ಹಿರಿಯ ಪತ್ರಕರ್ತ ಹೇಮಂತ್ ಕುಮಾರ್ ಬಂಧನ ಬಿಜೆಪಿ ವಿರುದ್ಧದ ಕುತಂತ್ರ: ಶೋಭಾ ಕರಂದ್ಲಾಜೆ

ಬಂಧಿತ ಪತ್ರಕರ್ತ ಎಸ್ ಎ ಹೇಮಂತ್ ಕುಮಾರ್ ಅವರನ್ನು ಭೇಟಿ ಮಾಡಲು ಉಡುಪಿ-ಚಿಕ್ಕಮಗಳೂರು...
ಪತ್ರಕರ್ತ ಹೇಮಂತ್ ಕುಮಾರ್ ಮತ್ತು ಸಂಸದೆ ಶೋಭಾ ಕರಂದ್ಲಾಜೆ
ಪತ್ರಕರ್ತ ಹೇಮಂತ್ ಕುಮಾರ್ ಮತ್ತು ಸಂಸದೆ ಶೋಭಾ ಕರಂದ್ಲಾಜೆ
ಬೆಂಗಳೂರು: ಬಂಧಿತ ಪತ್ರಕರ್ತ ಎಸ್ ಎ ಹೇಮಂತ್ ಕುಮಾರ್ ಅವರನ್ನು ಭೇಟಿ ಮಾಡಲು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಬೆಂಗಳೂರಿನ ಪ್ಯಾಲೆಸ್ ರಸ್ತೆಯಲ್ಲಿರುವ ಕಾರ್ಲಟೊನ್ ಹೌಸ್ ನಲ್ಲಿರುವ ಸಿಐಡಿ ಕಚೇರಿಗೆ ಭೇಟಿ ನೀಡಿದರು.
ಬಿಜೆಪಿ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿದ್ದು ಬಿಜೆಪಿ ಹೇಮಂತ್ ಕುಮಾರ್ ಅವರ ಪರವಾಗಿದೆ ಎಂದು ಪೊಲೀಸರು ವಿರುದ್ಧವಾಗಿದ್ದಾರೆ. ಪತ್ರ ಬರೆದಿದ್ದು ಹೇಮಂತ್ ಕುಮಾರ್ ಅಲ್ಲ, ಪತ್ರ ಬರೆದವರು ಯಾರೆಂದು ಪೊಲೀಸರು ಕಂಡುಹಿಡಿಯಬೇಕು. ಬಿಜೆಪಿ ವಿರುದ್ಧ ಸರ್ಕಾರ ಏಕೆ ಹಗೆತನ ಸಾಧಿಸುತ್ತಿದೆ? ಅದು ದೂರುದಾರರು ಗೃಹ ಸಚಿವ ಎಂ ಬಿ ಪಾಟೀಲ್ ಎಂಬ ಕಾರಣಕ್ಕೇ? ಇದು ಕೇವಲ ಹಗೆತನ ಸಾಧಿಸುವ ರಾಜಕೀಯ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು.
ರಾಜ್ಯದಲ್ಲಿ ಕಳೆದ 23ರಂದು ಎರಡನೇ ಸುತ್ತಿನ ಮತದಾನ ಮುಗಿದ ನಂತರ ಗೃಹ ಸಚಿವ ಎಂ ಬಿ ಪಾಟೀಲ್ ಅವರು ಬರೆದಿದ್ದಾರೆ ಎನ್ನಲಾದ ನಕಲಿ ಪತ್ರವನ್ನು ಹಂಚಿದ್ದು ಹೇಮಂತ್ ಕುಮಾರ್ ಎಂದು ಬಂಧಿಸಲಾಗಿದೆ. ಗೃಹ ಸಚಿವ ಎಂ ಬಿ ಪಾಟೀಲ್ ರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಬರೆದ ಪತ್ರವದು ಎಂದು ಉಲ್ಲೇಖವಾಗಿದೆ. ಪೋಸ್ಟ್ ಕಾರ್ಡ್ ನ್ಯೂಸ್ ವೆಬ್ ಸೈಟ್ ನಲ್ಲಿ ಮಹೇಶ್ ವಿಕ್ರಮ್ ಹೆಗ್ಡೆ ಅವರ ಹೆಸರು ಬಂದು ಬಂಧನದ ನಂತರ ಹೇಮಂತ್ ಕುಮಾರ್ ಅವರನ್ನು ಬಂಧಿಸಲಾಗಿದೆ.
ಹೇಮಂತ್ ಕುಮಾರ್ ಜಾಮೀನು ಅರ್ಜಿ ವಿಚಾರಣೆ ನಾಡಿದ್ದು ಗುರುವಾರ ನಡೆಯಲಿದೆ. ಈ ಪ್ರಕರಣದಲ್ಲಿ ಪೊಲೀಸರ ಕೈವಾಡವಿದೆ ಎಂದು ಶೋಭಾ ಕರಂದ್ಲಾಜೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಆರೋಪಿಸಿದ್ದಾರೆ. ಪ್ರಧಾನಿ ಅಥವಾ ರಾಷ್ಟ್ರಪತಿಗಳಿಗೆ ದೂರು ಸಲ್ಲಿಸುತ್ತೀರಾ ಎಂದು ಕೇಳಿದ್ದಕ್ಕೆ ಪ್ರತಿಯೊಬ್ಬರೂ ಎಲೆಕ್ಷನ್ ನಲ್ಲಿ ಬ್ಯುಸಿಯಾಗಿದ್ದಾರೆ, ಕಾದು ನೋಡುತ್ತೇನೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com