ವರದಕ್ಷಿಣೆ ಕಿರುಕುಳ: ಬೆಂಗಳೂರು ಪೋಲೀಸರಿಂದ ಜೈಪುರ ಮೂಲದ ಪೈಲಟ್ ಬಂಧನ

ವರದಕ್ಷಿಣೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಸಿಟಿ ಪೋಲೀಸ್ ಜೈಪುರ ವಿಮಾನ ನಿಲ್ದಾಣದಲ್ಲಿ ಖಾಸಗಿ ಏರ್ ಲೈನ್ಸ್ ನ ಪೈಲಟ್ ನನ್ನು ಬಂಧಿಸಿದ್ದಾರೆ.
ವರದಕ್ಷಿಣೆ ಕಿರುಕುಳ: ಬೆಂಗಳೂರು ಪೋಲೀಸರಿಂದ ಜೈಪುರ ಮೂಲದ ಪೈಲಟ್ ಬಂಧನ
ವರದಕ್ಷಿಣೆ ಕಿರುಕುಳ: ಬೆಂಗಳೂರು ಪೋಲೀಸರಿಂದ ಜೈಪುರ ಮೂಲದ ಪೈಲಟ್ ಬಂಧನ
ಬೆಂಗಳೂರು: ವರದಕ್ಷಿಣೆ ಪ್ರಕರಣಕ್ಕೆ ಸಂಬಂಧಿಸಿ  ಬೆಂಗಳೂರು ಸಿಟಿ ಪೋಲೀಸ್ ಜೈಪುರ ವಿಮಾನ ನಿಲ್ದಾಣದಲ್ಲಿ ಖಾಸಗಿ ಏರ್ ಲೈನ್ಸ್ ನ ಪೈಲಟ್ ನನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಯುಧಿಷ್ಟಿರ್ ಪೂನಿಯಾ ಎಂದು ಗುರುತಿಸಲಾಗಿದ್ದು ಈತ ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದನು. ಇವನ ವಿರುದ್ಧ ಎಚ್.ಎ.ಎಲ್ ಪೋಲೀಸ್ ಠಾಣೆಯಲ್ಲಿ ವರದಕ್ಷಿಣೆ ಪ್ರಕರಣ ದಾಖಲಾಗಿದ್ದು ಇದಾಗಿ ಆತ ತನ್ನ ಸ್ವಂತ ಸ್ಥಳವಾದ ರಾಜಾಸ್ಥಾನದ ಜೈಪುರಕ್ಕೆ ತೆರಳಿದ್ದಾನೆ. ಕೆಲವು ತಿಂಗಳಿನಿಂದ ಪೂನಿಯಾ ಅಲ್ಲಿಯೇ ವಾಸಿಸುತ್ತಿದ್ದ.
ಆರೋಪಿ ವಿರುದ್ಧ ನ್ಯಾಯಾಲಯದ ವಾರಂಟ್ ಜತೆಗೆ ಆಗಮಿಸಿದ್ದ ಪೊಲೀಸರು ಪೂನಿಯಾನನ್ನು ಬಂಧಿಸಿದ್ದಾರೆ. ಯುಧಿಷ್ಟಿರ್ ಪೂನಿಯಾ ಹಾಗೂ ಆತನ ತಾಯಿ  ಬಿಮಲಾ ಪೂನಿಯಾ ವಿರುದ್ಧ ಆರೋಪಿಯ ಪತ್ನಿ ಪೀನು ಸಿಂಗ್ ದೂರು ದಾಖಲಿಸಿದ್ದಳು. ಪೀನು ಹೆಚ್ಚು ವರದಕ್ಷಿಣೆ ನೀಡಬೇಕೆಂದು ಆಕೆಯ ಪತಿ ಹಾಗೂ ಅತ್ತೆ ಒತ್ತಾಯಿಸಿದ್ದಲ್ಲದೆ ದೈಹಿಕ, ಮಾನಸಿಕ ಹಿಂಸೆ ನೀಡಿದ್ದರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ನಾಲ್ಕು ವರ್ಷಗಳ ಹಿಂದೆ ಜೈಪುರದಲ್ಲಿ ಇಬ್ಬರ ವಿವಾಹವಾಗಿತ್ತು. ದಂಪತಿಗಳಿಗೆ ಒಂದು ಹೆಣ್ಣುಮಗುವು ಸಹ ಇದೆ.ಡಿಸೆಂಬರ್ 2016ರಿಂದ ಇವರು ಬೆಂಗಳೂರಿನ ಮಾರತ್ ಹಳ್ಳಿಯಲ್ಲಿ ವಾಸಿಸುತ್ತಿದ್ದರು."ನಾನು ಮದುವೆ ಸಮಯದಲ್ಲಿ ಹಣ ಹಾಗೂ ಒಡವೆ ನಿಡಿದ್ದ ನಂತರವೂ ಯುಧಿಷ್ಟಿರ್ ಹಾಗೂ ಅತ್ತೆ ಬಿಮಲಾ ನನಗೆ ಹೆಚ್ಚು ವರದಕ್ಷಿಣೆ ನೀಡಬೇಕೆಂದು ಹಿಂಸೆ ನೀಡುತ್ತಿದ್ದರು " ಆಕೆ ದೂರಿನಲ್ಲಿ ಹೇಳಿಕೊಂಡಿದ್ದಾಳೆ.
ಕಳೆದ ಅಕ್ಟೋಬರ್ ನಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಪೈಲಟ್ ವಿರುದ್ಧ ನ್ಯಾಯಾಲಯ ಬಂಧನ ವಾರಂಟ್ ಜಾರಿಗೊಳಿಸಿತ್ತು. "ಇಂದು ನಾವು ಜೈಪುರ ವಿಮಾನ ನಿಲ್ದಾಣದಲ್ಲಿ ಪೈಲಟ್ ನನ್ನು ಬಂಧ್ಸಿಇ ಬೆಂಗಳೂರಿಗೆ ಕರೆತಂದಿದ್ದೇವೆ." ಎಚ್.ಎ.ಎಲ್. ಪೋಲೀಸರು ವಿವರಿಸಿದ್ದಾರೆ. ದೂರಿನ ಅನುಸಾರ ದಂಪತಿಗಳು 2014ರಲ್ಲಿ ವಿವಾಹವಾಗಿದ್ದರು. ಇವರು ಬೆಂಗಳೂರಿಗೆ ಆಗಮಿಸುವ ಮುನ್ನ ದೆಹಲಿ ಹಾಗೂ ಗುರುಗ್ರಾಮಗಳಲ್ಲಿ ವಾಸಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com