ಬೆಂಗಳೂರು: ಜಕ್ಕೂರು ಸಮೀಪ ವಿಮಾನ ನಿಲ್ದಾಣದ ಮೇಲ್ಸೇತುವೆಯಲ್ಲಿ ಸ್ಕೂಟರ್ ನಲ್ಲಿ ವೀಲಿಂಗ್ ಮಾಡುತ್ತಿದ್ದ ಅಪ್ರಾಪ್ತ ಬಾಲಕ ಸೇರಿದಂತೆ ಇಬ್ಬರನ್ನು ಯಲಹಂಕ ಸಂಚಾರಿ ಪೊಲೀಸರು ಬಂಧಿಸಿದ್ದಾರೆ.
ತಾಹಿಲ್ ರೆಹಮಾನ್ (18ವ) ಮತ್ತು ಬೈಕ್ ಚಾಲಕ ಅಪ್ರಾಪ್ತ ಬಾಲಕ ಯಲಹಂಕ ಸಮೀಪ ಮೇಲ್ಸೇತುವೆಯಲ್ಲಿ ವೀಲಿಂಗ್ ಮಾಡುತ್ತಿದ್ದಾಗ ದಾರಿಯಲ್ಲಿ ಹೋಗುತ್ತಿದ್ದ ಪ್ರಯಾಣಿಕರು ವಿಡಿಯೊ ಮಾಡಿ ಪೊಲೀಸರಿಗೆ ನೀಡಿದ್ದರು. ವಾಹನದ ದಾಖಲಾತಿ ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಪೊಲೀಸರು ಇಬ್ಬರನ್ನೂ ಬಂಧಿಸಿ ಕೇಸು ದಾಖಲಿಸಿಕೊಂಡಿದ್ದಾರೆ.
ಜೂನ್ 2ರಂದು ಯಲಹಂಕಕ್ಕೆ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ವೀಲಿಂಗ್ ಮಾಡಿದ್ದು ರೆಹಮಾನ್ ಅಪ್ರಾಪ್ತ ಬಾಲಕನಿಗೆ ಬೈಕ್ ನ್ನು ನೀಡಿ ಹಿಂದೆ ಕುಳಿತಿದ್ದನು. 15 ವರ್ಷದ ಬಾಲಕ ಅಪಾಯಕಾರಿ ರೀತಿಯಲ್ಲಿ ವೀಲಿಂಗ್ ಮಾಡುತ್ತಿದ್ದನು. ಮಾರ್ಗದಲ್ಲಿ ಸಂಚರಿಸುತ್ತಿದ್ದ ಬೇರೆ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದರು.
ಇಬ್ಬರೂ ಆರ್ ಟಿ ನಗರ ನಿವಾಸಿಗಳಾಗಿದ್ದು ವಾಹನದ ಸರಿಯಾದ ದಾಖಲೆಪತ್ರ ಕೂಡ ಅವರಲ್ಲಿರಲಿಲ್ಲ. ಪೊಲೀಸರು ಇಬ್ಬರ ಪೋಷಕರನ್ನು ಪೊಲೀಸ್ ಠಾಣೆಗೆ ಬರಲು ಹೇಳಿದ್ದು ಕ್ಷಮಾಪಣೆ ಪತ್ರ ಬರೆದುಕೊಡುವಂತೆ ಕೇಳಿದ್ದಾರೆ. ಇಬ್ಬರನ್ನೂ ನಂತರ ಜಾಮೀನು ಮೇಲೆ ಬಿಡುಗಡೆ ಮಾಡಲಾಯಿತು.
ಕೆಲ ದಿನಗಳ ಹಿಂದೆ ದೇವನಹಳ್ಳಿ ರಸ್ತೆಯಲ್ಲಿ ನೆಲಮಂಗಲ ಸಮೀಪ ಯುವಕನೊಬ್ಬ ತನ್ನ ಸ್ನೇಹಿತೆಯನ್ನು ಬೈಕ್ ನಲ್ಲಿ ಹಿಂದೆ ಕೂರಿಸಿಕೊಂಡು ವೀಲಿಂಗ್ ಮಾಡುತ್ತಿದ್ದ ದೃಶ್ಯವನ್ನು ಹುಡುಗಿ ಸೋನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ ನಂತರ ವೈರಲ್ ಆಗಿತ್ತು. ಇವರನ್ನು ಪೊಲೀಸರು ಇನ್ನೂ ಬಂಧಿಸಿಲ್ಲ,