'ಭಾರತಕ್ಕೆ ಬರಲು ಸಿದ್ಧ, ಆದರೆ ನನ್ನ ಜೀವಕ್ಕೆ ಅಪಾಯವಿದೆ: ಐಎಎಸ್ ಅಧಿಕಾರಿ 10ಕೋಟಿ ಲಂಚ ಕೊಡಬೇಕಿದೆ'

ಬಹುಕೋಟಿ ಐಎಂಎ ಹಗರಣದ ರೂವಾರಿ ದುಬೈನಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾದ ವಂಚಕ ಮನ್ಸೂರ್ ಖಾನ್‌ ಮತ್ತೊಂದು ವೀಡಿಯೋ ...
ಮನ್ಸೂರ್ ಖಾನ್
ಮನ್ಸೂರ್ ಖಾನ್
ಬೆಂಗಳೂರು: ಬಹುಕೋಟಿ ಐಎಂಎ ಹಗರಣದ ರೂವಾರಿ ದುಬೈನಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾದ ವಂಚಕ ಮನ್ಸೂರ್ ಖಾನ್‌ ಮತ್ತೊಂದು ವೀಡಿಯೋ ಹರಿಬಿಟ್ಟಿದ್ದು, ಹಲವರ ಹೆಸರು ಬಹಿರಂಗಪಡಿಸಿದ್ದಾನೆ
ಹೂಡಿಕೆದಾರರಿಗೆ ವಂಚಿಸಿ ದೇಶ ತೊರೆದು ಪರಾರಿಯಾಗಿರುವ ಐಎಂಎ ಮಾಲೀಕ ಮನ್ಸೂರ್‌ ಖಾನ್‌ ಭಾನುವಾರ ಮಧ್ಯಾಹ್ನ 'ಯು-ಟ್ಯೂಬ್‌' ವಿಡಿಯೋ ಬಿಡುಗಡೆ ಮಾಡಿದ್ದು, ತಾನು ಭಾರತಕ್ಕೆ ಬರಲು ಸಿದ್ಧ ಎಂದು ಹೇಳಿಕೊಂಡಿದ್ದಾನೆ. 
ಐಎಂಎಗೆ ಬ್ಲ್ಯಾಕ್‌ಮೇಲ್‌ ಮಾಡಿದವರು, ಸುಲಿಗೆ ಮಾಡಿದವರ ದೊಡ್ಡ ಪಟ್ಟಿಯೇ ನನ್ನ ಮುಂದಿದೆ. ನಾನು ಕೊಲೆಯಾಗುವುದು ನಿಶ್ಚಿತ. ಆದರೆ, ಅದಕ್ಕೆ ಮೊದಲು ಎಲ್ಲರ ಬಂಡವಾಳವನ್ನು ಬಿಚ್ಚಿಡುತ್ತೇನೆ ಎಂದು ಹೇಳಿದ್ದಾನೆ.. 
ಜೂನ್ 14 ರಂದು ನಾನು ಏರ್ ಪೋರ್ಟ್ಗೆ ತೆರಳಿದ್ದೆ, ಶುಕ್ರವಾರವಾದ್ದರಿಂದ ವಲಸೆ ಇಲಾಖೆ ಕಾರ್ಯಾಲಯ ಮುಚ್ಚಿತ್ತು. ಹಾಗಾಗಿ ನಾನು ಭಾರತಕ್ಕೆ ಬರಲು ಸಾಧ್ಯವಾಗಲಿಲ್ಲ, ಎಲ್ಲಾ ಫಾರ್ಮಾಲಿಟಿಗಳನ್ನು ಮುಗಿಸಿ ಆದಷ್ಟು ಶೀಘ್ರವೇ ವಾಪಸಾಗುತ್ತೇನೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾನೆ.
ತನ್ನ ಮೊಬೈಲ್‌ ನಂಬರನ್ನು ನಗರ ಪೊಲೀಸ್‌ ಕಮಿಷನರ್‌ ಅಲೋಕ್‌ಕುಮಾರ್‌ ಅವರಿಗೆ ನೀಡಿರುವ ಮನ್ಸೂರ್‌, 'ನಾನು ಎಲ್ಲಿಗೆ ಬರಬೇಕು ಹೇಳಿ. ಯಾರನ್ನು ಭೇಟಿ ಮಾಡಬೇಕು ಹೇಳಿ. ಬಂದು ಭೇಟಿ ಮಾಡುತ್ತೇನೆ' ಎಂದು ವಿಡಿಯೋದಲ್ಲಿ ಮನವಿ ಮಾಡಿದ್ದಾನೆ.
ಮನ್ಸೂರ್‌ ಭಾರತಕ್ಕೆ ಬರುವುದಾದರೆ ಬರಲಿ. ಅಗತ್ಯ ರಕ್ಷಣೆ ನೀಡಲಾಗುವುದು. ಆತ ಆರೋಪಿ ಆಗಿರುವುದರಿಂದ ಯಾರ ಹೆಸರನ್ನಾದರೂ ಹೇಳಬಹುದು. ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದೆ ಆರೋಪಿ ಮಾತನ್ನು ಯಥಾವತ್ತಾಗಿ ನಂಬಲು ಬರುವುದಿಲ್ಲ. ಆತನ ಬಳಿ ಸಾಕ್ಷ್ಯಗಳಿದ್ದರೆ ಒದಗಿಸಲಿ. ತನಿಖೆ ಬಳಿಕವಷ್ಟೇ ಸತ್ಯ ತಿಳಿದು ಬರಲಿದೆ ಎಂದು ಡಿಸಿಪಿ ಗಿರೀಶ್ ಹೇಳಿದ್ದಾರೆ.
ಮನ್ಸೂರ್‌ಖಾನ್‌ ನನ್ನ ಹೆಸರು ಏಕೆ ಹೇಳಿದ್ದಾರೋ ಗೊತ್ತಿಲ್ಲ . ನನಗೆ ಅವರ ಜತೆ ಯಾವುದೇ ವ್ಯವಹಾರ ಇಲ್ಲ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಶರವಣ ತಿಳಿಸಿದ್ದಾರೆ, 
ಐಎಂಎ ಮಾಲೀಕ ಮನ್ಸೂರ್‌ಖಾನ್‌ ಕಡಿಮೆ ಬೆಲೆಗೆ ಚಿನ್ನಾಭರಣ ಮಾರಾಟ ಮಾಡುತ್ತಿದ್ದಾನೆ. ಈ ರೀತಿ ಕಡಿಮೆ ದರಕ್ಕೆ ಮಾರಾಟ ಮಾಡುವುದರಿಂದ ಜ್ಯೂವೆಲ್ಲರಿ ಮಾಲೀಕರಿಗೆ ಸಮಸ್ಯೆ ಆಗುತ್ತದೆ ಎಂದಿದ್ದರು. ಚಿನ್ನದಲ್ಲಿ ಏನಾದರೂ ಮೋಸ ಮಾಡುತ್ತಿದ್ದರೆ ಪ್ರಶ್ನೆ ಮಾಡಬಹುದು. ಆದರೆ, ಕಡಿಮೆ ಬೆಲೆಗೆ ಚಿನ್ನಾಭರಣ ಮಾರಾಟ ಮಾಡಿದರೆ ಪ್ರಶ್ನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ಇದು ಬಿಟ್ಟರೆ ಬೇರೆ ಯಾವ ರೀತಿಯಲ್ಲೂ ಮನ್ಸೂರ್‌ ವಿಚಾರ ನನ್ನ ಬಳಿ ಪ್ರಸ್ತಾಪ ಆಗಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. 
2ಸಾವಿರ ಕೋಟಿ ಬಂಡವಾಳ ಹೂಡಿ ಹೂಡಿಕೆದಾರರಿಗದೆ 12 ಸಾವಿರ ಕೋಟಿ ರು ಲಾಭ ಮಾಡಿಕೊಟ್ಟಿದ್ದೇನೆ, ಆದರೆ ಯಾರೋಬ್ಬರು ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಿಲ್ಲ, ಈಗ ಆರೋಪ ಮಾಡಿರುವಂತೆ 4 ಸಾವಿರ ಕೋಟಿ ರುಪಾಯಿಯಷ್ಟು ನಾನು ವಂಚನೆ ಮಾಡಿಲ್ಲ. ನನ್ನ ಬಳಿ 1350 ಕೋಟಿ ರುಪಾಯಿ ಇದೆ. ಈಗಲೂ ನಾನು ಯಾರಿಗೂ ಮೋಸ ಮಾಡುವುದಿಲ್ಲ ಎಂದು ಮನ್ಸೂರ್ ಖಾನ್ ಹೇಳಿದ್ದಾನೆ.
ನನ್ನಿಂದ ಐಎ ಎಸ್ ಅಧಿಕಾರಿಯೊಬ್ಬರು ಹತ್ತು ಕೋಟಿ ರುಪಾಯಿ ನೀಡಿದ್ದೇನೆ ಎಂದು ಮನ್ಸೂರ್ ಖಾನ್ ಆರೋಪ ಮಾಡಿದ್ದು, ಆ ಅಧಿಕಾರಿ ಯಾರು ಎಂದು ಹೆಸರನ್ನು ಹೇಳಿಲ್ಲ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com