• Tag results for thrash

ಆಂಧ್ರಪ್ರದೇಶ:ಡಾಕ್ಟರ್ ಕೈಗಳನ್ನು ಸರಪಳಿಯಿಂದ ಕಟ್ಟಿ, ರಸ್ತೆ ಮೇಲೆ ಎಳೆದಾಡಿ ಹಲ್ಲೆಗೈದ ವೈಜಾಗ್ ಪೊಲೀಸರು

ವೈದ್ಯರಿಗೆ ಎನ್-95 ಮಾಸ್ಕ್ ಕೊರತೆ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದ ಕಾರಣಕ್ಕೆ  ಎರಡು ತಿಂಗಳ ಹಿಂದೆ ಸರ್ಕಾರದಿಂದ ಅಮಾನತುಗೊಳಗಾಗಿದ್ದ ಅರವಳಿಕೆ ತಜ್ಞ ವೈದ್ಯರೊಬ್ಬರ ಕೈಗಳನ್ನು ಸರಪಳಿಯಿಂದ ಕಟ್ಟಿ ರಸ್ತೆ ಮೇಲೆ ಎಳೆದಾಡಿ ವಿಶಾಖಪಟ್ಟಣಂ ಪೊಲೀಸರು ಅಮಾನುಷವಾಗಿ ಹಲ್ಲೆ ಗೈದಿರುವ ಘಟನೆ ನಡೆದಿದೆ.

published on : 17th May 2020

ಪ.ಬಂಗಾಳ: ಹಾಲು ತರಲು ಮನೆಯಿಂದ ಹೊರಗೆ ಬಂದಿದ್ದ ವ್ಯಕ್ತಿ ಪೊಲೀಸ್ ಲಾಠಿ ಏಟಿಗೆ ಬಲಿ

ಮಹಾಮಾರಿ ಕೊರೋನಾ ವೈರಸ್ ಹರಡುವುದನ್ನು ತಡೆಯುವುದಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ಹಾಲು ಹಾಗೂ ಇತರೆ ಅಗತ್ಯ ವಸ್ತುಗಳ ಖರೀದಿಗೆ ಸರ್ಕಾರ ಅನುಮತಿ ನೀಡಿದೆ.

published on : 26th March 2020

ಹುಡುಗಿ ಚುಡಾಯಿಸಿದ್ದ ಆರೋಪ: ಹಾಸ್ಟೆಲ್ ನುಗ್ಗಿ ದಾಂದಲೆ ನಡೆಸಿದ ಯುವಕರ ಗುಂಪು

ಯುವತಿಯೊಬ್ಬಳನ್ನು ಚುಡಾಸಿದ ಕಾರಣಕ್ಕೆ ಯುವಕರ ಗುಂಪೊಂದು ಹಾಸ್ಟೆಲ್'ಗೆ ನುಗ್ಗಿ ದಾಂದಲೆ ನಡೆಸಿ ವಸತಿ ನಿಲಯದ ಕಿಟಕಿ ಗಾಜುಗಳನ್ನೆಲ್ಲಾ ಪುಡಿ ಪುಡಿ ಮಾಡಿರುವ ಘಟನೆ ಸಂಗಮೇಶ್ವರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಹಾಸ್ಟೆಲ್ ನಲ್ಲಿ ನಡೆದಿದೆ. 

published on : 24th February 2020

ಯಾರೂ ಇಲ್ಲದ ವೇಳೆಯಲ್ಲಿ ವಿದ್ಯಾರ್ಥಿನಿ ಮನೆಗೆ  ನುಗ್ಗಿದ ಬಿಇಒ : ಸ್ಥಳೀಯರಿಂದ ಹಲ್ಲೆ

ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಿಇಒ (ಕ್ಷೇತ್ರ ಶಿಕ್ಷಣಾಧಿಕಾರಿ)  ವಿದ್ಯಾರ್ಥಿನಿಯನ್ನು ಭೇಟಿ ಮಾಡಿದ ಆರೋಪದಲ್ಲಿ ಅವರ ಮೇಲೆ ಪೋಷಕರು ಹಾಗೂ ಸ್ಥಳೀಯರು ಹಲ್ಲೆ ನಡೆಸಿರುವ ಘಟನೆ ಗದಗ ಜಿಲ್ಲೆ ಮುಂಡರಗಿಯಲ್ಲಿ ನಡೆದಿದೆ.

published on : 23rd February 2020

ಭೂ ಕಬಳಿಸಿ ದರ್ಪ ತೋರಿದ ಮುಖಂಡ: ಪ್ರತಿಭಟಿಸಿದ್ದಕ್ಕೆ ಶಿಕ್ಷಕಿ ಕೈಕಾಲು ಕಟ್ಟಿ ಅಮಾನವೀಯ ಮೆರೆದ ಟಿಎಂಸಿ ಕಾರ್ಯಕರ್ತರು

ರಸ್ತೆ ನಿರ್ಮಾಣಕ್ಕಾಗಿ ಭೂಮಿ ಕಬಳಿಸಿದ್ದೂ ಅಲ್ಲದೆ, ವಿರೋಧ ವ್ಯಕ್ತಪಡಿಸಿದ್ದೆ ಶಿಕ್ಷಕಿಯೊಬ್ಬರ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ, ರಸ್ತೆಯ ಮೇಲೆ ಎಳೆದೊಯ್ದು ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್ ಪುರ್ ನ ಗಂಗ್ರಾಮ್ ಪುರ್ ಎಂಬಲ್ಲಿ ನಡೆದಿದೆ. 

published on : 3rd February 2020

ವಲಯಾರ್ ಸಹೋದರಿಯರ ಸಾವು ಪ್ರಕರಣ: ಖುಲಾಸೆಗೊಂಡಿದ್ದ ವ್ಯಕ್ತಿ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು

ಕೇರಳದ ಪಾಲಕ್ಕಾಡ್ ಜಿಲ್ಲೆಯ ವಲಯಾರ್‌ನಲ್ಲಿ ಅಪ್ರಾಪ್ತ ದಲಿತ ಸೋದರಿಯರ ಸಾವಿನ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ  ಆರೋಪಿ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ ಘಟನೆ ಶನಿವಾರ ನಡೆದಿದೆ.

published on : 7th December 2019

ಬೆಂಗಳೂರು: ಯುವತಿಗೆ ಬ್ಲ್ಯಾಕ್ ಮೇಲ್ ಮಾಡಿದ್ದವನಿಗೆ ಗೂಸಾ

ಯುವತಿ ಜೊತೆಗಿನ ಖಾಸಗಿ ದೃಶ್ಯವನ್ನು ಸೆರೆಹಿಡಿದು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಯುವಕನಿಗೆ ಗೂಸಾ ನೀಡಿರುವ ಘಟನೆ ನಗರದ ರಾಮಮೂರ್ತಿನಗರದಲ್ಲಿ ಶನಿವಾರ ನಡೆದಿದೆ.

published on : 28th September 2019

ಬೆಂಗಳೂರು: ವ್ಹೀಲಿಂಗ್ ವೀರರಿಗೆ ಗ್ರಾಮಸ್ಥರಿಂದ ಧರ್ಮದೇಟು!

ವ್ಹೀಲಿಂಗ್ ಮಾಡುತ್ತಿದ್ದ ಮೂವರು ಯುವಕರನ್ನು ತಲಘಟ್ಟಪುರದ ಬಳಿಯ ಹೆಮ್ಮಿಗೆಪುರದ ಗ್ರಾಮಸ್ಥರು ಹಿಡಿದು ಧರ್ಮದೇಟು ಕೊಟ್ಟು ತಕ್ಕ ಪಾಠ ಕಲಿಸಿದ್ದಾರೆ....

published on : 6th August 2019

ಮಹಾರಾಷ್ಟ್ರ: ಥಾಣೆಯಲ್ಲಿ ಮುಸ್ಲಿಂ ಕ್ಯಾಬ್ ಡ್ರೈವರ್ ಮೇಲೆ ಹಲ್ಲೆ, ಜೈ ಶ್ರೀರಾಮ್ ' ಹೇಳುವಂತೆ ತಾಕೀತು

ಮಹಾರಾಷ್ಟ್ರದ ಥಾಣೆಯಲ್ಲಿ ಮುಸ್ಲಿಂ ಸಮುದಾಯದ ಒಲಾ ಕ್ಯಾಬ್ ಡ್ರೈವರ್ ಮೇಲೆ ಗುಂಪೊಂದು ಹಲ್ಲೆ ನಡೆಸಿದ್ದು, ಶ್ರೀರಾಮ ಘೋಷಣೆ ಕೂಗುವಂತೆ ಒತ್ತಾಯಿಸಿದೆ.

published on : 29th June 2019

ಜಾರ್ಖಂಡ್: ಥಳಿತಕ್ಕೊಳಗಾದ ಮುಸ್ಲಿಂ ಯುವಕ ಸಾವು, 11 ಮಂದಿ ಬಂಧನ

ಕಳ್ಳತನದ ಶಂಕೆ ಮೇಲೆ ಆಕ್ರೋಶಿತ ಗುಂಪಿನಿಂದ ಹಿಗ್ಗಾಮುಗ್ಗ ಥಳಿಸಿಕೊಂಡಿದ್ದ 24 ವರ್ಷದ ಯುವಕ ಮೃತಪಟ್ಟಿದ್ದು ಘಟನೆ ಸಂಬಂಧ ...

published on : 25th June 2019

ಕಾಶ್ಮೀರ: ಶಾಲೆಗೆ ತಡವಾಗಿ ಬಂದ ಮಕ್ಕಳನ್ನು ಹಿಗ್ಗಾಮುಗ್ಗಾ ಥಳಿಸಿದ ಶಿಕ್ಷಕ, ವಿಡಿಯೋ ವೈರಲ್

ಶಾಲೆಗೆ ಕೇವಲ 10 ನಿಮಿಷ ತಡವಾಗಿ ಆಗಮಿಸಿದ ವಿದ್ಯಾರ್ಥಿಗಳಿಗೆ ಶಿಕ್ಷಕನೊಬ್ಬ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಜಮ್ಮು ಮತ್ತು ಕಾಶ್ಮೀರದ....

published on : 20th June 2019

ಪತ್ರಕರ್ತನ ಮೇಲೆ ಹಲ್ಲೆ, ಬಾಯಿಗೆ ಮೂತ್ರ ಮಾಡಿ ಅಮಾನವೀಯತೆ ಮೆರೆದ ಯುಪಿ ಪೊಲೀಸರು!

ರೈಲು ಹಳಿತಪ್ಪಿದ್ದನ್ನು ವರದಿ ಮಾಡಲು ತೆರಳಿದ್ದ ಪತ್ರಕರ್ತನ ಮೇಲೆ ಉತ್ತರ ಪ್ರದೇಶ ರೈಲ್ವೆ ಪೊಲೀಸರು ಹಲ್ಲೆ ನಡೆಸಿ, ಆತನ ಬಾಯಲ್ಲಿ ಮೂತ್ರ ವಿಸರ್ಜನೆ ಮಾಡಿ...

published on : 12th June 2019

ಮೈಸೂರು: ದೇವಾಲಯ ಪ್ರವೇಶಿಸಿದ ದಲಿತ ವ್ಯಕ್ತಿಯ ಮೇಲೆ ಹಲ್ಲೆ

ದೇವಾಲಯ ಪ್ರವೇಶಿಸಿದ ದಲಿತ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಹಾಕಿ ಮೇಲ್ವರ್ಗದ ಜನರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮೈಸೂರು- ಊಟಿ ರಸ್ತೆಯ ವೀರಾನಪುರ ಗೇಟ್ ಬಳಿಯ ಗ್ರಾಮದವೊಂದರಲ್ಲಿ ನಡೆದಿದೆ.

published on : 11th June 2019

ಗುಜರಾತ್ : ಮಹಿಳಾ ಮುಖಂಡೆ ಮೇಲೆ ಹಲ್ಲೆ ಮಾಡಿದ ಬಿಜೆಪಿ ಶಾಸಕ, ನಂತರ ಕ್ಷಮೆಯಾಚನೆ

ನೀರಿನ ಸಮಸ್ಯೆ ಬಗ್ಗೆ ಹೇಳಿಕೊಳ್ಳಲು ಬಂದಿದ್ದ ಮಹಿಳಾ ಮುಖಂಡೆ ಮೇಲೆ ಹಲ್ಲೆ ನಡೆಸಿದ್ದ ಬಿಜೆಪಿ ಶಾಸಕ ಬಲರಾಮ್ ತವಾನಿ ಇಂದು ಆಕೆಯ ಬಳಿ ಕ್ಷಮೆಯಾಚಿಸಿದ್ದಾನೆ

published on : 3rd June 2019

ಮಧ್ಯ ಪ್ರದೇಶ: ಗೋ ಸಾಗಟದ ವದಂತಿ, ಮಹಿಳೆ ಸೇರಿ ಮೂವರ ಮೇಲೆ ಹಲ್ಲೆ

ಮಧ್ಯ ಪ್ರದೇಶದ ಹಳ್ಳಿಯೊಂದರಲ್ಲಿ ಆಟೋರಿಕ್ಷಾವೊಂದರಲ್ಲಿ ಅಕ್ರಮವಾಗಿ ಗೋವನ್ನು ಸಾಗಟ ಮಾಡಲಾಗುತ್ತಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಗುಂಪೊಂದು ಮಹಿಳೆ ಸೇರಿ ಮೂವರ ಮೇಲೆ ಮನಬಂದಂತೆ ಥಳಿಸಿರುವ ಘಟನೆ ನಡೆದಿದೆ.

published on : 25th May 2019
1 2 >