ನಿಮ್ಮ ರೇಷ್ಮೆ ಎಷ್ಟು ಶುದ್ಧ? 20 ರೂಪಾಯಿಗೆ ಪರೀಕ್ಷಿಸಿಕೊಳ್ಳಿ.. ಎಲ್ಲಿ, ಹೇಗೆ ಇಲ್ಲಿದೆ ಮಾಹಿತಿ!

ರೇಷ್ಮೆ ಪ್ರಿಯರಿಗೆ ಸಿಲ್ಕ್ ಮಾರ್ಕ್ ಆರ್ಗನೈಸೇಷನ್ ವಿನೂತನ ಸೌಲಭ್ಯ ಕಲ್ಪಿಸಿದ್ದು, ರೇಷ್ಮೆಯ ಶುದ್ಧತೆಯನ್ನು ಪರೀಕ್ಷಿಸುವುದಕ್ಕೆ ಬೆಂಗಳೂರಿನಲ್ಲಿ ರೇಷ್ಮೆ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದೆ.
ನಿಮ್ಮ ರೇಷ್ಮೆ ಎಷ್ಟು ಶುದ್ಧ? 20 ರೂಪಾಯಿಗೆ ಪರೀಕ್ಷಿಸಿಕೊಳ್ಳಿ, ಎಲ್ಲಿ, ಹೇಗೆ ಇಲ್ಲಿದೆ ಮಾಹಿತಿ!
ನಿಮ್ಮ ರೇಷ್ಮೆ ಎಷ್ಟು ಶುದ್ಧ? 20 ರೂಪಾಯಿಗೆ ಪರೀಕ್ಷಿಸಿಕೊಳ್ಳಿ, ಎಲ್ಲಿ, ಹೇಗೆ ಇಲ್ಲಿದೆ ಮಾಹಿತಿ!
ಬೆಂಗಳೂರು: ರೇಷ್ಮೆ ಪ್ರಿಯರಿಗೆ ಸಿಲ್ಕ್ ಮಾರ್ಕ್ ಆರ್ಗನೈಸೇಷನ್ ವಿನೂತನ ಸೌಲಭ್ಯ ಕಲ್ಪಿಸಿದ್ದು,  ರೇಷ್ಮೆಯ ಶುದ್ಧತೆಯನ್ನು ಪರೀಕ್ಷಿಸುವುದಕ್ಕೆ ಬೆಂಗಳೂರಿನಲ್ಲಿ ರೇಷ್ಮೆ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದೆ. 
ರೇಷ್ಮೆ ಶುದ್ಧತೆಯನ್ನು ಪರೀಕ್ಷೆ ಮಾಡುವುದಕ್ಕಾಗಿ ಕೆಂದ್ರ ಸಿಲ್ಕ್ ಬೋರ್ಡ್ ನಿಂದ ಸಿಬ್ಬಂದಿಗಳಿಗೆ ತರಬೇತಿ ನೀಡಿ  ನೇಮಕ ಮಾಡಲಾಗೊದೆ.  ರೇಷ್ಮೆಯ ಬಟ್ಟೆಯಿಂದ ಗುಣಮಟ್ಟಕ್ಕೆ ಹಾನಿಯಾಗದಂತೆ ಒಂದು ಎಳೆಯನ್ನು ತೆಗೆದು  ಮೈಕ್ರೋಸ್ಕೋಪ್ ಹಾಗೂ ಫ್ಲೇಮ್ ಟೆಸ್ಟ್ ಗಳಿಗೆ ಒಳಪಡಿಸಲಾಗುತ್ತದೆ. 
ಚಿನ್ನದ ಗುಣಮಟ್ಟ, ಶುದ್ಧತೆಯ ವಿಷಯದಲ್ಲಿ ಯಾವ ರೀತಿ ಗ್ರಾಹಕರನ್ನು ವಂಚಿಸಲಾಗುತ್ತದೆಯೋ ಅದೇ ರೀತಿಯಲ್ಲಿ ರೇಷ್ಮೆಯ ಶುದ್ಧತೆಯ ವಿಷಯದಲ್ಲೂ ಗ್ರಾಹಕರು ವಂಚನೆಗೊಳಗಾಗುತ್ತಿರುವುದು ನಮ್ಮ ರಾಷ್ಟ್ರೀಯ ಎಕ್ಸ್ಪೋ ವೇಳೆ ಬಹಿರಂಗವಾಯಿತು. ಕೇವಲ 20 ರೂಪಾಯಿಗಳಿಗೆ ರೇಷ್ಮೆ ಶುದ್ಧತೆಯನ್ನು 10-15 ನಿಮಿಷಗಳಲ್ಲಿ ಪರೀಕ್ಷಿಸಿ ತಿಳಿದುಕೊಳ್ಳಬಹುದು ಎಂದು ಸೆಂಟ್ರಲ್ ಸಿಲ್ಕ್ ಬೋರ್ಡ್ ನ ಸಹಾಯಕ ನಿರ್ದೇಶಕ ಟಿ ಶಿವಕುಮಾರ್ ಹೇಳಿದ್ದಾರೆ. 
ಮಾ.08 ರಂದು ಸಿಲ್ಕ್ ಪರೀಕ್ಷಾ ಕೇಂದ್ರಗಳನ್ನು ಸಿಲ್ಕ್ ಬೋರ್ಡ್ ನ ಅಧ್ಯಕ್ಷ ಕೆಎಂ ಹನುಮಂತರಾಯಪ್ಪ ಉದ್ಘಾಟಿಸಿದ್ದು, ಬಿಟಿಎಂ ಲೇಔಟ್, ಚಿಕ್ಕಪೇಟೆ, ಕಬ್ಬನ್ ಪಾರ್ಕ್, ಟ್ಯಾಂಕ್ ರೋಡ್, ಜಯನಗರ, ಗಾಂಧಿ ನಗರ, ಎಂ.ಜಿ ರಸ್ತೆ, ಓಕಳಿಪುರಂ, ಆರ್ ಬಿ ರಸ್ತೆಗಳಲ್ಲಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com