ಇಂದು ದಾಳಿ ಮಾಡಿದ ಇದೇ ಅಧಿಕಾರಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಆಸ್ತಿ ಮೇಲೆ ದಾಳಿಯಾದ 24 ಗಂಟೆಗಳಲ್ಲಿಯೇ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಹಾಗಾದರೆ ಇದರ ಅರ್ಥವೇನು, ಕಾಯುತ್ತಿರಿ, ಇದಕ್ಕೆಲ್ಲ ಸಮಯ ಬರುತ್ತದೆ. ಇನ್ನು ಮುಂದೆ ಬಿಜೆಪಿಯ ಬಂಡವಾಳ ಹೊರಗೆ ಬರುತ್ತದೆ. ದೇವೇಗೌಡ ಕುಟುಂಬ ಇಂತಹ ಹಲವು ಐಟಿ, ಇಡಿ ಮತ್ತು ಸಿಬಿಐ ದಾಳಿಗಳನ್ನು ಎದುರಿಸಿದೆ. ಎನ್ ಡಿಎ ಮತ್ತು ಪ್ರಧಾನಿ ಮೋದಿಯವರು ಇಂತಹ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ನಾಳೆ ದಿನ ಐಟಿ ಮುಖ್ಯಸ್ಥನನ್ನು ಬಿಜೆಪಿ ಸದಸ್ಯನಾಗಿ ಮಾಡಿ ಸಂಸತ್ತು ಸದಸ್ಯನಾಗಿ ಮಾಡಿದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ ಎಂದು ರೇವಣ್ಣ ವ್ಯಂಗ್ಯವಾಗಿ ಹೇಳಿದರು.