ಬೆಂಗಳೂರು: ತಂದೆಯ ಸಾವಿನಿಂದ ಮನನೊಂದಿದ್ದ 16 ವರ್ಷದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯೊಬ್ಬ ಶನಿವಾರ ತನ್ನ ರೂಮಿನಲ್ಲಿ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾನೆ.
ಭುವನೇಶ್ವರಿ ನಗರದ ಧನುಷ್ ಮೃತ ಬಾಲಕ, ಈತನ ತಂದೆ ಒಂದೂವರೆ ವರ್ಷದ ಹಿಂದೆ ಸಾವನ್ನಪ್ಪಿದ್ದರು, ಶನಿವಾರ ಸಂಜೆ ಧನುಷ್ ಹಿರಿಯ ಸಹೋದರು ಮತ್ತು ತಾಯಿ ಕೆಲಸಕ್ಕಾಗಿ ಹೊರಗೆ ಹೋಗಿದ್ದರು, ಮತ್ತೆ ಮನೆಗೆ ವಾಪಾಸಾದಾಗ ರೂಮಿನಲ್ಲಿ ಶವ ಪತ್ತೆಯಾಗಿದೆ.
ಕೂಡಲೇ ಆತನ ತಾಯಿ ಗೀತಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಪರಿಶೀಲಿಸಿದ ವೈದ್ಯರು ಆತ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ, ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.