ಕರ್ನಾಟಕದಲ್ಲಿ 14 ಸಾವಿರ ಕೋಟಿ ರೂ. ಹೂಡಿಕೆಯಿಂದ 13 ಸಾವಿರ ಉದ್ಯೋಗ ಸೃಷ್ಟಿ

ರಾಜ್ಯದಲ್ಲಿ ಸುಮಾರು 14 ಸಾವಿರ ಕೋಟಿ ರೂಪಾಯಿ ಹೂಡಿಕೆ ಮತ್ತು 13 ಸಾವಿರ ಜನರಿಗೆ ಉದ್ಯೋಗ ...
ಕೈಗಾರಿಕಾ ಸಚಿವ ಕೆ ಜೆ ಜಾರ್ಜ್
ಕೈಗಾರಿಕಾ ಸಚಿವ ಕೆ ಜೆ ಜಾರ್ಜ್
ಬೆಂಗಳೂರು: ರಾಜ್ಯದಲ್ಲಿ ಸುಮಾರು 14 ಸಾವಿರ ಕೋಟಿ ರೂಪಾಯಿ ಹೂಡಿಕೆ ಮತ್ತು 13 ಸಾವಿರ ಜನರಿಗೆ ಉದ್ಯೋಗ ಸೃಷ್ಟಿಸುವ 14 ಹೊಸ ಯೋಜನೆಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
ಕೈಗಾರಿಕಾ ಸಚಿವ ಕೆ ಜೆ ಜಾರ್ಜ್ ನೇತೃತ್ವದ ಏಕ ಗವಾಕ್ಷಿ ಅನುಮೋದನಾ ಸಮಿತಿ ಆಟೋಮೊಬೈಲ್ ಗಳು, ಉತ್ಪಾದನೆ, ಔಷಧೀಯ, ಏರೋಸ್ಪೇಸ್ ಘಟಕ ಉತ್ಪಾದನೆ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರಗಳಲ್ಲಿ  ಹಲವು ಯೋಜನೆಗಳಿಗೆ ಅನುಮೋದನೆ ನೀಡಿದೆ. ಕೈಗಾರಿಕಾ ಇಲಾಖೆಯಿಂದ ಸಿಕ್ಕಿರುವ ಅಧಿಕೃತ ಮಾಹಿತಿ ಪ್ರಕಾರ, ಮೈಸೂರಿನ ಜ್ಯುಬಿಲೆಂಟ್ ಬಯೊಸಿಸ್ ಲಿಮಿಟೆಡ್ ಮತ್ತು ಆಟೊಮೊಟಿವ್ ಆಕ್ಸೆಲ್ಸ್ ಲಿಮಿಟೆಡ್ ಅತಿ ಹೆಚ್ಚು ಹೂಡಿಕೆ ಮಾಡುವ ಪ್ರಸ್ತಾವನೆಗೆ ಸಮಿತಿ ಅನುಮತಿ ನೀಡಿದೆ.
ಬೆಂಗಳೂರು ಮೂಲದ ಜ್ಯುಬಿಲೆಂಟ್ ಜೀವ ವಿಜ್ಞಾನ ಉಪ ಅಂಗಸಂಸ್ಥೆಯಾಗಿರುವ ಜ್ಯುಬಿಲೆಂಟ್ ಬಯೊಸಿಸ್, ಸನೊಫಿಯ ಕೇಂದ್ರ ನರಮಂಡಲದ ಚಿಕಿತ್ಸಕ ಪ್ರದೇಶದಲ್ಲಿ ಸಮಗ್ರ ಔಷಧಿ ಸಂಶೋಧನೆ ಸಹಯೋಗ.ಕೇಂದ್ರ ನರಮಂಡಲದ ಚಿಕಿತ್ಸಕ ಪ್ರದೇಶದಲ್ಲಿ ಸನೊಫಿಯ ಕೇಂದ್ರ ನರಮಂಡಲದ ಚಿಕಿತ್ಸಕ ಪ್ರದೇಶದಲ್ಲಿ ಸಮಗ್ರ ಔಷಧಿ ಸಂಶೋಧನೆ ಸಹಯೋಗದಲ್ಲಿ ಸಮಗ್ರ ಔಷಧಿ ಸಂಶೋಧನೆಯನ್ನು ಇತ್ತೀಚೆಗೆ ಪ್ರಕಟಿಸಿತ್ತು.
ಸದ್ಯದಲ್ಲಿಯೇ ಈ ಸಂಸ್ಥೆಗಳು ಯೋಜನೆಗಳಿಗೆ ಸಂಬಂಧಪಟ್ಟ ವಿವರಗಳನ್ನು ಬಿಡುಗಡೆ ಮಾಡಲಿವೆ. ಈಗಿರುವ ವ್ಯವಸ್ಥೆಗಳನ್ನು ವಿಸ್ತರಿಸುವ ಕುರಿತು ಸಹ ಕೆಲವು ಪ್ರಸ್ತಾವನೆಗಳಿವೆ, ಬಹುತೇಕ ಹೊಸ ಯೋಜನೆಗಳಾಗಿದ್ದು ಬೆಂಗಳೂರು ಸುತ್ತಮುತ್ತ ಬರಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com