450 ಟನ್ ತೂಕದ ಏಕಶಿಲಾ ವೀರಗಲ್ಲು
ರಾಜ್ಯ
ಬೆಂಗಳೂರು: ರಾಷ್ಟ್ರೀಯ ಸೇನಾ ಸ್ಮಾರಕ ತಲುಪಿದ 450 ಟನ್ ತೂಕದ ವೀರಗಲ್ಲು!
: 450 ಟನ್ ತೂಕದ ವೀರಗಲ್ಲು ಕೊನೆಗೂ ಸ್ಯಾಂಕಿ ರಸ್ತೆಯಲ್ಲಿರುವ ರಾಷ್ಟ್ರೀಯ ಸೇನಾ ಸ್ಮಾರಕ ತಲುಪಿದೆ....
ಬೆಂಗಳೂರು: 450 ಟನ್ ತೂಕದ ವೀರಗಲ್ಲು ಕೊನೆಗೂ ಸ್ಯಾಂಕಿ ರಸ್ತೆಯಲ್ಲಿರುವ ರಾಷ್ಟ್ರೀಯ ಸೇನಾ ಸ್ಮಾರಕ ತಲುಪಿದೆ.
ದೇವಹಳ್ಳಿಯ ಕಲ್ಲು ಕ್ವಾರಿಯಿಂದ 22 ದಿನಗಳ ಪ್ರಯಾಣದ ನಂತರ ಬುಧವಾರ ರಾಷ್ಟ್ರೀಯ ಸೇನಾ ಸ್ಮಾರಕ ತಲುಪಿದೆ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಸ್ಮರಣಾರ್ಥ ಕರ್ನಾಟಕದಲ್ಲಿ ಸ್ಮಾರಕ ನಿರ್ಮಿಸಬೇಕು ಎಂಬ ಉದ್ದೇಶ ಇದರ ಹಿಂದಿದ್ದು 1 ತಿಂಗಳೊಳಗೆ ವೀರಗಲ್ಲನ್ನು ಪ್ರತಿಷ್ಠಾಪಿಸಲಾಗುವುದು.
75 ಅಡಿ ಉದ್ದದ. ಈ ಏಕಶಿಲಾ ವೀರಗಲ್ಲು ಮುಂಬಯಿಯ ಟ್ರೈಲರ್ ನಲ್ಲಿ ಜೂನ್ 5 ರಂದು ಪ್ರಯಾಣ ಆರಂಭಿಸಿತ್ತು, 50 ಕೀಮೀ ದೂರವನ್ನು ಕ್ರಮಿಸಲು 22 ದಿನ ಸಮಯ ತೆಗೆದುಕೊಂಡಿದೆ.ಮಳೆ, ಕಿರಿದಾದ ರಸ್ತೆ, ರೈಲ್ವೆ ಲೆವೆಲ್ ಕ್ರಾಸಿಂಗ್ ಗಳಿಂದಾಗಿ ಬೆಂಗಳೂರು ತಲುಪಲು ಸಮಯ ಹಿಡಿಯಿತು.
ನಾಳೆಯಿಂದ ಸ್ಮಾರಕ ಪ್ರತಿಷ್ಠಾಪಿಸುವ ಕೆಲಸ ಆರಂಭಿಸುತ್ತೇವೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ., ಜೆ ಸ್ಟ್ರಕ್ಟರ್ ಫ್ರೇಮ್ ರೆಡಿಯಾದ ಮೇಲೆ ನಿಧಾನವಾಗಿ ವೀರಗಲ್ಲನ್ನು ನಿಲ್ಲಿಸಲಾಗುತ್ತದೆ, ಇದಕ್ಕೆ ಸುಮಾರು 4 ತಿಂಗಳ ಸಮಯ ಬೇಕಾಗುತ್ತದೆ, ವೀರಗಲನ್ನು ಬೆಂಗಳೂರಿಗೆ ತರುವವರಗೆ ಸುಮಾರು 5.46 ಕೋಟಿ ರು ಖರ್ಚಾಗಿದೆ., ಸುಮಾರು 1 ಕೋಟಿ ರು ವೆಚ್ಚದಲ್ಲಿ ವೀರಗಲ್ಲು ಕೆತ್ತನೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ