ಬೆಂಗಳೂರು: ಪತ್ನಿಗೆ ಎಚ್ ಐವಿ ಸೋಂಕು ಹರಡಿದ ಪತಿಯ ವಿರುದ್ಧ ದೂರು ದಾಖಲು

ಇತ್ತೀಚೆಗಷ್ಟೇ ವಿವಾಹವಾದ ಮಹಿಳೆಯೊಬ್ಬರು ತಮ್ಮ ಪತಿಯ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಇತ್ತೀಚೆಗಷ್ಟೇ ವಿವಾಹವಾದ ಮಹಿಳೆಯೊಬ್ಬರು ತಮ್ಮ ಪತಿಯ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನ್ನ ಪತಿ ತನಗೆ ಎಚ್ ಐ ವಿ ಸೋಂಕು ಹಬ್ಬಿಸಿರುವುದಾಗಿ ದೂರಿನಲ್ಲಿ ದಾಖಲಿಸಿದ್ದಾರೆ.
ಆರೋಪಿಯನ್ನು ಇನ್ನೂ ಬಂಧಿಸಿಲ್ಲವೆಂದು ಪೊಲೀಸರು ಹೇಳಿದ್ದಾರೆ.  ಸಂತ್ರಸ್ತ ಮಹಿಳೆಯು ಎಚ್ ಐ ವಿ ಸೋಂಕು ಪೀಡಿತಳಾಗಿದ್ದಾಳೆ ಎಂದ ಆಕೆಯ ವೈದ್ಯಕೀಯ ಪರೀಕ್ಷೆ ವರದಿಯಿಂದ ತಿಳಿದು ಬಂದಿದೆ, 21 ವರ್ಷದ ಬಿಕಾಮ್ ಪದವೀಧರೆಯಾಗಿರುವ ಸಂತ್ರಸ್ತೆ ಪ್ರಕರಣ ದಾಖಲಿಸಿದ್ದಾರೆಂದು ಪೊಲೀಸರು ಹೇಳಿದ್ದಾರೆ,
ಸಲ್ಮಾನ್(ಹೆಸರು ಬದಲಾಯಿಸಲಾಗಿದೆ) ತಾನು ಎಚ್ ಐ ವಿ ಸೋಂಕು ಪೀಡಿತ ಎಂದು ಈ ಮೊದಲ ಆತನಿಗ ತಿಳದಿತ್ತು, ಹೀಗಿದ್ದರೂ ಆತನ ಪೋಷಕರು ವಿಷಯವನ್ನು ಯಾರಿಗೂ ತಿಳಿಸದಂತೆ ಹೇಳಿ ಆತನಿಗೆ ಬಲವಂತವಾಗಿ ವಿವಾಹ ಮಾಡಿದ್ದರು ಮಹಿಳೆಯ ವರದಕ್ಷಿಣೆ ಕಿರುಕುಳ ಸೇರಿದಂತೆ ಎಲ್ಲಾ ಆಯಮಾಗಳಿಂದಲೂ ತನಿಖೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ.
ಸರ್ಕಾರಿ ಕಾಲೇಜಿನಲ್ಲಿ ಬಿ.ಕಾಮ್ ಪದವಿ ಪೂರ್ಣಗೊಳಿಸಿದ ನಂತರ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ, ಪೀಣ್ಯದಲ್ಲಿರುವ ನನ್ನ ಮನೆಗೆ ಮದುವೆ ಬ್ರೋಕರ್ ಆೋಪಿಯ ಕುಟುಂಬದವರನ್ನು ಕರೆತಂದರು. ಮದುವೆಯಾಗಿ 7 ತಿಂಗಳ ನಂತರ ನಾನು ಪದೇ ಪದೇ ಅನಾರೋಗ್ಯಕ್ಕೊಳಗಾಗುತ್ತಿದ್ದೆ,  ಆ ವೇಳೆ ವೈದ್ಯರು ನನಗೆ ಸೋಂಕು ತಗುಲಿರುವುದಾಗಿ ತಿಳಿಸಿದರು ಎಂದು ಸಂತ್ರಸ್ತೆ ತಿಳಿಸಿದ್ದಾಳೆ.
ನನ್ನ ಪತಿ ಹಾಗೂ ಆತನ ಪೋಷಕರನ್ನು ಬಂಧಿಸಲು ಪೊಲೀಸರು ಏಕೆ ಸಮಯ ಕೇಳುತ್ತಿದ್ದಾರೆ ಎಂದು ನನಗೆ ಇನ್ನೂ ಅರ್ಥವಾಗುತ್ತಿಲ್ಲ, ನನ್ನ ಪತಿಯ ಸ್ನೇಹಿತ ಮಾಲತೇಶ್ ಎಂಬುವರು ಆಗಾಗ್ಗೆ ಮನಗೆ ಬರುತ್ತಿದ್ದ. ಆತನ ಜೊತೆಗೆ ಮಲಗುವಂತೆ ನನ್ನ ಪತಿ ಒತ್ತಾಯಿಸುತ್ತಿದ್ದ ಎಂದು ಆರೋಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com