51 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ ಕಡೆಗೂ ಸಿಕ್ಕಿಬಿದ್ದ ವ್ಯಕ್ತಿ!

ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ವ್ಯಕ್ತಿಯೊಬ್ಬರ ಮೇಲೆ 51 ಬಾಕಿ ವಿಚಾರಣೆಗಳಿವೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ವ್ಯಕ್ತಿಯೊಬ್ಬರ ಮೇಲೆ 51 ಬಾಕಿ ವಿಚಾರಣೆಗಳಿವೆ. 
ಎಸ್ ಪಿಜೆ ರಸ್ತೆಯ ಅರಿಗೆದಾಸ್ ಕೆಂಪು ಬಣ್ಣದ ಹೀರೋ ಪ್ಯಾಶನ್ ಬೈಕ್ ನ ಮಾಲೀಕ. ಅಲಸೂರು ಕೆರೆಯ ಹತ್ತಿರ ನಿನ್ನೆ ಸಂಚಾರಿ ನಿಯಮ ಉಲ್ಲಂಘಿಸಿದ ಹಿನ್ನಲೆಯಲ್ಲಿ ಟ್ರಾಫಿಕ್ ಪೊಲೀಸರು ಈತನನ್ನು ಅಡ್ಡಗಟ್ಟಿ ಹಿಡಿದರು.
ಟ್ರಾಫಿಕ್ ನಿಯಮ ಅನುಸರಿಸಬೇಕೆಂದು ಎಚ್ಚರಿಕೆ ನೀಡಲು ಕಾನ್ಸ್ಟೇಬಲ್ ಅಶೋಕ್ ತಡೆದು ನಿಲ್ಲಿಸಿ ತಮ್ಮಲ್ಲಿದ್ದ ಡಿಜಿಟಲ್ ತಂತ್ರದ ನೆರವಿನಿಂದ ತಪಾಸಣೆ ಮಾಡಿದಾಗಲೇ ಗೊತ್ತಾಗಿದ್ದು ಅರಿಗೆದಾಸ್ ಮೇಲೆ ಕಳೆದ 2 ವರ್ಷಗಳಿಂದ 51 ಕೇಸುಗಳು ಬಾಕಿ ಇವೆ ಎಂದು.
ಅರಿಗೆದಾಸ್ ತನ್ನ ವಾಹನವನ್ನು ನೋ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ್ದು ಒಂದೆರಡು ಬಾರಿಯಲ್ಲ, ಬರೋಬ್ಬರಿ 51 ಬಾರಿ. ನೋ ಪಾರ್ಕಿಂಗ್ ಏರಿಯಾದಲ್ಲಿ ಬೈಕ್ ನಿಲ್ಲಿಸಿದ್ದಕ್ಕೆ 51 ಕೇಸುಗಳು ಇರುವುದು. ಪ್ರತಿ ಉಲ್ಲಂಘನೆಗೆ 100 ರೂಪಾಯಿಯಂತೆ 5,100 ರೂಪಾಯಿಗಳನ್ನು ಅರಿಗೆದಾಸ್ ಬೆಂಗಳೂರು ಸಂಚಾರಿ ಪೊಲೀಸ್ ಇಲಾಖೆಗೆ ಕಟ್ಟಬೇಕಾಗಿದೆ.
ಎಲ್ಲಾ ಕೇಸುಗಳು ಹಳೆಯದಾಗಿರುವುದರಿಂದ ಹೊಸ ಸಂಚಾರಿ ನಿಯಮವನ್ನು ಬುಧವಾರ ಜಾರಿಗೆ ತರಲಾಯಿತು. ಹೊಸ ಸಂಚಾರಿ ನಿಯಮದಡಿ ಆತನಿಗೆ ಹಳೆಯ ಉಲ್ಲಂಘನೆಗೆ ಈಗಿನ ದಂಡ ಮೊತ್ತವನ್ನು ಹೇರಲಾಗುವುದಿಲ್ಲ. ಇನ್ನು ಮುಂದೆ ಆತ ಸಂಚಾರಿ ನಿಯಮ ಉಲ್ಲಂಘಿಸಿದರೆ 1000 ರೂಪಾಯಿ ದಂಡ ವಿಧಿಸಬೇಕಾಗುತ್ತದೆ ಎಂದು ಪೊಲೀಸರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com