ಬೆಂಗಳೂರಿನ 7 ಖಾಸಗಿ ನರ್ಸಿಂಗ್ ಕಾಲೇಜುಗಳು ಮಾನ್ಯತೆ ಕಳೆದುಕೊಳ್ಳುವ ಭೀತಿಯಲ್ಲಿ!

ನಗರದ ಏಳು ನರ್ಸಿಂಗ್ ಕಾಲೇಜುಗಳು ಮಾನ್ಯತೆ ಕಳೆದು ಕೊಳ್ಳುವ ಭೀತಿಯಲ್ಲಿವೆ, ಈ ಸಂಬಂಧ ಕಾಲೇಜುಗಳಿಗೆ ಸಾರ್ವಜನಿಕ ನೋಟಿಸ್ ನೀಡಲಾಗಿದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ನಗರದ ಏಳು ನರ್ಸಿಂಗ್ ಕಾಲೇಜುಗಳು  ಮಾನ್ಯತೆ ಕಳೆದು ಕೊಳ್ಳುವ ಭೀತಿಯಲ್ಲಿವೆ, ಈ ಸಂಬಂಧ ಕಾಲೇಜುಗಳಿಗೆ ಸಾರ್ವಜನಿಕ ನೋಟಿಸ್ ನೀಡಲಾಗಿದೆ.
ನಕಲಿ ಅಂಕಪಟ್ಟಿ ವಿತರಣೆ ಹಗರಣಗಳಲ್ಲಿ ಸಿಲುಕಿರುವ ಏಳು ನರ್ಸಿಂಗ್‌ ಹಾಗೂ ಅನ್ವಯಿಕ ವಿಜ್ಞಾನ ಕೋರ್ಸ್‌ ಕಾಲೇಜುಗಳಿಗೆ ಮಾನ್ಯತೆ ನವೀಕರಿಸುವುದಿಲ್ಲ ಎಂದು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್‌.ಸಚ್ಚಿದಾನಂದ ಹೇಳಿದ್ದಾರೆ. 
''ಬೆಥೆಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌, ಬೆತ್‌ ಕಾಲೇಜ್‌ ಆಫ್‌ ಫಿಜಿಯೋಥೆರಪಿ, ಹಾಸ್‌ಮ್ಯಾಟ್‌ ಕಾಲೇಜ್‌ ಆಫ್‌ ನರ್ಸಿಂಗ್‌, ಹಾಸ್‌ಮ್ಯಾಟ್‌ ಕಾಲೇಜ್‌ ಆಫ್‌ ಫಿಜಿಯೋಥೆರಪಿ ಮತ್ತು ಶಿಕ್ಷಣ ಸಂಸ್ಥೆಗಳು, ಗಾಯತ್ರಿದೇವಿ ಕಾಲೇಜ್‌ ಆಫ್‌ ನರ್ಸಿಂಗ್‌, ಪಾನ್‌ ಏಷಿಯಾ ಕಾಲೇಜ್‌ ಆಫ್‌ ನರ್ಸಿಂಗ್‌ ಕಾಲೇಜುಗಳು ನಕಲಿ ಅಂಕಪಟ್ಟಿ ಹಗರಣದಲ್ಲಿ ಸಿಲುಕಿವೆ. ಹಾಗಾಗಿ, ಈ ಕಾಲೇಜುಗಳಿಗೆ ನೋಟಿಸ್‌ ನೀಡಲಾಗಿದ್ದು, ಮಾನ್ಯತೆ ನವೀಕರಣ ಮಾಡದೇ ಇರಲು ಸಿಂಡಿಕೇಟ್‌ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
''ನಕಲಿ ಅಂಕಪಟ್ಟಿ ಹಗರಣದಲ್ಲಿ ಸಿಲುಕಿರುವ ಏಳು ಕಾಲೇಜುಗಳು ಒಂದೇ ಶಿಕ್ಷಣ ಸಂಸ್ಥೆಗೆ ಸೇರಿದವುಗಳಾಗಿವೆ. ಈ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ. ಹಾಗಾಗಿ, ಮುಂದಿನ ಶೈಕ್ಷಣಿಕ ವರ್ಷದಿಂದ ಕಾಲೇಜಿಗೆ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳದಂತೆ ಸೂಚಿಸಿದ್ದೇವೆ. ಒಂದು ವೇಳೆ ನಮ್ಮ ಮಾತನ್ನು ಮೀರಿ ಕಾಲೇಜು ಆಡಳಿತ ಮಂಡಳಿಯು ನರ್ಸಿಂಗ್‌ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡರೂ ಮಾನ್ಯತೆ ನೀಡುವುದಿಲ್ಲ'' ಎಂದು ಎಚ್ಚರಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com