ಐಎಂಎ ವಂಚನೆ: 200 ಕೋಟಿ ಮೌಲ್ಯದ ಆಸ್ತಿ ದಾಖಲೆ ಲಗತ್ತಿಸಿದ ಇಡಿ

ಐಎಂಎ ವಂಚನೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ವಿಶೇಷ ತಂಡ ಸುಮಾರು 200 ಕೋಟಿ ರು. ಮೌಲ್ಯದ ಆಸ್ತಿ ದಾಖಲೆಗಳನ್ನು ಲಗತ್ತಿಸಿದೆ.
ಮೊಹಮ್ಮದ್, ಮನ್ಸೂರ್ ಖಾನ್
ಮೊಹಮ್ಮದ್, ಮನ್ಸೂರ್ ಖಾನ್
ಬೆಂಗಳೂರು: ಐಎಂಎ ವಂಚನೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ವಿಶೇಷ ತಂಡ ಸುಮಾರು 200 ಕೋಟಿ ರು. ಮೌಲ್ಯದ ಆಸ್ತಿ ದಾಖಲೆಗಳನ್ನು ಲಗತ್ತಿಸಿದೆ.
ಐಎಂಎ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್ ಖಾನ್ ವಂಚನೆ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ವಿದೇಶಕ್ಕೆ ಪರಾರಿಯಾಗಿದ್ದ. ಇನ್ನು ಹೂಡಿಕೆದಾರರಿಂದ ಸಂಗ್ರಹ ಮಾಡಿದ್ದ ದುಡ್ಡಿನಲ್ಲಿ ಮನ್ಸೂರ್ ಖಾನ್ ಹಾಗೂ ಕೆಲವು ನಿರ್ದೇಶಕರ ಹೆಸರಿನಲ್ಲಿ 20 ಸ್ಥಿರಾಸ್ತಿಗಳನ್ನು ಖರೀದಿಸಿದ್ದ ಎಂದು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದು ಇದರ ಮೌಲ್ಯ 200 ಕೋಟಿ ಎಂದು ತಿಳಿಸಿದೆ.
ಇನ್ನು ವಿವಿಧ ಖಾಸಗಿ ಬ್ಯಾಂಕುಗಳು ಹಾಗೂ ಸಹಕಾರಿ ಸಂಘಗಳಲ್ಲಿ 105ಕ್ಕೂ ಹೆಚ್ಚು ಖಾತೆಗಳನ್ನು ಹೊಂದಿರುವ ಕಂಪನಿ ಹಣ ದುರ್ಬಳಕೆ ಮಾಡಿಕೊಂಡು 20 ಸ್ಥಿರಾಸ್ತಿಗಳನ್ನು ಖರೀದಿಸಿದೆ. ಇನ್ನು 105 ಖಾತೆಗಳಲ್ಲಿ ಈಗ 95 ಲಕ್ಷ ಮಾತ್ರ ಉಳಿದಿದೆ ಎಂದು ಇಡಿ ಹೇಳಿದೆ.
ಇನ್ನು ಇಡಿ ಪತ್ತೆ ಹಚ್ಚಿರುವ 20 ಸ್ಥಿರಾಸ್ತಿಗಳ ಜಪ್ತಿಗೆ ಕ್ರಮ ಕೈಗೊಂಡಿದ್ದು ಪ್ರಕ್ರಿಯೆ ಆರಂಭಿಸಿದೆ. ಇನ್ನು ಈ ಸಂಬಂಧ ಕಂಪನಿ ನಿರ್ದೇಶಕರೂ ಸೇರಿದಂತೆ 16 ಮಂದಿಗೆ ಇಡಿ ಸಮನ್ಸ್ ಜಾರಿಗೊಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com