ಬೆಂಗಳೂರು: ಚಿತ್ರ ನಿರ್ಮಾಪಕರಿಗೆ ವಂಚಿಸಿದ ಕುಟುಂಬ ಬಂಧನ

ವಿಧಾನಸೌಧದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ವಿಡಿಯೋ ಹಾಗೂ ಪೋಟೋಗ್ರಪಿ ಮಾಡಲು ಗುತ್ತಿಗೆ ಕೊಡಿಸುವುದಾಗಿ ನಂಬಿಸಿ 8 ಲಕ್ಷ ರೂ ಹಣ ಪಡೆದು ವಂಚಿಸಿದ್ದ ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯ ನಟ ಹಾಗೂ ಆತನ ಕುಟುಂಬ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ವಿಧಾನಸೌಧದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ವಿಡಿಯೋ ಹಾಗೂ ಪೋಟೋಗ್ರಪಿ ಮಾಡಲು ಗುತ್ತಿಗೆ ಕೊಡಿಸುವುದಾಗಿ ನಂಬಿಸಿ 8 ಲಕ್ಷ ರೂ ಹಣ ಪಡೆದು ವಂಚಿಸಿದ್ದ ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯ  ನಟ ಹಾಗೂ ಆತನ ಕುಟುಂಬ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ

ರಾಜೇಶ್ (56) ಆತನ ಪತ್ನಿ ಸತ್ಯಭಾಮ (46)  ಮಗ ಅನುರಾಗ್  (27) ಬಂಧಿತ ಆರೋಪಿಗಳು. ಇವರೆಲ್ಲರೂ ಬಸವನಗುಡಿಯ ಕೆಆರ್ ರಸ್ತೆಯ ನಿವಾಸಿಗಳು ಎಂಬುದು ತಿಳಿದುಬಂದಿದೆ.

ಮಾರ್ಚ್ 5 ರಂದು ಅನುರಾಗ್ ತಾನೂ ಸ್ಮಾರ್ಟ್ ಸಿಟಿ ಯೋಜನೆಯ ಸಿಇಒ ಎಂದು  ಚಿತ್ರ ನಿರ್ಮಾಪಕ ದಂಪತಿಯರಾದ ಸುನೀತಾ ಮತ್ತು ಭಾಸ್ಕರ್ ಅವರುಗಳ ಬಳಿ ಪರಚಯಿಸಿಕೊಂಡಿದ್ದಾರೆ. ನಂತರ ಅವರಿಂದ 8 ಲಕ್ಷ ರೂಪಾಯಿ ಪಡೆದುಕೊಂಡಿದ್ದು, ಕೆಲದಿನಗಳ ಬಳಿಕ ಅವರಿಂದ ದೂರವಿರಲು ಪ್ರಯತ್ನಿಸಿದ್ದಾರೆ.

 ವಿಚಾರಣೆ ವೇಳೆಯಲ್ಲಿ ಆರೋಪಿಗಳು ತಪ್ಪೊಪ್ಪಿಕೊಂಡ ಬಳಿಕ ನ್ಯಾಯಾಲಯ ಕಸ್ಟಡಿಗೆ ಒಪ್ಪಿಸಲಾಗಿದೆ. 6 ದಿ ಕೊಟಾ ಸಿನಿಮಾ ನಿರ್ಮಾಣಕ್ಕಾಗಿ ಸುಲಭವಾಗಿ ಹಣ ಪಡೆಯಲು ಈ ರೀತಿ ಮಾಡಿದ್ದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com