ಚಾಮರಾಜನಗರ: ಅಪಘಾತದಲ್ಲಿ ಪೋಷಕರ ಸಾವು, ಅದೃಷ್ಠವಶಾತ್ ಬದುಕುಳಿದ ಬಾಲಕನ ಆಕ್ರಂದನ!

ಟೆಂಪೋ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಹೆತ್ತವರು ಮೃತಪಟ್ಟಿದ್ದು ಅದೃಷ್ಠವಶಾತ್ ಬದುಕುಳಿದ ಮಗು ಮೃತ ತಂದೆ ಮುಂದೆ ಕುಳಿತು ಎದ್ದೇಳು ಅಪ್ಪಾ ಎಂದು ಕೂಗುತ್ತಿರುವ ದೃಶ್ಯ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಚಾಮರಾಜನಗರ: ಟೆಂಪೋ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಹೆತ್ತವರು ಮೃತಪಟ್ಟಿದ್ದು ಅದೃಷ್ಠವಶಾತ್ ಬದುಕುಳಿದ ಮಗು ಮೃತ ತಂದೆ ಮುಂದೆ ಕುಳಿತು ಎದ್ದೇಳು ಅಪ್ಪಾ ಎಂದು ಕೂಗುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ. 
ನಂಜನಗೂಡಿನಲ್ಲಿ ಸಂಬಂಧಿಕರ ಮದುವೆಗೆಂದು ಚಾಮರಾಜನಗರ ತಾಲೂಕಿನ ಕಾಗಲವಾಡಿ ಗ್ರಾಮದ ಮಾದೇಶ್ ಮತ್ತು ಮಣಿ ತಮ್ಮ ಪುತ್ರನೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಚಾಮರಾಜನಗರದ ಬಳಿ ಟೆಂಪೋ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿತ್ತು. 
ಅಪಘಾತದಲ್ಲಿ ಸ್ಥಳದಲ್ಲೇ ಮಾದೇಶ್ ಮತ್ತು ಮಣಿ ಮೃತಪಟ್ಟಿದ್ದು ಬದುಕುಳಿದಿರುವ ಬಾಲಕ ಹೆತ್ತವರ ಮುಂದೆ ಕುಳಿತು ಎದ್ದೇಳು ಅಪ್ಪಾ ಎಂದು ಎಬ್ಬಿಸಲು ಪ್ರಯತ್ನಿಸುತ್ತಿರುವ ದೃಶ್ಯ ನೆರೆದಿದ್ದ ಜನರ ಕಣ್ಣಗಳು ಒದ್ದೆಯಾಗುವಂತೆ ಮಾಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com