್ಪಲಿಯನ್ನು ತೆಗೆದು ಹಿಗ್ಗಮುಗ್ಗಾ ಬಾರಿಸಿದ್ದಾಳೆ. ಇದನ್ನು ವ್ಯಕ್ತಿಯೋರ್ವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com