ಸಾಂದರ್ಭಿಕ ಚಿತ್ರ
ರಾಜ್ಯ
ಆರ್ ಟಿಇ ಮರುಪಾವತಿ; ಖಾಸಗಿ ಶಾಲೆಗಳಿಗೆ 600 ಕೋಟಿ ರೂ ಪಾವತಿ ಬಾಕಿ ಉಳಿಸಿಕೊಂಡಿರುವ ರಾಜ್ಯ ಸರ್ಕಾರ!
ಹಣಕಾಸು ವರ್ಷ ಮುಗಿಯುತ್ತಾ ಬಂದಿದ್ದು, ಶಿಕ್ಷಣ ಹಕ್ಕು ಕಾಯ್ದೆಯಡಿ ರಾಜ್ಯ ಸರ್ಕಾರ ಇನ್ನೂ ಹಣವನ್ನು ...
ಬೆಂಗಳೂರು; ಹಣಕಾಸು ವರ್ಷ ಮುಗಿಯುತ್ತಾ ಬಂದಿದ್ದು, ಶಿಕ್ಷಣ ಹಕ್ಕು ಕಾಯ್ದೆಯಡಿ ರಾಜ್ಯ ಸರ್ಕಾರ ಇನ್ನೂ ಹಣವನ್ನು ಮರುಪಾವತಿ ಮಾಡುವುದರಿಂದ ಈ ಹೊತ್ತಿನಲ್ಲಿ ರಾಜ್ಯದ ಖಾಸಗಿ ಶಾಲೆಗಳು ಗೊಂದಲದಲ್ಲಿಯೇ ಇವೆ.
ಇದರಿಂದ ಖಾಸಗಿ ಶಾಲೆಗಳಿಗೆ ತೊಂದರೆಯಾಗಿದ್ದು ಇನ್ನೂ ಆಡಿಟ್ ಪ್ರಕ್ರಿಯೆಯನ್ನು ಮುಗಿಸಿಲ್ಲ. ಶಾಲೆಯಿಂದ ಸಿಕ್ಕಿರುವ ಅಂಕಿಅಂಶ ಪ್ರಕಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ರಾಜ್ಯ ಇಲಾಖೆ ಖಾಸಗಿ ಶಾಲೆಗಳಿಗೆ ಸುಮಾರು 600 ಕೋಟಿ ರೂಪಾಯಿ ಹಣ ನೀಡಲು ಬಾಕಿಯಿದೆ. ಕಳೆದ ಎರಡು ವರ್ಷಗಳಿಂದ ಬಹುತೇಕ ಶಾಲೆಗಳು ಮರುಪಾವತಿ ಹಣ ಸಿಗಬೇಕಿದೆ. ಕೆಲವು ಶಾಲೆಗಳು 2017-18ನೇ ಸಾಲಿನ ಹಣ ಪಡೆದಿವೆ ಆದರೆ 2018-19ನೇ ಸಾಲಿನ ಹಣ ಬಂದಿಲ್ಲ ಎಂದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಾಲೆಗಳ ವ್ಯವಸ್ಥಾಪಕ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ ಶಶಿ ಕುಮಾರ್ ಹೇಳಿದರು.
ರಾಜ್ಯದಲ್ಲಿ ಸುಮಾರು 12 ಸಾವಿರ ಖಾಸಗಿ ಶಾಲೆಗಳಿದ್ದು ಮರುಪಾವತಿ ಹಣಕ್ಕೆ ಕಾಯುತ್ತಿವೆ. ಆರ್ ಟಿಇಯಡಿ ದಾಖಲಾಗುವ ಪ್ರತಿ ಮಗುವಿಗೆ ಎಷ್ಟು ಖರ್ಚಾಗುತ್ತದೆ ಎಂದು ಘೋಷಿಸದಿರುವ ಬಗ್ಗೆ ಶಿಕ್ಷಣ ಇಲಾಖೆ ನ್ಯಾಯಾಂಗ ನಿಂದನೆ ನೊಟೀಸ್ ಪಡೆದಿದೆ. ಇದರ ಹೊರತಾಗಿಯೂ ಮರುಪಾವತಿ ಬಗ್ಗೆ ಇಲಾಖೆ ತಲೆಕೆಡಿಸಿಕೊಂಡಿಲ್ಲ ಎನ್ನುತ್ತಾರೆ ಶಶಿ ಕುಮಾರ್.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ