
ಮಂಗಳೂರು: ವೃದ್ಧ ದಂಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರು ಸಮೀಪ ಕೋಟೆಕಾರು ಬೀರಿಯಲ್ಲಿ ನಡೆದಿದೆ.
ದೇವರಾಜ್ (74) ಹಾಗೂ ವಸಂತಿ (64) ಆತ್ಮಹತ್ಯೆ ಮಾಡಿಕೊಂಡ ವೃದ್ಧ ದಂಪತಿ.
ಆಕಾಶವಾಣಿಯ ನಿವೃತ್ತ ಉದ್ಯೋಗಿ ದೇವರಾಜ್ ಗಾಣಿಗ ಹಾಗೂ ಅವರ ಪತ್ನಿ ವಸಂತಿ ಅವರಿಗೆ ಮಕ್ಕಳಿರಲಿಲ್ಲ. ದೀರ್ಘಕಾಲ ಅಸ್ವಸ್ಥತೆಯಿಂದ ಇಬ್ಬರೂ ಬಳಲುತ್ತಿದ್ದರು. ವಸಂತಿ ಅವರ ಅಣ್ಣ ಮಗಳಾದ ಶ್ವೇತ ಎಂಬುವವರಿಗೆ ಬೆಕ್ಕು ಹಾಗೂ ನಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಡೆತ್ ನೋಟ್‌ನಲ್ಲಿ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ.
ಸ್ಥಳಕ್ಕೆ ಉಳ್ಳಾಲ ಪೊಲೀಸ್ ಇನ್‌ಸ್ಪೆಕ್ಟರ್ ಗೋಪಿಕೃಷ್ಣ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement