ಉಡುಪಿ: ನಗರಸಭೆ ನಿರೀಕ್ಷಕನ ಮೇಲೆ ಬಿಜೆಪಿ ಮುಖಂಡನಿಂದ ಹಲ್ಲೆ

ನಗರಸಭೆ ಆರೋಗ್ಯ ನಿರೀಕ್ಷಕನೊಬ್ಬನ ಮೇಲೆ ಬಿಜೆಪಿ ಮುಖಂಡರೊಬ್ಬರು ಹಲ್ಲೆ ನಡೆಸಿದ್ದು ಹಲ್ಲೆಗೊಳಗಾದ ನಿರೀಕ್ಷಕ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಗರಸಭೆ ಆರೋಗ್ಯ ನಿರೀಕ್ಷಕ ಪ್ರಸನ್ನ ಕುಮಾರ್
ಗರಸಭೆ ಆರೋಗ್ಯ ನಿರೀಕ್ಷಕ ಪ್ರಸನ್ನ ಕುಮಾರ್
Updated on: 
ಉಡುಪಿ: ನಗರಸಭೆ ಆರೋಗ್ಯ ನಿರೀಕ್ಷಕನೊಬ್ಬನ ಮೇಲೆ ಬಿಜೆಪಿ ಮುಖಂಡರೊಬ್ಬರು ಹಲ್ಲೆ ನಡೆಸಿದ್ದು ಹಲ್ಲೆಗೊಳಗಾದ ನಿರೀಕ್ಷಕ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಉಡುಪಿ ಜಿಲ್ಲೆ ನಗರಸಭೆ ನಿರೀಕ್ಷಕನಾಗಿರುವ ಪ್ರಸನ್ನ ಕುಮಾರ್ ಹಲ್ಲೆಗೊಳಗಾಇದ್ದು ಇವರ ಮೇಲೆ ಮಲ್ಪೆ ವಡಬಾಂಡೇಶ್ವರ ವಾರ್ಡ್ ನ ಬಿಜೆಪಿ ಸದಸ್ಯ ಯೋಗೀಶ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಗೊಳಗಾದ ಪ್ರಸನ ಅವರ ಕಣ್ಣಿನ ಮೇಲ್ಭಾಗ ಪೆಟ್ಟಾಗಿದ್ದು ಸದ್ಯ ಅವರು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಮ್ಮ ವಾರ್ಡ್ ನಲ್ಲಿ ಕಾಲುವೆ ಸ್ವಚ್ಚಗೊಳಿಸುವ ವಿಚಾರ ಚರ್ಚೆಗೆ ಇಂದು ಮಧ್ಯಾಹ್ನ ನಗರಸಭೆ ಆರೋಗ್ಯ ನಿರೀಕ್ಷಕರ ಕಛೇರಿಗೆ ಆಗಮಿಸಿದ್ದ ಯೋಗೀಶ್ ಚರ್ಚೆ ವೇಳೆ ಪ್ರಸನ್ನ ವಿರುದ್ಧ ಸಿಟ್ಟಿಗೆದ್ದಿದ್ದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಉಡುಪಿ ನಗರ ಪೋಲೀಸರು ಹಲ್ಲೆಗೊಳಗಾಗಿರುವ ಪ್ರಸನ್ನ ಅವರ ಹೇಳಿಕೆ ಪಡೆದುಕೊಂಡಿದ್ದು ಪ್ರಕರಣ ದಾಖಲಾತಿಗೆ ತಯಾರಿ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com