ಬೆಂಗಳೂರು: ಹುಡುಗಿಗೆ 'ಮೆಸೇಜ್' ಕಳಿಸಿದ್ದಕ್ಕೆ ಸಹಪಾಠಿಗೆ ಚಾಕು ಇರಿದು ಕೊಂದ!

ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳಿಬ್ಬರು ಮಾರಾಮಾರಿ ನಡೆದು ಓರ್ವ ವಿದ್ಯಾರ್ಥಿ ಕೊಲೆಯಾಗಿರುವ ಘಟನೆ ಬೆಂಗಳೂರು ನಗರದಲ್ಲಿನ ನಾಗಸಂದ್ರದಲ್ಲಿ ನಡೆದಿದೆ.
ಬೆಂಗಳೂರು: ಹುಡುಗಿಗೆ ಸಂದೇಶ ಕಳಿಸಿದ್ದಕ್ಕೆ ಸಹಪಾಠಿಗೆ ಚಾಕು ಇರಿದು ಕೊಂದ!
ಬೆಂಗಳೂರು: ಹುಡುಗಿಗೆ ಸಂದೇಶ ಕಳಿಸಿದ್ದಕ್ಕೆ ಸಹಪಾಠಿಗೆ ಚಾಕು ಇರಿದು ಕೊಂದ!
Updated on
ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳಿಬ್ಬರು ಮಾರಾಮಾರಿ ನಡೆದು ಓರ್ವ ವಿದ್ಯಾರ್ಥಿ ಕೊಲೆಯಾಗಿರುವ ಘಟನೆ ಬೆಂಗಳೂರು ನಗರದಲ್ಲಿನ ನಾಗಸಂದ್ರದಲ್ಲಿ ನಡೆದಿದೆ.
ನಾಗಸಂದ್ರದ ಸೌಂದರ್ಯ ಪಿಯು ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ದಯಾ ಸಾಗರ್ (18)  ಹತ್ಯೆಯಾಗಿದ್ದಾನೆ. ಇದೇ ಕಾಲೇಜಿನ ವಿದ್ಯಾರ್ಥಿ, ಸಾಗರ್ ಸಹಪಾಠಿಯೂ ಆಗಿದ್ದ ರಕ್ಷಿತ್ ಇನ್ನಿಬ್ಬರೊಡನೆ ಸೇರಿ ಈ ಕೃತ್ಯವೆಸಗಿದ್ದಾನೆ.
ದಯಾ ಸಾಗರ್ ಹಾಗೂ ರಕ್ಷಿತ್ ಇಬ್ಬರೂ ಪಿಯು ವ್ಯಾಸಂಗ ಮಾಡುತ್ತಿದ್ದು ಸೌಂದರ್ಯ ಕಾಲೇಜಿನಲ್ಲಿ ಓದುತ್ತಿದ್ದರು. ದಯಾ ಸಾಗರ್ ಯುವತಿಯೊಬ್ಬಳಿಗೆ ತನ್ನ ಮೊಬೈಲ್ ನಿಂದ ಸಂದೇಶ ಕಳಿಸುತ್ತಿದನೆನ್ನಲಾಗಿದ್ದು ಈ ಕುರಿತು ಹಿಂದೆ ಅನೇಕ ಬಾರಿ ಆರೋಪಿ ರಕ್ಷಿತ್, ಸಾಗರ್ ಗೆ ಎಚ್ಚರಿಸಿದ್ದ. ಆದರೆ ಸಾಗರ್ ಮಾತ್ರ ಸಂದೇಶ ಕಳಿಸುವುದನ್ನು ಬಿಟ್ಟಿರಲಿಲ್ಲ.
ಬುಧವಾರ ಬೆಳಿಗ್ಗೆ ಸಹ ಆರೋಪಿ ರಕ್ಷಿತ್ ಹಾಗೂ ದಯಾ ಸಾಗರ್ ಅವರ ಮದ್ಯೆ ಈ ವಿಚಾರಕ್ಕೆ ಜಗಳವಾಗಿದೆ. ಆಗ ರಕ್ಷಿತ್ ಬ್ಯಾಗ್ ನಲ್ಲಿದ್ದ ಚಾಕು ತೆಗೆದು ಇರಿದಿದ್ದಾನೆ. ಕಾಲೇಜಿನ ನಾಲ್ಕನೇ ಅಂತಸ್ತಿನಲ್ಲಿರುವ ಶೌಚಾಲಯದಲ್ಲಿ ಈ ಕೃತ್ಯ ನಡೆದಿದೆ. ಬಲವಾಗಿ ಇರಿದ ಕಾರಣ ದಯಾ ಸಾಗರ್ ಗೆ ತೀವ್ರ ರಕ್ತಸ್ರಾವವಾಗಿದೆ.
ಇದನ್ನು ಕಂಡ ಸಹಪಾಠಿಗಳು ದಯಾ ಸಾಗರ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವನು ಸಾವಿಗೀಡಾಗಿದ್ದಾನೆ.
ಘಟನೆ ಸಂಬಂಧ ಕಾಲೇಜು ಆಡಳಿತ ರಕ್ಶಿತ್ ಸೇರಿ ಮೂವರು ವಿದ್ಯಾರ್ಥಿಗಳನ್ನು ಪೋಲೀಸರಿಗೆ ಒಪ್ಪಿಸಿದೆ. ಬಾಗಲಗುಂಟೆ ಪೋಲೀಸರು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com