ಇದುವೇ ನಿಜವಾದ ಸರ್ಜಿಕಲ್ ಸ್ಟ್ರೈಕ್! ಬೆಂಗಳೂರಿನ ಕಾಶ್ಮೀರಿ ಯುವಕನ ವಿಕೃತ ಮನಸ್ಥಿತಿ ಅನಾವರಣ

ಇದೇ ನಿಜವಾದ ಸರ್ಜಿಕಲ್ ಸ್ಟ್ರೈಕ್! ಬೆಂಗಳುರಿನಲ್ಲಿ ವ್ಯಾಸಂಗ ಮಾಡಿದ್ದ ಕಾಶ್ಮೀರಿ ಯುವಕ ಅಬೀದ್ ಮಲಿಕ್ ನಿನ್ನೆ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರಿದ್ದ ವಾಹನದ ಮೇಲೆ ನಡೆದ.....
ಆಬೀದ್ ಮಲಿಕ್
ಆಬೀದ್ ಮಲಿಕ್
Updated on
ಬೆಂಗಳೂರು: ಇದೇ ನಿಜವಾದ ಸರ್ಜಿಕಲ್ ಸ್ಟ್ರೈಕ್! ಬೆಂಗಳುರಿನಲ್ಲಿ ವ್ಯಾಸಂಗ ಮಾಡಿದ್ದ ಕಾಶ್ಮೀರಿ ಯುವಕ ಅಬೀದ್ ಮಲಿಕ್ ನಿನ್ನೆ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರಿದ್ದ ವಾಹನದ ಮೇಲೆ ನಡೆದ ಉಗ್ರ ದಾಳಿಯನ್ನು ಬಣ್ಣಿಸಿದ್ದು ಹೀಗೆ!
ಬೆಂಗಳೂರು ವಿವಿಯಲ್ಲಿ ಓದಿದ್ದ ಕಾಶ್ಮೀರೀ ಯುವಕ ಆಬೀದ್ ಮಲಿಕ್ ತನ್ನ ಫೇಸ್​ಬುಕ್ ಪೋಸ್ಟ್​ನಲ್ಲಿ  ಉಗ್ರದಾಳಿ ನಡೆಸಿ ಆತ್ಮಾಹುತಿ ಮಾಡಿಕೊಂಡ ಉಗ್ರನಿಗೆ ಸಂತಾಪ ಸೂಚಿಸಿದ್ದಾನೆ.
ಕಾಶ್ಮೀರದ ಪುಲ್ವಾಮಾದಲ್ಲಿ ನಿನ್ನೆ ಸಿಆರ್​ಪಿಎಫ್ ಯೋಧರನ್ನು ಹೊತ್ತೊಯ್ಯುತ್ತಿದ್ದ ಬಸ್ಸಿನ ಮೇಲೆ ಉಗ್ರರ ದಾಳಿ ನಡೆದಿದ್ದು ಇದರಲ್ಲಿ ಸುಮಾರು ೪೦ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು.
ಮಲಿಕ್ ಮಾತ್ರ ಈ ದಾಳಿ ನಡೆಸಿದ ಆತ್ಮಾಹುತಿ ಬಾಂಬರ್ ಆದಿಲ್ ಅಹ್ಮದ್​ ಆತ್ಮಕ್ಕೆ ಶಾಂತಿ ಸಿಕ್ಕಲಿ, ಎಂದಿದ್ದಲ್ಲದೆ ಆತನ ಸಾವಿಗೆ "RIP Bro” ಎಂದೂ ಕಮೆಂಟ್ ಮಾಡಿದ್ದಾನೆ. ಆದರೆ ಈ ಸಂದೇಶ ಶಾಂತಿಭಂಗಕ್ಕೆ, ಸಮುದಾಯದ ನಿಲುವಿಗೆ ವಿರುದ್ಧವಾಗಿರುವ ಕಾರಣ ಫೇಸ್ ಬುಕ್ ಇದನ್ನು ಅಳಿಸಿ ಹಾಕಿದೆ.
ಖಾಸಗಿ ಸಂಸ್ಥೆಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುವ ಮಲಿಕ್ ಬ್ರದರ್​ವುಡ್ ಎಂಬಾತನ ಪೋಸ್ಟ್ ಶೇರ್ ಮಾಡಿಕೊಂಡಿದ್ದು ಸಧ್ಯದಲ್ಲಿ ಕಾಶ್ಮೀರಿ ಜನರ ಜೀವಕ್ಕಿರುವ ಅಪಾಯದ ಕುರಿತು ಪೋಸ್ಟ್ ನಲ್ಲಿ ಎಚ್ಚರಿಕೆ ನೀಡಲಾಗಿದೆ.
ಈತ ತನ್ನ ಫೇಸ್ ಬುಕ್ ಖಾತೆಯಲ್ಲಿ ನೀಡಿರುವ ಮಾಹಿತಿಯಂತೆ ಈತ ಬೆಂಗಳೂರಿನ ಜಯನಗರ ಸಿಟಿ ಕಾಲೇಜಿನಲ್ಲಿ ಓದಿದ್ದನು. ಅಲ್ಲದೆ ಬೆಂಗಳೂರು ವ್ಯಾಲಿ ಬಾಯ್ಸ್ ಕ್ರಿಕೆಟ್ ಕ್ಲಬ್  ನಲ್ಲಿ ಸಹ ಈತ ಸಕ್ರಿಯನಾಗಿದ್ದನೆನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com