ಸಾಂದರ್ಭಿಕ ಚಿತ್ರ
ರಾಜ್ಯ
ಬೆಂಗಳೂರು-ಬೆಳಗಾವಿ ನೂತನ ರೈಲು ಜೂ.29ಕ್ಕೆ ಆರಂಭ
ಬೆಳಗಾವಿ ಜಿಲ್ಲೆಯ ಜನರ ಬಹುದಿನಗಳ ಕನಸು ಈಡೇರಿದೆ. ಬೆಂಗಳೂರು- ಬೆಳಗಾವಿ ಎಕ್ಸ್‌ಪ್ರೆಸ್ ವಿಶೇಷ ...
ಬೆಳಗಾವಿ: ಬೆಳಗಾವಿ ಜಿಲ್ಲೆಯ ಜನರ ಬಹುದಿನಗಳ ಕನಸು ಈಡೇರಿದೆ. ಬೆಂಗಳೂರು- ಬೆಳಗಾವಿ ಎಕ್ಸ್‌ಪ್ರೆಸ್ ನೂತನ ರೈಲು ಸಂಚಾರ ಇದೇ 29ರಿಂದ ಆರಂಭವಾಗಲಿದೆ.
ನೂತನ ರೈಲು ಬೆಳಗಾವಿಯಿಂದ ರಾತ್ರಿ 9 ಗಂಟೆಗೆ ಹೊರಟು ಬೆಂಗಳೂರಿಗೆ ಮರುದಿನ ಬೆಳಗ್ಗೆ 7.30ಕ್ಕೆ ತಲುಪಲಿದೆ. ಮತ್ತೆ ಬೆಂಗಳೂರಿನಿಂದ ಅದೇ ದಿನ ರಾತ್ರಿ 9 ಗಂಟೆಗೆ ಹೊರಟು ಬೆಳಗಾವಿಗೆ ಮರುದಿನ ಬೆಳಗ್ಗೆ 7.30ಕ್ಕೆ ತಲುಪಲಿದೆ.
ಪ್ರತಿದಿನ ರೈಲು ಸಂಚಾರ ನಡೆಸಲಿದ್ದು ಹುಬ್ಬಳ್ಳಿಗೆ ಬೆಂಗಳೂರಿನಿಂದ ರೈಲು ಬೆಳಗ್ಗೆ 4.40ಕ್ಕೆ ತಲುಪಲಿದೆ. ನಗರದ ರೈಲು ನಿಲ್ದಾಣದಿಂದ ಭಾನುವಾರ ಹುಬ್ಬಳ್ಳಿಗೆ ವಿಶೇಷ ರೈಲಿನಲ್ಲಿ ತೆರಳಿದ ಸಚಿವ ಅಂಗಡಿ, ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಕುರಿತು ಆದೇಶ ನೀಡಿದ್ದಾರೆ.
ಬೆಳಗಾವಿ ನಗರದ ರೈಲು ನಿಲ್ದಾಣದ 1ನೇ ಪ್ಲಾಟ್ ಫಾರ್ಮ್‌ನಲ್ಲಿ ಬೆಳಗಾವಿಯ ಇತಿಹಾಸ ಸಾರುವ ಮ್ಯೂಸಿಯಂ ನಿರ್ಮಾಣ, ನಗರದ ಕಪಿಲೇಶ್ವರ ಮೇಲ್ಸೇತುವೆ ಹತ್ತಿರ ಪಾದಚಾರಿಗಳ ಉಪಯೋಗಕ್ಕೆ ಪಾದಚಾರಿ ಮಾರ್ಗ ಅಥವಾ ಲಿಫ್ಟ್ ನಿರ್ಮಾಣ, ಬೆಳಗಾವಿ ನಿಲ್ದಾಣದ ದಕ್ಷಿಣ ಭಾಗದಲ್ಲಿ ಪ್ರವೇಶ ಕಾಮಗಾರಿ ಆರಂಭಿಸುವುದು, ನಿಲ್ದಾಣದಲ್ಲಿನ ಗೂಡ್ಸ್‌ಶೆಡ್‌ಅನ್ನು ಸಾಂಬ್ರಾಕ್ಕೆ ಸ್ಥಳಾಂತರಿಸುವ ಕುರಿತು ಪರಿಶೀಲಿಸಿ ಕ್ರಮಕೈಗೊಳ್ಳಬೇಕು. ಲೋಂಡಾ-ಮೀರಜ್ ರೈಲು ಮಾರ್ಗ ಡಬ್ಲಿಂಗ್ ಮತ್ತು ಎಲೆಕ್ಟ್ರಿಫಿಕೇಶನ್ ಕೆಲಸ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದೂ ಇದೇ ವೇಳೆ ಸಚಿವರು ಅಧಿಕಾರಿಗಳಿಗೆ ಸಚಿವರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ