ಅಮೆರಿಕಾದಲ್ಲಿ ರಾಯಚೂರು ವೈದ್ಯನ ನಿಗೂಢ ಸಾವು; ಮೃತ ದೇಹ ಶೀಘ್ರ ತಾಯ್ನಾಡಿಗೆ
ರಾಜ್ಯ
ಅಮೆರಿಕಾದಲ್ಲಿ ರಾಯಚೂರು ವೈದ್ಯನ ನಿಗೂಢ ಸಾವು; ಮೃತ ದೇಹ ಶೀಘ್ರ ತಾಯ್ನಾಡಿಗೆ
ಅಮೆರಿಕಾದ ನ್ಯೂಜರ್ಸಿಯಲ್ಲಿ ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ರಾಯಚೂರು ಮೂಲದ ವೈದ್ಯನ ಮೃತದೇಹ ಇನ್ನು ಎರಡು ದಿನದೊಳಗೆ ಭಾರತ ತಲುಪಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ
ರಾಯಚೂರು: ಅಮೆರಿಕಾದ ನ್ಯೂಜರ್ಸಿಯಲ್ಲಿ ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ರಾಯಚೂರು ಮೂಲದ ವೈದ್ಯನ ಮೃತದೇಹ ಇನ್ನು ಎರಡು ದಿನದೊಳಗೆ ಭಾರತ ತಲುಪಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ ಕಿಶೋರ್ ಬಾಬು ಶನಿವಾರ ತಿಳಿಸಿದ್ದಾರೆ.
ಮೃತ ವೈದ್ಯರ ಕುಟುಂಬ ಸದಸ್ಯರೊಂದಿಗೆ ಉತ್ತರ ಅಮೆರಿಕಾ ತೆಲುಗು ಸಂಘ, ಭಾರತೀಯ ರಾಯಬಾರಿ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದು, ಆಸ್ಪತ್ರೆ ಅಧಿಕಾರಿಗಳು ಔಪಚಾರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಮೃತ ದೇಹವನ್ನು ಆದಷ್ಟು ಶೀಘ್ರ ಭಾರತಕ್ಕೆ ಕಳುಹಿಸಲಿದ್ದಾರೆ. ವೈದ್ಯಕೀಯ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ 28 ವರ್ಷದ ವೈದ್ಯರ ಸಾವಿಗೆ ಕಾರಣ ಏನು ಎಂಬುದು ಗೊತ್ತಾಗಬೇಕಿದೆ. ಪೊಲೀಸರು ಕುಟುಂಬ ಸದಸ್ಯರೊಂದಿಗೆ ಸಂಪರ್ಕಿಸಿದ್ದು, ಸಾಧ್ಯವಿರುವ ಎಲ್ಲ ನೆರವು ಕಲ್ಪಿಸುವುದಾಗಿ ಹೇಳಿದ್ದಾರೆ.
ಮೃತಪಟ್ಟ ವೈದ್ಯರನ್ನು ಸಿಂಧನೂರಿನ ನಂದಿಗಾಂ ಮಣಿದೀಪ್ ( 28) ಎಂದು ಗುರುತಿಸಲಾಗಿದ್ದು, ಇದೇ 28ರ ಸಂಜೆ ನ್ಯೂಜೆರ್ಸಿಯ ಸೇಂಟ್. ಪೀಟರ್ಸ್ ವಿಶ್ವವಿದ್ಯಾಲಯದ ಆಸ್ಪತ್ರೆ ಕ್ಯಾಂಪಸ್ ನಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಘಟನೆ ಕುರಿತು ಕುಟುಂಬ ಸದಸ್ಯರಿಗೆ ಅಂದು ರಾತ್ರಿಯೇ ಮಾಹಿತಿ ನೀಡಲಾಗಿದೆ.
ಮಣಿದೀಪ್ ಮಣಿಲಾಲ್ ನ ಕಸ್ತೂರಿಬಾ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪೂರ್ಣಗೊಳಿಸಿದ್ದರು. ಮೂರು ವರ್ಷಗಳ ಸ್ನಾತಕೋತ್ತರ ಪದವಿ ವ್ಯಾಸಂಗ ನಡೆಸಲು ಮೂರು ವರ್ಷಗಳ ಹಿಂದೆ ನ್ಯೂಜರ್ಸಿಗೆ ತೆರಳಿದ್ದರು. ಪ್ರಸ್ತುತ ಅವರು ಸೇಂಟ್ ಪೀಟರ್ಸ್ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ