ಮೆಟ್ರೋ ಸ್ಮಾರ್ಟ್ ಕಾರ್ಡ್ ನಲ್ಲಿ ಕನಿಷ್ಠ ಬ್ಯಾಲೆನ್ಸ್ 50 ರೂ. ಕಡ್ಡಾಯ: ಪ್ರಯಾಣಿಕರ ಅಸಮಾಧಾನ

ಮೆಟ್ರೋ ಸ್ಮಾರ್ಟ್ ಕಾರ್ಡ್ ನಲ್ಲಿ ಕನಿಷ್ಠ 50 ರೂಪಾಯಿ ಇರಲೇಬೇಕೆಂದು ಕಡ್ಡಾಯಮಾಡಿರುವುದಕ್ಕೆ ಪ್ರಯಾಣಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಮೆಟ್ರೋ ಸ್ಮಾರ್ಟ್ ಕಾರ್ಡ್
ಮೆಟ್ರೋ ಸ್ಮಾರ್ಟ್ ಕಾರ್ಡ್

ಬೆಂಗಳೂರು: ಮೆಟ್ರೋ ಸ್ಮಾರ್ಟ್ ಕಾರ್ಡ್ ನಲ್ಲಿ ಕನಿಷ್ಠ 50 ರೂಪಾಯಿ ಇರಲೇಬೇಕೆಂದು  ಕಡ್ಡಾಯಮಾಡಿರುವುದಕ್ಕೆ ಪ್ರಯಾಣಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಪ್ರತಿನಿತ್ಯ ರೈಲಿನಲ್ಲಿ ಸಂಚರಿಸುವ ಕಚೇರಿ ಸಿಬ್ಬಂದಿಗಳು ತಿಂಗಳಿಗೊಮ್ಮೆ ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಮಾಡಿಸುವುದರಿಂದ ಅಷ್ಟೇನೂ ಪರಿಣಾಮ ಬೀರುವುದಿಲ್ಲ. ಆದರೆ, ಪ್ರತಿನಿತ್ಯ ಸಂಚರಿಸದ ಪ್ರಯಾಣಿಕರು ಹೊಸ ಕ್ರಮದಿಂದಾಗಿ ತೀವ್ರ ತೊಂದರೆ ಎದುರಿಸುವಂತಾಗಿದೆ.

ಹೊಸ ನಿಯಮ  ಬೆಂಗಳೂರಿನ ಎಲ್ಲಾ 40 ಮೆಟ್ರೋ ನಿಲ್ದಾಣಗಳಲ್ಲಿ ಗುರುವಾರದಿಂದ ಜಾರಿಗೆ ಬಂದಿದ್ದು,  ಸ್ಮಾರ್ಟ್ ಕಾರ್ಡ್ ನಲ್ಲಿ  ( ವಾರ್ಷಿಕ ಕಾರ್ಡ್ )   ಒಮ್ಮೆ ರೈಲಿನಲ್ಲಿ ಸಂಚರಿಸಲು ಶೇ, 15 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಬಹುತೇಕ ಮೆಟ್ರೋ ಪ್ರಯಾಣಿಕರು ಟೋಕನ್ ಪಡೆದು ಸಂಚರಿಸುತ್ತಾರೆ.

ಪ್ರಾಜೆಕ್ಟ್ ಎಂಜಿನಿಯರ್ ಎಂ ಕಾವ್ಯ ಎಂಬವರ ಸ್ಮಾರ್ಟ್ ಕಾರ್ಡ್ ನಲ್ಲಿ ಕನಿಷ್ಠ 50 ರೂಪಾಯಿ ಇಲ್ಲದಿದುದ್ದರಿಂದ  ಎಎಫ್ ಸಿ ಗೇಟ್ ಗಳು ತೆರೆಯಲೇ ಇಲ್ಲ. ಇದರಿಂದಾಗಿ ಭಾರೀ ಜನಸಂದಣಿಯಿಂದ ಕೂಡಿದ್ದ ಕ್ಯೂ ನಲ್ಲಿ ನಿಂತು ಕೊನೆಗೆ ರೀಚಾರ್ಜ್ ಮಾಡಿಸಿಕೊಳ್ಳಬೇಕಾಯಿತು.

ಈ ಹಿಂದೆ ಜೆಪಿ ನಗರದಿಂದ ಕಬ್ಬನ್ ಪಾರ್ಕ್ ವರೆಗೂ ಒಂದು ಬಾರಿ ಸಂಚರಿಸಲು 29 ರೂ. ವೆಚ್ಚವಾಗುತಿತ್ತು. ಈಗ ಸ್ಮಾರ್ಟ್ ಕಾರ್ಡ್ ನಲ್ಲಿ 40 ರೂ. ಇದ್ದರೂ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಇದು ಅಸಮರ್ಪಕ ಎನ್ನಿಸುತ್ತಿದೆ ಎಂದು   ಅಸಮಾಧಾನ ವ್ಯಕ್ತಪಡಿಸಿದರು.

ಬ್ಯಾಂಕ್ ಮ್ಯಾನೇಜರ್ ಎಸ್ . ರಾಜೇಂದರ್ ಕೂಡಾ  ಮೆಟ್ರೋ ಹೊಸ ನಿಯಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಡಿಜಿಟಲ್ ಇಂಡಿಯಾ ಇಲ್ಲಿ ವಿರುದ್ಧವಾಗಿದ್ದು,  ಇದು ಒಳ್ಳೇಯ ಕ್ರಮವಲ್ಲ ಎಂದರು.

ವಿಧಾನಸೌಧ ಉದ್ಯೋಗಿ ಶರಣ್ಯ ಪಿ. ಹಾಗೂ ಖಾಸಗಿ ಕಂಪನಿ ಉದ್ಯೋಗಿ ಅನುಪ್ ಕೂಡಾ ದಿಢೀರನೇ ಹೊಸ ನಿಯಮ ಜಾರಿಗೊಳಿಸುವ ಮೂಲಕ ಪ್ರಯಾಣಿಕರಿಗೆ ತೊಂದರೆ ಉಂಟುಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಮೆಟ್ರೋ ಮೇಲ್ವಿಚಾರಣೆ ಮತ್ತು ಕಾರ್ಯಾಚರಣೆ ವಿಭಾಗದ  ಕಾರ್ಯಾಕಾರಿ ನಿರ್ದೇಶಕ  ಎಎಸ್ ಶಂಕರ್, ಸ್ಮಾರ್ಟ್ ಕಾರ್ಡ್ ಗಳಲ್ಲಿ ಕನಿಷ್ಠ 50 ರೂ. ಇರಬೇಕಾದದ್ದು ಕಡ್ಡಾಯ ಎಂದು  ಎರಡು ತಿಂಗಳ ಹಿಂದೆಯೇ ತಿಳಿಸಲಾಗಿತ್ತು. ಇದರಿಂದಾಗಿ ಬುಧವಾರದಿಂದ ಹೊಸ ನಿಯಮ ಜಾರಿಗೊಳಿಸಿರುವುದಾಗಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com