ಬೆಂಗಳೂರು: ಡ್ಯಾನ್ಸ್ ಬಾರ್ ಮೇಲೆ ದಾಳಿ, 74 ಯುವತಿಯರ ರಕ್ಷಣೆ

ಜಂಟಿ ಪೊಲೀಸ್ ಆಯುಕ್ತ ಬಿಆರ್ ರವಿಕಾಂತೇಗೌಡ ಅವರ ನಿರ್ದೇಶನದ ಮೇರೆಗೆ ಪೊಲೀಸ್ ತಂಡ ಬೆಂಗಳೂರು ನಗರದ ಡ್ಯಾನ್ಸ್ ಬಾರ್ ಮೇಲೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ಜಂಟಿ ಪೊಲೀಸ್ ಆಯುಕ್ತ ಬಿಆರ್ ರವಿಕಾಂತೇಗೌಡ ಅವರ ನಿರ್ದೇಶನದ ಮೇರೆಗೆ ಪೊಲೀಸ್ ತಂಡ ಬೆಂಗಳೂರು ನಗರದ ಡ್ಯಾನ್ಸ್ ಬಾರ್ ಮೇಲೆ ದಾಳಿ ನಡೆಸಿ 74 ಯುವತಿಯರನ್ನು ರಕ್ಷಣೆ ಮಾಡಿದೆ.
ದಾಳೆ ವೇಳೆ 1.04 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದ್ದು, ಈ ಘಟನೆಗೆ ಸಂಬಂಧಪಟ್ಟಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ವ್ಯಕ್ತಿಗಳನ್ನು ಡ್ಯಾನ್ಸ್ ಬಾರ್‌ನ ವ್ಯವಸ್ಥಾಪಕ ದಿನೇಶ್, ಕ್ಯಾಷಿಯರ್ ದಿನೇಶ್ ಕುಮಾರ್, ರಿಯಾಜುದ್ದೀನ್, ಪ್ರಕಾಶ್ ದತ್ ಜೋಶಿ ಮತ್ತು ಹೆಗೈರಾಜ್ ಜೋಶಿ ಎಂದು ಗುರುತಿಸಲಾಗಿದೆ.
ಬಾರ್ ಸಿಬ್ಬಂದಿ ಗ್ರಾಹಕರನ್ನು ಆಕರ್ಷಿಸಲು ನೃತ್ಯ ಮಾಡುವಂತೆ ಒತ್ತಾಯಿಸುತ್ತಿದ್ದರು. ರಕ್ಷಿಸಿದ ಹುಡುಗಿಯರಲ್ಲಿ ಕೆಲವರು ಸ್ಥಳಿಯರಾಗಿದ್ದು, ಕೆಲವರು ಬೇರೆ ರಾಜ್ಯಕ್ಕೆ ಸೇರಿದವರಾಗಿದ್ದಾರೆ.
ಉದ್ಯೋಗ ಹೆಚ್ಚಿನ ಹಣ ಕೊಡುವ ಅಮಿಷದ ಮೇರೆಗೆ ಇತರ ರಾಜ್ಯಗಳಿಂದ ಯುವತಿಯರನ್ನು ಕರೆತರಲಾಗಿದೆ. ದಾಳಿ ವೇಳೆ ಪೊಲೀಸರು 48 ಗ್ರಾಹಕರನ್ನು ಸಹ ವಶಕ್ಕೆ ತೆಗೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com