ರೈತರಿಗೆ ಶುಭ ಸುದ್ದಿ! ಕೃಷಿ ಉತ್ಪನ್ನ ಸಾಗಾಟಕ್ಕೆ ಸರ್ಕಾರದಿಂದ ಉಚಿತ ಸಾರಿಗೆ ಸೌಲಭ್ಯ

ರಾಜ್ಯದ ರೈತರು ತಮ್ಮ ಬೆಳೆಗಳನ್ನು ಸರ್ಕಾರಿ ಗೋದಾಮುಗಳಿಗೆ ಸಾಗಿಸಲು ಉಚಿತ ಸಾರಿಗೆ ಸೌಲಭ್ಯವನ್ನು ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯದ ರೈತರು ತಮ್ಮ ಬೆಳೆಗಳನ್ನು ಸರ್ಕಾರಿ ಗೋದಾಮುಗಳಿಗೆ ಸಾಗಿಸಲು ಉಚಿತ ಸಾರಿಗೆ ಸೌಲಭ್ಯವನ್ನು ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಗೋದಾಮುಗಳಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಗರಿಷ್ಟ ಎಂಟು ತಿಂಗಳ ಕಾಲ ಉಚಿತವಾಗಿ ಸಂಗ್ರಹಿಸಲು ಅವಕಾಶವಿದೆ ಎಂದು ಸಹಕಾರ ಸಚಿವ ಬಂಡಪ್ಪ ಕಾಶಂಪುರ್ ಹೇಳಿದ್ದಾರೆ.
ಸೆಪ್ಟೆಂಬರ್ ನಿಂದ ಇದಕ್ಕಾಗಿ ವಿಶೇಷ ಕಾಲ್ ಸೆಂಟರ್ ಪ್ರಾರಂಭಿಸಲು ಉದ್ದೇಶಿಸಿದ್ದು ರೈತರು ಫೋನ್ ಮೂಲಕ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸಿ ಉಚಿತ ಸಾರಿಗೆ ಹಾಗೂ ಗೋದಾಮು ಸೌಲಭ್ಯ ಹೊಂದಬಹುದಾಗಿದೆ ಎಂದು ಸಚಿವರು ಹೇಳಿದ್ದಾರೆ.
ಇದಲ್ಲದೆ ರೈತರು ಸರ್ಕಾರಿ ಗೋದಾಮಿನಲ್ಲಿ ಸಂಗ್ರಹಿಸಿರುವ ಬೆಳೆಗಳ ಮೇಲೆ ಸಾಲ ಪಡೆಇದ್ದರೆ ಅಂತಹಾ ಸಾಲದ ಮೇಲೆ 50% ರಷ್ಟು ಬಡ್ಡಿದರವನ್ನು ಸರ್ಕಾರವು ನೀಡುತ್ತದೆ
ಸರ್ಕಾರ ಈ ಯೋಜನೆಗಾಗಿ 2,000 ಕೋಟಿ ರು. ಮೀಸಲಿರಿಸಿದೆ. ಸರ್ಕಾರದ ನಿಯಂತ್ರಣದಲ್ಲಿರುವ ಗೋದಾಮುಗಳಲ್ಲಿ ಗರಿಷ್ಟ  37 ಲಕ್ಷ ಮೆಟ್ರಿಕ್ ಟನ್ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಬಹುದು ಎಂದು ಸಚಿವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com