ವಿಶ್ವದ ಅತ್ಯುತ್ತಮ ನಗರ ರ್ಯಾಂಕಿನಲ್ಲಿ ಬೆಂಗಳೂರಿಗೆ 149ನೇ ಸ್ಥಾನ

ಮರ್ಸರ್ ಕ್ವಾಲಿಟಿ ಆಫ್ ಲಿವಿಂಗ್ ವರದಿ ಪ್ರಕಾರ, ಭಾರತದಲ್ಲಿ ವಾಸಿಸುವ ಉತ್ತಮ ನಗರ ಎಂದು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು; ಮರ್ಸರ್ ಕ್ವಾಲಿಟಿ ಆಫ್ ಲಿವಿಂಗ್ ವರದಿ ಪ್ರಕಾರ, ಭಾರತದಲ್ಲಿ ವಾಸಿಸುವ ಉತ್ತಮ ನಗರ ಎಂದು 2011ರಲ್ಲಿ ಖ್ಯಾತಿ ಗಳಿಸಿದ್ದ ಬೆಂಗಳೂರು ನಗರ 141ನೇ ರ್ಯಾಂಕಿನಿಂದ 148ನೇ ರ್ಯಾಂಕಿಗೆ ಕಳೆದ ವರ್ಷ ಕುಸಿದಿದ್ದು, ಅದು ಈ ವರ್ಷ ಕೂಡ ಮುಂದುವರಿದಿದೆ.
ಬೆಂಗಳೂರು ಹೈದರಾಬಾದ್ ಮತ್ತು ಪುಣೆ ನಗರಗಳಿಗಿಂತ ಹಿಂದಿದ್ದು, ಚೆನ್ನೈ, ಮುಂಬೈ, ಕೋಲ್ಕತ್ತಾ ಮತ್ತು ದೆಹಲಿ ನಗರಗಳಿಗಿಂತ ಮುಂದಿದೆ.
ವಿಶ್ವಾದ್ಯಂತ 231 ನಗರಗಳಲ್ಲಿ ಅಧ್ಯಯನ ಮಾಡಿ ವರದಿ ತಯಾರಿಸಿದ ಮರ್ಸಿರ್, ಬೆಂಗಳೂರಿಗೆ 149ನೇ ರ್ಯಾಂಕ್ ನೀಡಿದೆ. ಹೈದರಾಬಾದ್ ಮತ್ತು ಪುಣೆ ನಗರಗಳು ಒಟ್ಟಾಗಿ 143ನೇ ರ್ಯಾಂಕ್ ಪಡೆದಿವೆ. 2018ರಲ್ಲಿ ಈ ಎರಡೂ ನಗರಗಳಿಗೆ 142ನೇ ರ್ಯಾಂಕ್ ಬಂದಿತ್ತು.
ವಿಶ್ವದ ಅತ್ಯುತ್ತಮ ನಗರದಲ್ಲಿ ಈ ವರ್ಷ ಆಸ್ಟ್ರಿಯಾದ ವಿಯೆನ್ನಾವಿದೆ. ಇರಾಕ್ ನ ಬಾಗ್ದಾದ್ ಸಿಟಿ 231 ಸ್ಥಾನ ಪಡೆದು ಕೊನೆಯ ಸ್ಥಾನದಲ್ಲಿದೆ. ಮನರಂಜನಾ ಸೌಲಭ್ಯಗಳು, ವಸತಿ, ಆರ್ಥಿಕ ಪರಿಸರ, ಗ್ರಾಹಕ ಸರಕುಗಳು ಮತ್ತು ಲಭ್ಯತೆ, ಸಾರ್ವಜನಿಕ ಸೇವೆಗಳು ಮತ್ತು ಸಾರಿಗೆಯನ್ನು ಆಧರಿಸಿ ನಗರಗಳಿಗೆ ರ್ಯಾಂಕ್ ನೀಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com