21 ಕೋಟಿ ಬ್ಯಾಂಕ್ ವಂಚನೆ: ಮ್ಯಾನೇಜರ್ , ಸಹಚರರ ವಿರುದ್ಧ ಪ್ರಕರಣ ದಾಖಲು

21 ಕೋಟಿ 86 ಲಕ್ಷ ರೂಪಾಯಿ ವಂಚನೆಗೆ ಸಂಬಂಧಿಸಿದಂತೆ ಖಾಸಗಿ ಬ್ಯಾಂಕ್ ವೊಂದರ ಶಾಖಾ ಮ್ಯಾನೇಜರ್ ಹಾಗೂ ಅವರ ಇಬ್ಬರು ಸಹಚರರ ವಿರುದ್ಧ ಸಿಬಿಐನ ಭ್ರಷ್ಟಾಚಾರ ನಿಯಂತ್ರಣ ದಳ ಪ್ರಕರಣ ದಾಖಲಿಸಿಕೊಂಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 21 ಕೋಟಿ 86 ಲಕ್ಷ ರೂಪಾಯಿ ವಂಚನೆಗೆ ಸಂಬಂಧಿಸಿದಂತೆ ಖಾಸಗಿ ಬ್ಯಾಂಕ್ ವೊಂದರ ಶಾಖಾ ಮ್ಯಾನೇಜರ್ ಹಾಗೂ ಅವರ ಇಬ್ಬರು ಸಹಚರರ ವಿರುದ್ಧ ಸಿಬಿಐನ ಭ್ರಷ್ಟಾಚಾರ ನಿಯಂತ್ರಣ ದಳ ಪ್ರಕರಣ ದಾಖಲಿಸಿಕೊಂಡಿದೆ.

ಜಯನಗರದಲ್ಲಿ ಖಾಸಗಿ ಬ್ಯಾಂಕ್ ವೊಂದರ ಶಾಖಾ ಮ್ಯಾನೇಜರ್  ಕೆ. ಆರ್. ಸರೋಜಾ ಹಾಗೂ ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ, ಹಾಗೂ ಶ್ರೀನಗರದ ಕಾಳಪ್ಪ ಬ್ಲಾಕ್ ನಿವಾಸಿ ಹರೀಶ  ಆರೋಪಿಗಳು.
ಸರೋಜಾ 2013ರಿಂದ 2016ರವರೆಗೂ ಮ್ಯಾನೇಜರ್ ಆಗಿ ಅಧಿಕಾರ ನಡೆಸುತ್ತಿದ್ದ ಸಮಯದಲ್ಲಿ ಅಕ್ರಮವಾಗಿ ಆರೋಪಿಗಳಿಗೆ 21.86 ಕೋಟಿ ಸಾಲ ಮಂಜೂರು ಮಾಡಿದ್ದಾರೆ. ಶ್ರೀನಿವಾಸಗೌಡ ಹಾಗೂ ಹರೀಶ ನಕಲಿ ದಾಖಲೆಗಳನ್ನು ಸಲ್ಲಿಸಿ ಸಾಲ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಬ್ಯಾಂಕಿನ ವಲಯ ಮ್ಯಾನೇಜರ್ ದೂರು ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com