ಬೆಚ್ಚಿ ಬಿದ್ದ ಕಲಬುರ್ಗಿ: ಹಾಡಹಗಲೇ ಲಾಡ್ಜ್ ಮ್ಯಾನೇಜರ್ ಬರ್ಬರ ಕೊಲೆ, ಮೃತನ ಪತ್ನಿ ತುಂಬು ಗರ್ಭಿಣಿ!

ಹಾಡಹಗಲಲ್ಲೇ ಲಾಡ್ಜ್ ಮ್ಯಾನೇಜರ್ ಒಬ್ಬನನ್ನು ನಡುರಸ್ತೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರ್ಗಿ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ನಡೆದ
ಮಲ್ಲಿಕಾರ್ಜುನ
ಮಲ್ಲಿಕಾರ್ಜುನ
Updated on: 
ಕಲಬುರ್ಗಿ: ಹಾಡಹಗಲಲ್ಲೇ ಲಾಡ್ಜ್ ಮ್ಯಾನೇಜರ್ ಒಬ್ಬನನ್ನು ನಡುರಸ್ತೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರ್ಗಿ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ನಡೆದಿದೆ.
ಗುರುವಾರ ಬೆಳಿಗ್ಗೆ ಕಲಬುರ್ಗಿ ತಾಲೂಕು ಮೇಲ್ಕುಂದ ನಿವಾಸಿ ಮಲ್ಲಿಕಾರ್ಜುನ (29) ಎಂಬಾತನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಬಸ್ ನಿಲ್ದಾಣದ ಎದುರಿನ ಕಾವೇರಿ ಲಾಡ್ಜ್ ನಲ್ಲಿ ಮ್ಯಾನೇಜರ್ ಆಗಿದ್ದ ಮಲ್ಲಿಕಾರ್ಜುನ್ ರಾತ್ರಿ ಪಾಳಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುವ ವೇಳೆ ಇಬ್ಬರು ಕ್ರೂರಿಗಳು ಮನಬಂದಂತೆ ಚಾಕುವಿನಿಂದ ಹಲ್ಲೆ ಮಾಡಿ ಹತ್ಯೆ ನಡೆಸಿದ್ದಾರೆ.
ನಡುರಸ್ತೆಯಲ್ಲೇ ನಡೆದ ಈ ದುರಂತದ ವೇಳೆ ಮಲ್ಲಿಕಾರ್ಜುನ್ ಸಹಾಯಕ್ಕಾಗಿ ಮೊರೆ ಇಡುತ್ತಿದ್ದರೂ ಸುತ್ತಲಿದ್ದ ಜನರಾರೂ ಗಾಬರಿಯಿಂದ ನಿಂತಲ್ಲೇ ನಿಂತರೇ ಹೊರತು ಸಹಾಯ ನೀಡಿರಲಿಲ್ಲ.
ಏಕಾಏಕಿ ನಡೆದ ಈ ಘಟನೆಯಿಂದ ನಗರದ ಜನ ಭೀತಿಗೊಂಡಿದ್ದು ಮದ್ಯಾಹ್ನದವರೆಗೆ ಜನರು ಭಯದಿಂದಲೇ ಇರುವಂತಾಗಿತ್ತು.
ಮೃತ ಮಲ್ಲಿಕಾರ್ಜುನ ಕಳೆದ ಮೂರು ವರ್ಷದ ಹಿಂದೆ ಮದುವೆಯಾಗಿದ್ದು ಪತ್ನಿ ಏಳು ತಿಂಗಳ ಗರ್ಭಿಣಿಯಾಗಿದ್ದಳೆಂದು ತಿಳಿದುಬಂದಿದೆ.
ಕೊಲೆಗೆ ನಿಖರ ಕಾರಣ ತಿಳಿದಿಲ್ಲ. ಘಟನೆ ಸಂಬಂಧ ಕಲಬುರ್ಗಿ ಅಶೋಕ ನಗರ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com