ತಳ್ಳುವ ಗಾಡಿಯಲ್ಲಿ ದಿನವೂ ಕುಡಿಯುವ ನೀರು ತರುವ ಮಕ್ಕಳು; ಮುಖ್ಯೋಪಾಧ್ಯಾಯರ ವಿರುದ್ಧ ಕ್ರಮಕ್ಕೆ ಆಗ್ರಹ

ಇಲ್ಲಿನ ಮದಿನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕುಡಿಯುವ ನೀರಿಗೆ ...
ಬಾಟಲಿಯಲ್ಲಿ ನೀರು ತರುವ ವಿದ್ಯಾರ್ಥಿಗಳು
ಬಾಟಲಿಯಲ್ಲಿ ನೀರು ತರುವ ವಿದ್ಯಾರ್ಥಿಗಳು

ಕೊಪ್ಪಳ: ಇಲ್ಲಿನ ಮದಿನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕುಡಿಯುವ ನೀರಿಗೆ ದೂರದಿಂದ ಗಾಡಿಯನ್ನು ತಳ್ಳಿಕೊಂಡು ಹೋಗಿ ಬಾಟಲಿಯಲ್ಲಿ ನೀರು ತುಂಬಿಸಿಕೊಂಡು ಬರಬೇಕಾದ ಪರಿಸ್ಥಿತಿಯಿದೆ.

ಸ್ಥಳೀಯ ಗ್ರಾಮ ಪಂಚಾಯತ್ ನಿಂದ ಶಾಲೆಗೆ ಒದಗಿಸಿರುವ ಪುಶ್ ಕಾರ್ಟ್ ಸಹಾಯದಿಂದ ಮಕ್ಕಳು ಹೋಗಿ ಕುಡಿಯುವ ನೀರು ತುಂಬಿಸಿಕೊಂಡು ಬರುತ್ತಾರೆ.

ಸಾಮಾನ್ಯವಾಗಿ ಇಬ್ಬರು, ಮೂವರು ಮಕ್ಕಳು ಹೋಗಿ 20 ಲೀಟರ್ ತುಂಬುವ ಆರು ಕ್ಯಾನಿನಲ್ಲಿ ಕುಡಿಯುವ ನೀರು ಒದಗಿಸುವ ಘಟಕದಿಂದ ನೀರು ತುಂಬಿಸಿಕೊಂಡು ತರುತ್ತಾರೆ.
ಈ ಶಾಲೆಯಲ್ಲಿ 247 ಮಕ್ಕಳು ಕಲಿಯುತ್ತಿದ್ದು ಪ್ರತಿ ವಿದ್ಯಾರ್ಥಿ, ವಿದ್ಯಾರ್ಥಿನಿ ಕೂಡ ನೀರು ತುಂಬಿಸಿಕೊಂಡು ಪುನರಾವರ್ತನೆ ರೀತಿಯಲ್ಲಿ ತರಬೇಕು.

ಮಕ್ಕಳಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸಲು ಈ ರೀತಿ ನೀರಿನ ಘಟಕದಿಂದ ನೀರು ತರಿಸುತ್ತೇವೆ ಎನ್ನುತ್ತಾರೆ ಶಾಲೆಯ ಮುಖ್ಯ ಅಧ್ಯಾಪಕ ನಾರಾಯಣಪ್ಪ ಚಿತ್ರಗಾರ್. ಶಾಲೆಯಲ್ಲಿ ಸಹಾಯಕ ಸಿಬ್ಬಂದಿ ಅಥವಾ ಪಿಯೊನ್ ಇಲ್ಲದಿರುವುದರಿಂದ ಮಕ್ಕಳಲ್ಲಿಯೇ ತರಿಸಲಾಗುತ್ತದೆ ಎಂದರು.

ಆದರೆ ಗ್ರಾಮಸ್ಥರು ಹೇಳುವ ಪ್ರಕಾರ, ಮಕ್ಕಳಿಗೆ ಇದೊಂದು ರೀತಿಯಲ್ಲಿ ಶಿಕ್ಷೆಯಂತೆ ಭಾಸವಾಗುತ್ತದೆ. ಕೆಲ ದಿನಗಳ ಹಿಂದೆ ಕೊಪ್ಪಳ ಜಾತ್ರೆ ಎಂದು ಕೆಲವು ಮಕ್ಕಳು ಶಾಲೆಗೆ  ಬಂದಿರಲಿಲ್ಲವಂತೆ. ಅವರಲ್ಲಿ ಸತತವಾಗಿ ಎರಡು ದಿನ ನೀರು ಹೊರಿಸಲಾಗಿದೆ. ಎಲ್ಲಾ ಮಕ್ಕಳು ಕಡ್ಡಾಯವಾಗಿ ನೀರು ತರಬೇಕು ಎಂದು ಅಧ್ಯಾಪಕರು ಆಜ್ಞೆ ಮಾಡುತ್ತಾರೆ ಎನ್ನುತ್ತಾರೆ.

ಶಾಲೆಯ ಮುಖ್ಯೋಪಾಧ್ಯಾಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ವಲಯ ಶಿಕ್ಷಣಾಧಿಕಾರಿ ಶೋಭಾ ಬಾಗೇವಾಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com